ಭಾರತೀಯ ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ 2025: 32,000 ಹುದ್ದೆಗಳ ಭರ್ತಿ – ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ
ಭಾರತೀಯ ರೈಲ್ವೆ ಇಲಾಖೆ ತನ್ನ ಗ್ರೂಪ್ ಡಿ ವಿಭಾಗದಲ್ಲಿ 32,000 ಹುದ್ದೆಗಳ ಭರ್ತಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆರಂಭಿಕ ವೇತನ ₹18,000/- ಆಗಿದ್ದು, ಅರ್ಜಿ ಸ್ವೀಕಾರ 2025ರ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.
ಹುದ್ದೆಗಳ ವಿವರ:
ಹುದ್ದೆಯ ಹೆಸರು |
ಹುದ್ದೆಗಳ ಸಂಖ್ಯೆ |
ಟ್ರ್ಯಾಕ್ ಮೆಂಟೇನರ್ ಗ್ರೇಡ್ IV |
13,187 |
ಪಾಯಿಂಟ್‌ಸ್ಮನ್ |
5,058 |
ತಾಂತ್ರಿಕ ವಿಭಾಗದ ಸಹಾಯಕ |
3,077 |
ಅಸಿಸ್ಟೆಂಟ್ ಟ್ರ್ಯಾಕ್ ಮಿಷನ್ |
799 |
ಅಸಿಸ್ಟೆಂಟ್ ಬ್ರಿಡ್ಜ್ |
301 |
ಅಸಿಸ್ಟೆಂಟ್ ಪಿ-ವೇ |
247 |
ಅಸಿಸ್ಟೆಂಟ್ (C&W) |
2,587 |
ಅಸಿಸ್ಟೆಂಟ್ (S&T) |
2,012 |
ಅಸಿಸ್ಟೆಂಟ್ TRD |
1,381 |
ಅಸಿಸ್ಟೆಂಟ್ ಆಪರೇಷನ್ಸ್ |
744 |
ಅಸಿಸ್ಟೆಂಟ್ ಲೋಕೋ ಶೆಡ್ |
1,370 |
ಅಸಿಸ್ಟೆಂಟ್ AC & TC |
1,041 |
ಅಸಿಸ್ಟೆಂಟ್ AC & TC (ಕಾರ್ಯಾಗಾರ) |
624 |
ಅಸಿಸ್ಟೆಂಟ್ (ಕಾರ್ಯಾಗಾರ) |
3,077 |
ಪ್ರಮುಖ ದಿನಾಂಕಗಳು:
- ಶಾರ್ಟ್ ನೋಟಿಫಿಕೇಶನ್ ಬಿಡುಗಡೆ: ಡಿಸೆಂಬರ್ 24, 2024
- ಅಪ್ಲಿಕೇಶನ್ ಸ್ವೀಕಾರ ಆರಂಭ: ಜನವರಿ 23, 2025
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಫೆಬ್ರವರಿ 22, 2025 (ರಾತ್ರಿ 11:59 ಗಂಟೆವರೆಗೆ)
- ಪರೀಕ್ಷೆಯ ದಿನಾಂಕ: ನಂತರ ಪ್ರಕಟಿಸಲಾಗುತ್ತದೆ
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗ: ₹500 (₹400 ರೀಫಂಡ್)
ವಿಶೇಷ ಚೇತನರು, ಮಹಿಳಾ, ತೃತೀಯ ಲಿಂಗ, ಮಾಜಿ ಸೈನಿಕರು, ಎಸ್‌ಸಿ, ಎಸ್‌ಟಿ: ₹250 (ಬ್ಯಾಂಕ್ ಚಾರ್ಜ್ ಹೊರತುಪಡಿಸಿ, ಉಳಿದ ಹಣ ರೀಫಂಡ್)
ವಿದ್ಯಾರ್ಹತೆ:
ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪಾಸಾಗಿರಬೇಕು ಅಥವಾ ಎನ್‌ಸಿವಿಟಿ ಅಥವಾ ಐಟಿಐಯಿಂದ ಎನ್‌ಇಸಿ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ:
ಕನಿಷ್ಠ: 18 ವರ್ಷ
ಗರಿಷ್ಠ: 36 ವರ್ಷ (2020ರ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ವರ್ಗಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ)
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದೈಹಿಕ ಸಾಮರ್ಥ್ಯ ಪರೀಕ್ಷೆ (PET)
- ಮೂಲ ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:
1. ಅಧಿಕೃತ ವೆಬ್‌ಸೈಟ್ www.rrbbnc.gov.in ಗೆ ಭೇಟಿ ನೀಡಿ.
2. 'ಅರ್ಜಿ ಸಲ್ಲಿಸಿ' ವಿಭಾಗದಲ್ಲಿ ಸಂಬಂಧಿತ ಹುದ್ದೆಯ ಲಿಂಕ್ ಕ್ಲಿಕ್ ಮಾಡಿ.
3. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
4. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
5. ಅರ್ಜಿಯನ್ನು ಸಲ್ಲಿಸಿ, ಭವಿಷ್ಯಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
ಸೂಚನೆ:
ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಎಲ್ಲಾ ಅರ್ಹತೆಗಳನ್ನು ಪರಿಶೀಲಿಸಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ www.rrbbnc.gov.in ಗೆ ಭೇಟಿ ನೀಡಿ.
ಈ ಅವಕಾಶವನ್ನು ಬಳಸಿಕೊಂಡು, ಭಾರತೀಯ ರೈಲ್ವೆ ಇಲಾಖೆಯಲ್ಲಿ ನಿಮ್ಮ ವೃತ್ತಿಜೀವನವನ್ನು ಆರಂಭಿಸಿ.
No comments:
Post a Comment