KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು
"ನಿಮ್ಮ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಗತ್ಯವಾದ ತಾಜಾ ಮಾಹಿತಿಯನ್ನು ಇಲ್ಲಿ ಪಡೆಯಿರಿ. ಹೊಸ ಘಟನಾವಳಿ, ಸಿದ್ಧಾಂತಗಳು, ಮತ್ತು ವಿಶ್ಲೇಷಣೆಗಳೊಂದಿಗೆ ತಯಾರಿಗೊಳ್ಳಿ. ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯನ್ನು ಸೇರಿದಂತೆ ವಿಶೇಷವಾದ ವಿಷಯಾಧಾರಿತ ಲೇಖನಗಳು, ಟಿಪ್ಸ್, ಮತ್ತು ಉಪಾಯಗಳನ್ನು ಹೊಂದಿದ್ದು, ನಿಮ್ಮ ಯಶಸ್ಸಿಗೆ ದಾರಿಕೊಡುತ್ತದೆ. ಸುಲಭ ಮತ್ತು ಸ್ಪಷ್ಟ ಭಾಷೆಯಲ್ಲಿ ನಿರೂಪಣೆ, ಓದುಗರಿಗೆ ಅನುಕೂಲವಾಗುವ ರೀತಿಯ ಸಂಪೂರ್ಣ ಮಾರ್ಗದರ್ಶಕವಿದೆ." KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು.
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು:
1. ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಹೇರಿಕೆಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ?
1. ಮೊಟ್ಟಮೊದಲ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಬಾಹ್ಯ ಆಕ್ರಮಣದ ಕಾರಣದಿಂದ ಘೋಷಿಸಲಾಯಿತು.
2. ಅರುಣಾಚಲ ಪ್ರದೇಶದ ಮೇಲೆ ಚೀನಿಯರು ದಾಳಿ ಮಾಡಿದ ಸಂದರ್ಭದಲ್ಲಿ ಮೊದಲ ತುರ್ತುಪರಿಸ್ಥಿತಿಯನ್ನು ಹೇರಲಾಯಿತು.
3. ಮೊದಲ ತುರ್ತು ಪರಿಸ್ಥಿತಿ ಮೂರು ವರ್ಷಗಳ ಅವಧಿಗೆ ಅಸ್ತಿತ್ವದಲ್ಲಿತ್ತು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 3 ಮಾತ್ರ
ಡಿ. 1, 2 ಮತ್ತು 3
ಉತ್ತರ : ಡಿ
2. 39ನೇ ಸಂವಿಧಾನಾತ್ಮಕ ತಿದ್ದುಪಡಿ ಕೆಳಗಿನ ಯಾವ ಸಂವಿಧಾನಾತ್ಮಕ ಹುದ್ದೆಗಳ ಬಿಕ್ಕಟ್ಟುಗಳನ್ನು ನ್ಯಾಯಾಂಗದ ಪರಾಮರ್ಶೆಯಿಂದ ಹೊರಗಿಡಲಾಯಿತು?
1. ರಾಷ್ಟ್ರಪತಿಗಳ ಹುದ್ದೆ ಸಂಬಂಧಿತ ಬಿಕ್ಕಟ್ಟು.
2. ಉಪರಾಷ್ಟ್ರಪತಿ ಹುದ್ದೆ ಸಂಬಂಧಿತ ಬಿಕ್ಕಟ್ಟು.
3. ಪ್ರಧಾನ ಮಂತ್ರಿಗಳ ಹುದ್ದೆ ಸಂಬಂಧಿತ ಬಿಕ್ಕಟ್ಟು.
4. ಮುಖ್ಯಮಂತ್ರಿಗಳ ಹುದ್ದೆ ಸಂಬಂಧಿತ ಬಿಕ್ಕಟ್ಟು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1, 2 ಮತ್ತು 3
ಬಿ. 1 ಮತ್ತು 2
ಸಿ. 1 ಮತ್ತು 3
ಡಿ. 2 ಮತ್ತು 3
ಉತ್ತರ : ಎ
3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಪತಂಜಲಿಯನ್ನು ಯೋಗ ತತ್ತ್ವಶಾಸ್ತ್ರದ ಸ್ಥಾಪಕರೆಂದು ಕರೆಯುತ್ತಾರೆ.
ಬಿ. ಪತಂಜಲಿ ಋಷಿಯು ಯೋಗ ಸೂತ್ರ ಎಂಬ ಗ್ರಂಥವನ್ನು ಬರೆದಿದ್ದಾರೆ.
ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
4 ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಪ್ರಾಚೀನ ವೈದ್ಯಕೀಯ ಪದ್ಧತಿಗಳ ಆಳವಾದ ಜ್ಞಾನವನ್ನು ಪುನರುಜ್ಜೀವನಗೊಳಿಸುವ ದೃಷ್ಠಿಯಿಂದ 1995ರಲ್ಲಿ ಭಾರತೀಯ ಔಷಧ ಮತ್ತು ಹೋಮಿಯೋಪಥಿ ಇಲಾಖೆಯನ್ನು ರಚಿಸಲಾಯಿತು.
ಬಿ. ಭಾರತ ಸರ್ಕಾರ 2020ರಲ್ಲಿ ಆಯುಷ್ ಸಚಿವಾಲಯವನ್ನು ರಚಿಸಿದೆ.
ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಎ
5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಔಷಧೀಯ ಸಸ್ಯಗಳ ವಲಯವನ್ನು ಉತ್ತೇಜಿಸಲು, ಭಾರತ ಸರ್ಕಾರವು 24 ನವೆಂಬರ್ 2000 ರಂದು ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯನ್ನು ಸ್ಥಾಪಿಸಿದೆ.
ಬಿ. ಪ್ರಸ್ತುತ, ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯು ಆಯುಷ್ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ) ಸಚಿವಾಲಯದಲ್ಲಿದೆ.
ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
6. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಜೂನ್ 19ರ, ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವನ್ನು ಅಧಿಕೃತವಾಗಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಂಗೀಕರಿಸಿದೆ.
ಬಿ. 2024 ರ ವಿಶ್ವ ಸಿಕಲ್ ಸೆಲ್ ದಿನದ ಥೀಮ್, ‘Hope Through Progress: Advancing Global Sickle Cell Care & Treatment’. ಆಗಿದೆ.
ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
7. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಜೂನ್ 20 ರಂದು ಪ್ರಪಂಚದಾದ್ಯಂತ ನಿರಾಶ್ರಿತರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತದೆ.
ಬಿ. 2024ರ ವಿಶ್ವ ನಿರಾಶ್ರಿತರ ದಿನದ ಥೀಮ್,'For a World Where Refugees Are Welcomed.' ಆಗಿದೆ.
ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ
8. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಭಾರತೀಯ ನೇವಲ್ ಹೈಡ್ರೋಗ್ರಾಫಿಕ್ ಇಲಾಖೆಯು ಭಾರತದಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಅಥವಾ ಹೈಡ್ರೋಗ್ರಾಫಿಕ್ ಚಾರ್ಟ್ ಅಥವಾ ನಾಟಿಕಲ್ ಚಾರ್ಟ್(Nautical Charting) ಗಳನ್ನು ಪ್ರಕಟಿಸುವ ನೋಡಲ್ ಏಜೆನ್ಸಿಯಾಗಿದೆ.
ಬಿ. ಕೇರಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರೋಗ್ರಫಿ ಸಂಸ್ಥೆಯು ಭಾರತದಲ್ಲಿ ಹೈಡ್ರೋಗ್ರಫಿಯಲ್ಲಿ ತರಬೇತಿ ನೀಡುವ ಕೇಂದ್ರವಾಗಿದೆ.
ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಎ
9. ಕೆಳಗಿನ ಯಾವ ಕಾರಣಗಳಿಂದ ಜರ್ಮನಿಯಲ್ಲಿ ನಾಜಿ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು?
1. ವರ್ಸೈಲ್ಸ್ ಒಪ್ಪಂದದಲ್ಲಿ ಜರ್ಮನಿಯ ಮೇಲೆ ವಿಧಿಸಿದ ನಿರ್ಬಂಧಗಳು.
2. 1930 ರ ಆರ್ಥಿಕ ಮುಗ್ಗಟ್ಟು.
3. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ನಿರಂಕುಶ ನಾಯಕತ್ವಗಳು ಅಧಿಕಾರದ ಗದ್ದುಗೆಯನ್ನು ಏರಿದವು.
ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.
ಎ. 1, 2 ಮತ್ತು 3
ಬಿ. 1 ಮತ್ತು 2
ಸಿ. 1 ಮತ್ತು 3
ಡಿ. 2 ಮತ್ತು 3
ಉತ್ತರ : ಎ
10. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸುದ್ದಿಯಲ್ಲಿದ್ದ ‘Auschwitz’ ಪ್ರದೇಶ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
ಎ. ಜರ್ಮನಿ
ಬಿ. ಹಂಗರಿ.
ಸಿ. ಪೋಲೆಂಡ್
ಡಿ. ಇಟಲಿ
ಉತ್ತರ : ಸಿ
No comments:
Post a Comment