Top General Knowledge One-liner Question Answers in Kannada for All Competitive Exams-04
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?
ಸರಿಯಾದ ಉತ್ತರ: ಫಕ್ರುದ್ದೀನ ಅಲಿ ಅಹ್ಮದ್
2. ಜೈನರ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?
ಸರಿಯಾದ ಉತ್ತರ: ಶ್ರವಣಬೆಳಗೊಳ
3. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?
ಸರಿಯಾದ ಉತ್ತರ: ಡಿಸೆಂಬರ್ 10
4. ಒಲಂಪಿಕ್ಸ್ ಕ್ರೀಡೆಗಳು ಯಾವ ವರ್ಷದಲ್ಲಿ ಆರಂಭವಾದವು?
ಸರಿಯಾದ ಉತ್ತರ: 776
5. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?
ಸರಿಯಾದ ಉತ್ತರ: ಅಪಧಮನಿ
6. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ ಆರಂಭವಾದದ್ದು ಯಾವ ನಗರದಲ್ಲಿ?
ಸರಿಯಾದ ಉತ್ತರ: ಕಲಬುರಗಿ
7. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಯಾವುದು?
ಸರಿಯಾದ ಉತ್ತರ: ತಕ್ಷಶಿಲಾ ವಿಶ್ವವಿದ್ಯಾಲಯ
8. ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
ಸರಿಯಾದ ಉತ್ತರ: ಆನಿಬೆಸೆಂಟ್
9. ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?
ಸರಿಯಾದ ಉತ್ತರ: ಹಿಮ್ಮೆದುಳು
10. ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?
ಸರಿಯಾದ ಉತ್ತರ: ಆಸ್ಟ್ರೇಲಿಯಾ