Type Here to Get Search Results !

10th ಭಾರತಕ್ಕೆ ಯುರೋಪಿಯನ್ನರ ಆಗಮನ ಸಮಾಜ ನೋಟ್ಸ್‌

10th ಭಾರತಕ್ಕೆ ಯುರೋಪಿಯನ್ನರ ಆಗಮನ ಸಮಾಜ ನೋಟ್ಸ್‌


ಭಾರತಕ್ಕೆ ಯುರೋಪಿಯನ್ನರ ಆಗಮನವು ದೇಶದ ಇತಿಹಾಸದಲ್ಲಿ ಮಹತ್ವದ ತಿರುವು ತಂದುಕೊಟ್ಟಿತು. 1498ರಲ್ಲಿ ವಾಸ್ಕೋ ಡ ಗಾಮಾ ನೇತೃತ್ವದ ಪೋರ್ಟುಗೀಸು ಸಮುದ್ರಯಾನದ ಮೂಲಕ ಪೋರ್ಟುಗೀಸರು ಮೊದಲ ಬಾರಿಗೆ ಭಾರತಕ್ಕೆ ಬಂದರು. ಅವರು ಕಲಿಕಟ್ ಬಂದರು ತಲುಪಿ, ಭಾರತ ಹಾಗೂ ಯುರೋಪಿನ ನಡುವಿನ ನೇರ ವ್ಯಾಪಾರದ ಮಾರ್ಗವನ್ನು ಸ್ಥಾಪಿಸಿದರು. ಇದರಿಂದ ಭಾರತವು ಜಾಗತಿಕ ವ್ಯಾಪಾರ ಜಾಲದಲ್ಲಿ ಪ್ರಮುಖ ಪಾತ್ರವನ್ನುವಹಿಸಲು ಪ್ರಾರಂಭಿಸಿತು. ಪೋರ್ಟುಗೀಸರ ನಂತರ, ಇಂಗ್ಲೀಷರು, ಡಚ್‌ಗಳು ಮತ್ತು ಫ್ರೆಂಚರು ಭಾರತದಲ್ಲಿ ತಮ್ಮ ವಾಣಿಜ್ಯ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು.


ಯುರೋಪಿಯನ್ನರ ಆಗಮನದಿಂದ ಭಾರತದಲ್ಲಿ ವ್ಯಾಪಾರ, ಸಂಸ್ಕೃತಿ, ಧರ್ಮ ಮತ್ತು ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿದವು. ವೈವಿಧ್ಯಮಯ ವಸ್ತುಗಳು, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಭಾರತಕ್ಕೆ ಪ್ರವೇಶಿಸಿವೆ. ಇಂಗ್ಲೀಷರು ಭಾರತವನ್ನು ತಮ್ಮ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿಕೊಂಡ ನಂತರ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ದೇಶದ ವಿವಿಧ ಭಾಗಗಳಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಿತು. ಈ ಕಂಪನಿಯ ಆಡಳಿತದಿಂದ ಭಾರತದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಮಹತ್ತರ ಬದಲಾವಣೆಗಳು ಉಂಟಾದವು. ಇದರಿಂದ ದೇಶದ ಆಂತರಿಕ ಶಕ್ತಿ, ಸಾಂಸ್ಕೃತಿಕ ಸಮೃದ್ಧತೆ ಮತ್ತು ಸ್ವಾಯತ್ತತೆಯನ್ನು ನಷ್ಟಮಾಡಿದರೂ, ನವೀಕರಣದ ಹಾದಿಯನ್ನು ಕೂಡ ಪರಿಚಯಿಸಿತು.

10ನೇ ತರಗತಿ ಭಾರತಕ್ಕೆ ಯುರೋಪಿಯನ್ನರ ಆಗಮನ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೆ ಉತ್ತರ, Bharatakke Yuropiyannara Agamana Social Notes 10th Class Social Science Chapter 1 Notes Question Answer Pdf Download 2024 social science class 10 history chapter 1 class 10 social science notes history chapter 1 Kseeb Solution For Class 10 Social Science Chapter 1 Notes

Bharatakke Yuropiyannara Agamana Notes


  • ತರಗತಿ : 10ನೇ ತರಗತಿ
  • ಪಾಠದ ಹೆಸರು : ಭಾರತಕ್ಕೆ ಯುರೋಪಿಯನ್ನರ ಆಗಮನ


10th Social Science 1st lesson Notes in Kannada

class 10 social science notes history chapter 1

10th Class Social Science Chapter 1

sslc social science notes kannada medium chapter 1


I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ


1. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಪಾಂಡಿಚೇರಿ ಅಥವಾ ಪುದುಚೇರಿ.

2. ರಾಬರ್ಟ್ ಕೈವನು 1757 ರಲ್ಲಿ ಸಿರಾಜ್ – ಉದ್ – ದೌಲನ ಮೇಲೆ ಪ್ಲಾಸಿ ಕದನ ಸಾರಿದನು.

3. 1453 ರಲ್ಲಿ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.

4. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ವಾಸ್ಕೋಡಗಾಮನು ಕಂಡುಹಿಡಿದನು.

5. ಬಂಗಾಳದಲ್ಲಿ ‘ದ್ವಿ ಪ್ರಭುತ್ವ'ವನ್ನು ಜಾರಿಗೆ ತಂದವನು ರಾಬರ್ಟ್ ಕೈವ್

6. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ 'ದಿವಾನಿ' ಹಕ್ಕನ್ನು ಎರಡನೇ ಷಾ ಅಲಂ ನೀಡಿದನು

10 th social history 1st lesson Notes


II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?

• ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಅರಬರು


2. ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?

● ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಇಟೆಲಿಯ ವರ್ತಕರು

3. ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಯಾವ ನಗರದ ಮೂಲಕ ನಡೆಯುತ್ತಿತ್ತು?

● ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಕಾನ್‌ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು


4. ಕಾನ್‌ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?

• ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಆಟೋಮಾನ್ ಟರ್ಕರು


5. ಆಟೋಮಾನ್ ಟರ್ಕರು ಕಾನ್‌ ಸ್ಟಾಂಟಿನೋಪಲ್ ನಗರವನ್ನು ಯಾವಾಗ ವಶಪಡಿಕೊಂಡರು?

● ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು 1453 ರಲ್ಲಿ ವಶಪಡಿಕೊಂಡರು.


6 ವರ್ತಕರಿಗೆ ಕಾನ್‌ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.ಏಕೆ?

● ವರ್ತಕರಿಗೆ ಕಾನ್‌ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ ಏಕೆಂದರೆ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು.


7. ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಯಾವುವು?

• ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಮೆಣಸು , ಜೀರಿಗೆ ದಾಲ್ಟಿನ್ನಿ , ಏಲಕ್ಕಿ ಮತ್ತು ಶುಂಠಿ

8. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

● ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಕಾನ್‌ಸ್ಟಾಂಟಿನೋಪಲ್


9. ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರೇನು?

• ಉತ್ತರ : ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರು- ಬೈಜಾಂಟೀನ್


10. ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು?

● ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಕಾನ್‌ಸ್ಟಾಂಟಿನೋಪಲ್


11. ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲು ಕಾರಣವೇನು?

● ಇಟೆಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು.


12. ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ಯಾವುವು?

● ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ದಿಕ್ಕೂಚಿ , ಆಸ್ಟೋಲೋಬ್ ( ನಕ್ಷತ್ರ ಉನ್ನತಿ ಮಾಪನ ) ಸಿಡಿಮದ್ದು


13. ಆಸ್ಟ್ರೋಲೋಬ್ ಎಂದರೇನು?

● ಆಸ್ಟ್ರೋಲೋಬ್ ಎಂದರೆ ನಕ್ಷತ್ರ ಉನ್ನತಿ ಮಾಪನ


14. ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳಲು ಕಾರಣವೇನು?

● ಏಷ್ಯಾ ಮತ್ತು ಯುರೋಪಿನ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್‌ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿದ್ದರಿಂದ ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.


15. ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಉಂಟಾದ ಪರಿಣಾಮವೇನು?

● ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.

16. ವಾಸ್ಕೋಡಗಾಮನು ಯಾವ ದೇಶದ ನಾವಿಕ?

● ವಾಸ್ಕೋಡಗಾಮನು ಪೋರ್ಚುಗಲ್ ದೇಶದ ನಾವಿಕ


17. ವಾಸ್ಕೋಡಗಾಮನು ಯಾವ ನಗರದಿಂದ ಹೊರಟನು?

● ವಾಸ್ಕೋಡಗಾಮನು ಲಿಸ್ಟನ್ ನಗರದಿಂದ ಹೊರಟನು


18. ವಾಸ್ಕೋಡಗಾಮನು ಯಾವ ನಗರಕ್ಕೆ ಬಂದು ತಲುಪಿದನು?

● ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಬಂದು ತಲುಪಿದನು


19. ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಯಾವಾಗ ಬಂದು ತಲುಪಿದನು?

● ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪಡ್ ನಗರಕ್ಕೆ 1453 ರಲ್ಲಿ ಬಂದು ತಲುಪಿದನು.


20. ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ಯಾರು?

● ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ವಾಸ್ಕೋಡಗಾಮ


21. ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಮೊದಲಿಗರು ಯಾರು?

●  ಪೋರ್ಚುಗೀಸರು


22.ಯುರೋಪಿನ ವ್ಯಾಪಾರಿ ಕಂಪೆನಿಗಳನ್ನು ಹೆಸರಿಸಿ.

● ಪೋರ್ಚುಗೀಸ್ , ಡಚ್ ಇಂಗ್ಲಿಷ್ ಫ್ರೆಂಚ್


23. ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಯಾರು?

● ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಪೋರ್ಚುಗೀಸರು ,

24. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?

● ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಪೋರ್ಚುಗೀಸರು


25. ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಯಾರು?

● ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಫ್ರಾನ್ಸಿಸ್ಕೋ ಡಿ ಆಲೆಡ


26. ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಯಾರು?

● ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಫ್ರಾನ್ಸಿಸ್ಕೋ ಡಿ ಅಲ್ಮೇಡಾ


27 , ನೀಲಿ ನೀರಿನ ನೀತಿ ಎಂದರೇನು?

● ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿಯನ್ನು ನೀಲಿ ನೀರಿನ ನೀತಿ ಎನ್ನುವರು.


28. ಫ್ರಾನ್ಸಿಸ್ಕೋ ಡಿ ಆಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಯಾರು?

● ಫ್ರಾನ್ಸಿಸ್ಕೋ ಡಿ ಆಲೌಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಆಲ್ನೋನ್ನೋ ಆಲ್ಬುಕರ್ಕ


29 ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು?

● ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಆಲೋನ್ನೋ ಆಲ್ಬುಕರ್ಕ

30. 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಯಾರು?

● 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಆಲೋನ್ನೋ ಆಲ್ಬುಕರ್ಕ


31. ಪೋರ್ಚುಗೀಸರ ಆಡಳಿತ ಕೇಂದ್ರ ಯಾವುದು?

● ಪೋರ್ಚುಗೀಸರ ಆಡಳಿತ ಕೇಂದ್ರ ಗೋವಾ


32. ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಲು ಕಾರಣವೇನು?

● ಡಚ್ ಮತ್ತು ಇಂಗ್ಲಿಷರ ಆಗಮನದಿಂದ ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಿದರು.


33. ಡಚ್ಚರು ಯಾವ ದೇಶದವರು?

● ಡಚ್ಚರು ಹಾಲೆಂಡ್ ಅಥವಾ ನೆದರ್‌ಲ್ಯಾಂಡ್ ದೇಶದವರು.


34. ಡಚ್ಚರ ಕಂಪೆನಿಯ ಹೆಸರೇನು?

● ಡಚ್ಚರ ಕಂಪೆನಿಯ ಹೆಸರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ


35. ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು?

● ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ 1602 ರಲ್ಲಿ ಸ್ಥಾಪನೆಯಾಯಿತು.


36. ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಏಕೆ ಸ್ಥಾಪನೆ ಮಾಡಿದರು?

● ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸ್ಥಾಪನೆ ಮಾಡಿದರು.


37. ಭಾರತದಲ್ಲಿ ಡಚ್ಚರ ವ್ಯಾಪಾರ ಕೋಶಿಗಳು ಯಾವುವು?

● ಸೂರತ್ , ಪ್ರೋಚ್ , ಕ್ಯಾಂಬೆ , ಕೊಚ್ಚಿನ್ ನಾಗಪಟ್ಟಣ , ಮಚಲಿಪಟ್ಟಣ , ಚಿನ್ಸೂರ್

38. ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಯಾರು?

● ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಡಚ್ಚರು


39. ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಹೇಗೆ ಮುರಿದರು?

● ಸೂರತ್ , ಪ್ರೋಚ್ , ಕ್ಯಾಂಬೆ , ಕೊಚ್ಚಿನ್ ನಾಗಪಟ್ಟಣ , ಮಚಲಿಪಟ್ಟಣ , ಚಿನ್ನೂರ್ ಮೊದಲಾದ ಕಡೆಗಳಲ್ಲಿ ತಮ್ಮ ವ್ಯಾಪಾರ ಕೋತಿಗಳನ್ನು ಸ್ಥಾಪಿಸಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಮುರಿದರು.


40. ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಳ್ಳಲು ಕಾರಣವೇನು?

● ಭಾರತಕ್ಕೆ ಬಂದ ಇಂಗ್ಲಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು.


41. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು?

● ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ 1600 ರಲ್ಲಿ ಸ್ಥಾಪನೆಯಾಯಿತು.


42. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಯಾರು?

● ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಇಂಗ್ಲೆಂಡಿನ ರಾಣಿ ಎಲಿಜಬೆತ್


43. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಯಾರು?

● ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಜಹಾಂಗೀರ್.


44. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಎಲ್ಲಿ ಆರಂಭವಾಯಿತು?

● ಸೂರತ್‌ನಲ್ಲಿ ಆರಂಭವಾಯಿತು.


45. ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಯಾರು?

● ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಸರ್ ಥಾಮಸ್ ರೋ


46. ಸರ್ ಥಾಮಸ್ ರೋ ಯಾರು?

● ಸರ್ ಥಾಮಸ್ ರೋ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‌ನ ರಾಯಭಾರಿ


47. ಇಂಗ್ಲಿಷರು ಸೆಂಟ್ ಜಾರ್ಜ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಹೇಗೆ ಕಟ್ಟಿದರು?

● ಇಂಗ್ಲಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು.

48. ಫ್ರೆಂಚರ ಗವರ್ನರ್ ಯಾರು?

● ಫ್ರೆಂಚರ ಗವರ್ನರ್ ಡೂಪ್ಲೆ


49. ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿಯಲು ಕಾರಣವೇನು?

● ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿದರು.


50. ತಮಿಳುನಾಡಿನ ಪೂರ್ವ ಭಾಗವನ್ನು ಏನೆಂದು ಕರೆಯುವರು?

● ತಮಿಳುನಾಡಿನ ಪೂರ್ವ ಭಾಗವನ್ನು ಕಾರ್ನಾಟಿಕ್ ಎಂದು ಕರೆಯುವರು.


51. ಮೂರು ಕಾರ್ನಾಟಿಕ್ ಯುದ್ಧಗಳು ನಡೆಯಲು ಮುಖ್ಯ ಕಾರಣವೇನು?

● ಹೈದರಾಬಾದ್ ಸಂಸ್ಥಾನ ಮತ್ತು ಕಾರ್ನಾಟಿಕ್ ಪ್ರಾಂತ್ಯದಲ್ಲಿನ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಬ್ರಿಟಿಷರು ಮತ್ತು ಫ್ರೆಂಚರು ಯತ್ನಿಸಿದರು.ಅದರ ಪರಿಣಾಮದಿಂದ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು.


52. ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಯಾರು?

● ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಲಾಬೋರ್ಡಿನಾ


53. ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಯಾರು?

● ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಇಂಗ್ಲೆಂಡಿನ ರಾಜ ಎರಡನೇ ಚಾರ್ಲ್ಸ


54. ಇಂಗ್ಲಿಷರು ಫೋರ್ಟ್ ವಿಲಿಯಂ ಎಂಬ ಕೋಟೆಯನ್ನು ಹೇಗೆ ಕಟ್ಟಿದರು?

● ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನತಿ , ಕಲಿಕಟ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಇಂಗ್ಲಿಷರು ಪೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು.

55. ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಯಾವುವು?

● ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಮದ್ರಾಸ್ , ಬಾಂಬೆ , ಕಲ್ಕತ್ತ


56. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಯಾವುದು?

● ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಕಲ್ಕತ್ತ


57. ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ ತಂದವರು ಯಾರು?

● ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ ತಂದವರು ಇಂಗ್ಲಿಷರು


58. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು ಯಾವಾಗ ಸ್ಥಾಪನೆಯಾಯಿತು?

● ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು 1664 ರಲ್ಲಿ ಸ್ಥಾಪನೆಯಾಯಿತು.


59. ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಯಾವುದು?

● ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಸೂರತ್


60. ಫ್ರೆಂಚರ ವ್ಯಾಪಾರ ಕೇಂದ್ರಗಳು ಯಾವುವು?

● ಸೂರತ್ , ಮಚಲೀಪಟ್ಟಣ , ಚಂದ್ರನಗರ , ಮಾಹೆ , ಕಾರೈಕಲ್ಲು , ಕಾಸಿಂಬಜಾರ್ , ಬಾಲಸೂರ್


61. ಫ್ರೆಂಚರು ವಾಲಿಕೊಂಡಪುರಂನ್ನು ( ಪಾಂಡಿಚೇರಿ ) ಹೇಗೆ ರಾಜಧಾನಿಯನ್ನಾಗಿ ಮಾಡಿಕೊಂಡರು?

● ಫ್ರೆಂಚರು ವಾಲಿಕೊಂಡಪುರಂನ ಸ್ಥಳಿಯ ಮುಸ್ಲಿಂ ಅಧಿಕಾರಿಯಿಂದ ಒಂದು ಹಳ್ಳಿಯನ್ನು ಪಡೆದು ಅದನ್ನು ದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸಿ , ರಾಜಧಾನಿಯನ್ನಾಗಿ ಮಾಡಿಕೊಂಡರು.


62. ವಾಲಿಕೊಂಡಪುರಂನ ಮತ್ತೊಂದು ಹೆಸರೇನು? ·

● ವಾಲಿಕೊಂಡಪುರಂನ ಮತ್ತೊಂದು ಹೆಸರು ಪಾಂಡಿಚೇರಿ ಅಥವಾ ಪುದುಚೇರಿ


63. ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಯಾವುದಾಗಿತ್ತು?

● ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಪಾಂಡಿಚೇರಿ ಆಗಿತ್ತು.

64. ಮೊದಲ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

● ಮೊದಲ ಕಾರ್ನಾಟಿಕ್ ಯುದ್ಧ ಏಕ್ಸ್ – ಲಾ – ಚಾಪಲ್ ಒಪ್ಪಂದದೊಂದಿಗೆ ಕೊನೆಗೊಂಡಿತು


65. ಎರಡನೇ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

● ಎರಡನೇ ಕಾರ್ನಾಟಿಕ್ ಯುದ್ಧ ಪಾಂಡಿಚೇರಿ ಒಪ್ಪಂದದೊಂದಿಗೆ ಕೊನೆಗೊಂಡಿತು


66. ಮೂರನೇ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

● ಮೂರನೇ ಕಾರ್ನಾಟಿಕ್ ಯುದ್ಧ ಪ್ಯಾರೀಸ್ ಒಪ್ಪಂದದೊಂದಿಗೆ ಕೊನೆಗೊಂಡಿತು


67. ಎರಡನೆ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರ ಸೈನ್ಯದ ಅಧಿಕಾರಿಯಾಗಿ ನೇಮಕಗೊಂಡವರು ಯಾರು?

● ಬುಸ್ಸಿ


68. ಮೂರನೇ ಕಾರ್ನಾಟಿಕ್ ಯುದ್ಧದ ಸಮಯದಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಿದವರು ಯಾರು?

● ಕೌಂಟ್ ಡಿ ಲಾಲಿ


69. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರವನ್ನು ನಡೆಸಲು ದಸ್ತಕ್‌ಗಳನ್ನು ನೀಡಿದವರು ಯಾರು?

● ಫಾರೂಕ್ ಶಿಯಾರ್


70. ದಸ್ತಕ್ ಎಂದರೇನು?

● ವ್ಯಾಪಾರ ನಡೆಸಲು ಪರವಾನಗಿ ಪತ್ರವನ್ನು ದಸ್ತಕ್ ಎನ್ನುವರು.


71. ಪ್ಲಾಸಿ ಕದನ ನಡೆದ ವರ್ಷ ಯಾವುದು?

● 1757

72. ಪ್ಲಾಸಿ ಕದನ ಯಾರ ನಡುವೆ ನಡೆಯಿತು?

● ಸಿರಾಜ್ – ಉದ್ – ದೌಲ ಮತ್ತು ಬ್ರಿಟಿಷರು


73.ಅಲಿವರ್ದಿ ಖಾನನ ಮೊಮ್ಮಗನನ ಹೆಸರೇನು?

● ಸಿರಾಜ್ – ಉದ್ – ದೌಲ


74. ಕಪ್ಪು ಕೋಣೆ ದುರಂತ ಎಂದರೇನು?

●  ಸಿರಾಜ್ – ಉದ್ – ದೌಲನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು. ಅವರಲ್ಲಿ 123 ಮಂದಿ ಅಸುನೀಗಿದರು. ಇದನ್ನು ಕಪ್ಪು ಕೋಣೆ ದುರಂತ ಎನ್ನುವರು.


75. ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಯಾರು?

● ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಮೀರ್ ಜಾಫರ್


76. ಬಕ್ಸಾರ್ ಕದನ ಯಾವಾಗ ನಡೆಯಿತು?

● ಬಕ್ಸಾರ್ ಕದನ 1764 ರಲ್ಲಿ ನಡೆಯಿತು.


77. ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಯಾವುವು?

● ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಮೀರ್ ಖಾಸಿಂ , ಎರಡನೇ ಷಾ ಆಲಂ , ಪುಜ್ – ಉದ್ – ದೌಲ


78. ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಯಾರು?

● ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಹೆಕ್ಟರ್ ಮನೆ

79. ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಯಾರು?

● ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಪಾ ಆಲಂ


80. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು?

●  ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ರಾಬರ್ಟ ಡ್ರೈವ್


bharatakke yuropiyannara agamana sslc samaja vijnana notes


III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ


1. ಫ್ರಾನ್ಸಿಸ್ಕೊ ಡಿ ಆಡನ ಸಾಧನೆಗಳನ್ನು ವಿವರಿಸಿ.

● ವಾಸ್ಕೋಡಗಾಮನ ನಂತರ ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಆಗಿ ಫ್ರಾನ್ಸಿಸ್ಕೊ ಡಿ ಆಲೆಡ ಭಾರತಕ್ಕೆ ಬಂದನು. ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ‘ ನೀಲಿ ನೀರಿನ ನೀತಿ ‘ ಯನ್ನು ಜಾರಿಗೆ ತಂದನು.


2. ಆಲ್ಫನ್ನೋ ಆಲ್ಬುಕರ್ಕ್ ಸಾಧನೆಗಳನ್ನು ವಿವರಿಸಿ.

● ಆಸ್ಟ್ರೇಡನ ನಂತರ ಬಂದ ಆಲೋನ್ನೋ ಆಲ್ಬುಕರ್ಕ್ ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ.

● ಇವನು ಸಾ.ಶ. 1510 ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು


3. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

●  ಭಾರತ ಮತ್ತು ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು. ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು , ಜೀರಿಗೆ , ದಾಲ್ಟಿ , ಏಲಕ್ಕಿ , ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು.

● ಮಧ್ಯಕಾಲದಲ್ಲಿಯೂ ಯುರೋಪ್ , ಭಾರತ ಮತ್ತು ಇತರ ಏಷ್ಯಾದ ದೇಶಗಳ ನಡುವೆ ವ್ಯಾಪಾರ ಮುಂದುವರೆಯಿತು. · ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನ್‌ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.

● ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು

4. ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ.

● 1453 ರಲ್ಲಿ ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.

● ಇದರಿಂದಾಗಿ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.

● ಹೊಸದಾಗಿ ಸಿಕ್ಕ ಅವಕಾಶದಿಂದ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು.

● ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.

● ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್ , ಪೋರ್ಚುಗಲ್ ಮೊದಲಾದ ಯುರೋಪಿನ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು.

● ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಕೂಚಿ , ಆಲೋಬ್ ( ನಕ್ಷತ್ರ ಉನ್ನತಿ ಮಾಪನ ) , ಸಿಡಿಮದ್ದು


5. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರುಗಳನ್ನು ಪಟ್ಟಿ ಮಾಡಿ.

● ಪೋರ್ಚುಗೀಸರು  ● ಡಚ್ಚರು ● ಇಂಗ್ಲಿಷರು ● ಫ್ರೆಂಚರು


6. ಎರಡನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

● ಫ್ರೆಂಚರು ಅಸಫ್‌ಜಾನ ಮತ್ತೊಬ್ಬ ಮಗನಾದ ಸಲಾಬತ್‌ಜಂಗನನ್ನು ಹೈದರಾಬಾದಿನ ನಿಜಾಮನಾಗಿ ಮಾಡಿದರು. ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತ ‘ ಬುಸ್ಸಿ ‘ ಎಂಬ ಅಧಿಕಾರಿಯನ್ನು ನೇಮಿಸಿದ್ದರು.

● ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್‌ನ ನವಾಬನಾಗಿದ್ದನು.

● ಆದರೆ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕೈವನು ಕಾರ್ನಾಟಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು.

● ಅಂತಿಮವಾಗಿ ಈ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು.

● ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನಾಗಿ ನೇಮಕ ಮಾಡಿದರು. ಕೊನೆಗೆ ಎರಡನೆಯ ಕಾರ್ನಾಟಿಕ್ ಯುದ್ಧವು ‘ ಪಾಂಡಿಚೇರಿ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು

7. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಕಾರಣಗಳು :

● ದಸ್ತಕ್‌ಗಳ ದುರುಪಯೋಗ

● ಅನುಮತಿ ಇಲ್ಲದೆ ಕೋಟೆಯ ದುರಸ್ಥಿ

● ಕಪ್ಪುಕೋಣೆ ದುರಂತ ಪರಿಣಾಮಗಳು : ಈ ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ , ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.

● ಮೀರ್ ಜಾಫರ್ ಬಂಗಾಳದ ನವಾಬನಾದನು.

● ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.

● ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ ಹದಿನೇಳು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನ


8. ಬಕ್ಸಾರ್ ಕದನದ ಪರಿಣಾಮಗಳಾವುವು?

● ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ ದಿವಾನಿ ‘ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು. ಸಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.

● ಔದ್‌ ನವಾಬನಾದ ಪುಜ್ – ಉದ್ – ದೌಲನು ಕಂಪನಿಗೆ ಯುದ್ಧನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು ಮೀರ್‌ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು


9. ಮೊದಲ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

● ಡೂಪ್ಲೆಯ ಕೋರಿಕೆಯ ಮೇರೆಗೆ ಲಾಬೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್‌ ನಿಂದ ಬಂದು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು.

● ಅಸಹಾಯಕರಾದ ಬ್ರಿಟಿಷರು ಕಾರ್ನಾಟಿಕ್ ನವಾಬನಾದ ಅನ್ವರುದ್ದೀನನಲ್ಲಿ ಮೊರೆ ಇಟ್ಟರು.

● ಮದ್ರಾಸ್‌ನಿಂದ ಫ್ರೆಂಚರನ್ನು ಹೊರಗಟ್ಟಲು ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತು.

● ಕೊನೆಗೆ ಲಾಬೋರ್ಡಿನನು ಡೂಪ್ಲೆಗೆ ತಿಳಿಸದೆ ಬ್ರಿಟಿಷರಿಂದ ಹಣಪಡೆದು ಮದ್ರಾಸನ್ನು ಬಿಟ್ಟುಕೊಟ್ಟು ಮಾರಿಷಸ್‌ಗೆ ಹೊರಟುಹೋದನು.

● ಇದರಿಂದ ಕೋಪಗೊಂಡ ಡೂಪ್ಲೆಯು ಮದ್ರಾಸನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದನು

● ಅಂತಿಮವಾಗಿ ಈ ಯುದ್ಧವು ಯುರೋಪಿನಲ್ಲಿ ಪ್ರಿನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ ‘ ಏಕ್ಸ್ – ಲಾ ಚಾಪೆಲ್ ‘ ಒಪ್ಪಂದದೊಂದಿಗೆ ಮುಕ್ತಾಯವಾಯಿತು

10. ಮೂರನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

● ಫ್ರೆಂಚರ ‘ ಕೌಂಟ್ ಡಿ ಲಾಲಿ’ಯು ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು.

● ಈ ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ್ , ಐರ್‌ಕೂಟನು ಫ್ರೆಂಚರನ್ನು ಸೋಲಿಸಿದನಲ್ಲದೆ , ಬುಸ್ಸಿಯನ್ನು ಸೆರೆಹಿಡಿದನು.

● ಲಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು. ಅಂತಿಮವಾಗಿ ಐರ್‌ಟನು ಪಾಂಡಿಚೇರಿಗೂ ಮುತ್ತಿಗೆ ಹಾಕಿದಾಗ ಲಾಲಿಯು ರಲ್ಲಿ ಬೇಷರತ್ತಾಗಿ ಶರಣಾದನು.


11. ಕಪ್ಪುಕೋಣೆ ದುರಂತವನ್ನು ವಿವರಿಸಿ.

● ಸಿರಾಜುದೌಲನು ಪೋರ್ಟ್ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು ಕೆಲವರನ್ನು ಸೆರೆಹಿಡಿದನು. ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು.

● ಅವರಲ್ಲಿ 123 ಮಂದಿ ಅಸುನೀಗಿದರು ಎಂಬುದಾಗಿತ್ತು.

● ಇದನ್ನು ಕಪ್ಪುಕೋಣೆಯ ದುರಂತ ಎಂದು ಕರೆಯಲಾಗಿದೆ.


12. ಬಕ್ಸಾರ್ ಕದನಕ್ಕೆ ಕಾರಣಗಳು ಯಾವುವು?

● ಮೀರ್ ಖಾಸಿಂ ಒಬ್ಬ ಸಮರ್ಥ ಆಡಳಿತಗಾರ. ಈತನು ಸಹ ಆರಂಭದಲ್ಲಿ ಕಂಪನಿಗೆ ನಿಷ್ಠೆಯಿಂದಿದ್ದನು. ಎರಡು ಲಕ್ಷ ಪೌಂಡ್ ಹಣದ ಜೊತೆಗೆ ಕೆಲವು ಪ್ರದೇಶಗಳನ್ನು ಕಂಪನಿಗೆ ಬಿಟ್ಟುಕೊಟ್ಟನು.

● ಆದರೆ , ಶೀಘ್ರವೇ ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು.

● ದಸ್ತಕ್‌ನ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು

● ಇದರಿಂದಾಗಿ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು. ಪರಿಣಾಮ , ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಒಡೆತ ಬಿದ್ದಿತು.

● ಬ್ರಿಟಿಷರು ಮೀರ್ ಖಾಸಿಂನನ್ನು ಇಳಿಸಿ ಮತ್ತೆ ಮೀರ್ ಜಾಫರ್‌ನನ್ನು ನವಾಬನಾಗಿ ಮಾಡಿದರು.

● ಬ್ರಿಟಿಷರ ಕುಟಿಲತೆಯನ್ನೆಲ್ಲ ಅರಿತಿದ್ದ ಮೀರ್ ಖಾಸಿಮನು ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕೆ ಮುಂದಾದನು.

● ಈ ನಿಟ್ಟಿನಲ್ಲಿ ಮುಂದುವರೆದ ಮೀರ್ ಖಾಸಿಮನು ಮೊಗಲ್ ದೊರೆ ಎರಡನೇ ಷಾ ಆಲಂ ‘ ಮತ್ತು ಔದ್‌ ನವಾಬ ‘ ಪುಜ್ – ಉದ್ – ದೌಲ’ರೊಂದಿಗೆ ಒಪ್ಪಂದ ಮಾಡಿಕೊಂಡನು.


13. ‘ ದ್ವಿ ಪ್ರಭುತ್ವ ‘ ಎಂದರೇನು? ಅದನ್ನು ಜಾರಿಗೆ ತಂದವರು ಯಾರು?

● ರಾಬರ್ಟ್ ಕೈವನು ಬಂಗಾಳದಲ್ಲಿ ದ್ವಿ ಪ್ರಭುತ್ವ ‘ ಪದ್ಧತಿಯನ್ನು ಜಾರಿಗೆ ತಂದನು.

● ಈ ಪದ್ಧತಿಯಂತೆ ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದರು ಆದರೆ , ನವಾಬನು ಆಡಳಿತ , ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.

Tags

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section