2022 ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ : ಸಂಪೂರ್ಣ ಮಾಹಿತಿ ಇಲ್ಲಿದೆ
ದೇಶದ ಅತ್ಯುನ್ನತ ನಾಗರಿಕ ಗೌರವಗಳಾದ “ಪದ್ಮ” ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಸಾಹಿತಿ ದಿವಂಗತ ಸಿದ್ದಲಿಂಗಯ್ಯ ಸೇರಿ ರಾಜ್ಯದ ಐವರು ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಒಟ್ಟು 128 ಜನರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಒಟ್ಟು ಪ್ರಶಸ್ತಿಗಳು :128
1. ಪದ್ಮ ವಿಭೂಷಣ - 04
2. ಪದ್ಮ ಭೂಷಣ - 17
3. ಪದ್ಮಶ್ರೀ - 107
ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು
1. ಪ್ರಭಾ ಅತ್ತೆ - ಕಲೆ
2. ರಾಧೆ ಶ್ಯಾಮ್ ಖೆಮ್ಯಾ (ಮರಣೋತ್ತರ) - ಸಾಹಿತ್ಯ & ಶಿಕ್ಷಣ
3. ಜನರಲ್ ಬಿಪಿನ್ ರಾವತ್ (ಮರಣೋತ್ತರ) - ನಾಗರಿಕ ಸೇವೆ
4. ಕಲ್ಯಾಣ ಸಿಂಗ್ (ಮರಣೋತ್ತರ) - ಸಾರ್ವಜನಿಕ ಸೇವೆ
ಪದ್ಮ ಭೂಷಣ ಪ್ರಶಸ್ತಿ ವಿಜೇತರು
1. ಗುಲಾಂ ನಬಿ ಅಜಾದ್ - ಸಾರ್ವಜನಿಕ ಸೇವೆ
2. ವಿಕ್ಟರ್ ಬ್ಯಾನರ್ಜಿ - ಕಲೆ
3. ಗುರ್ಮಿತ್ ಬಾವಾ (ಮರಣೋತ್ತರ) - ಕಲೆ
4. ಬುದ್ಧದೇವ್, ಭಟ್ಟಾಚಾರ್ಯ - ಸಾರ್ವಜನಿಕ ಸೇವೆ
5. ನಟರಾಜನ್ ಚಂದ್ರಶೇಖರ್ - ವ್ಯಾಪಾರ & ಉದ್ಯಮ
6. ಕೃಷ್ಣ ಎಲ್ಲಾ ಮತ್ತು ಸುಚಿತ್ರಾ ಎಲ್ಲಾ - ವ್ಯಾಪಾರ ಮತ್ತು ಉದ್ಯಮ
7. ಮಧುರ್ ಜಾಫರಿ - ಇತರೆ
8, ರಷೀದ್ ಖಾನ್ - ಕಲೆ
9, ರಾಜೀವ್ ಮಹರ್ಷಿ - ನಾಗರಿಕ ಸೇವೆ
10.ಸಂಜಯ್ ರಾಜಾಯಾಮ್ (ಮರಣೋತ್ತರ) - ವಿಜ್ಞಾನ ಮತ್ತು ಇಂಜಿನಿಯರಿಂಗ್
11. ಪ್ರತಿಭಾ ರೇ - ಸಾಹಿತ್ಯ & ಶಿಕ್ಷಣ
12.ಸ್ವಾಮಿ ಸಚ್ಚಿದಾನಂದ – ಸಾಹಿತ್ಯ & ಶಿಕ್ಷಣ
13.ವಸಿಷ್ಟ ತ್ರಿಪಾಠಿ - ಸಾಹಿತ್ಯ & ಶಿಕ್ಷಣ
14.ದೇವೆಂದ್ರ ಜಾಜಾರಿಯಾ - ಕ್ರೀಡೆ
15.ಸತ್ಯನಾದೆಲ್ಲಾ - ವ್ಯಾಪಾರ & ಉದ್ಯಮ
16.ಸುಂದರ್ ಪಿಚೈ - ವ್ಯಾಪಾರ & ಉದ್ಯಮ
17.ಸೈರಸ್ ಪೂನಾವಾಲಾ - ವ್ಯಾಪಾರ & ಉದ್ಯಮ
ಪ್ರಮುಖ ಪದ್ಮಶ್ರೀ ಪುರಸ್ಕೃತರು
1. ಶ್ರೀ ಸುಬ್ಬಯ್ಯ ಅಯ್ಯಪ್ಪನ್ - ವಿಜ್ಞಾನ ಮತ್ತು ಇಂಜಿನಿಯರಿಂಗ್
2. ಶ್ರೀ ಅಬ್ದುಲ್ ಖಾದರ್ ನಡಕಟ್ಟಿನ್ - ಇತರೆ
3. ಶ್ರೀ ಅಮಾಯಿ ಮಹಾಲಿಂಗ ನಾಯ್ಕ - ಕೃಷಿ
4. ಶ್ರೀ ಸಿದ್ಧಲಿಂಗಯ್ಯ (ಮರಣೋತ್ತರ) - ಸಾಹಿತ್ಯ
5. ಹೆಚ್.ಆರ್.ಕೇಶವ್ ಮೂರ್ತಿ - ಗಮಕ ಕಲೆ
6, ಶ್ರೀ ಸುಮಿತ್ ಅಂಟಿಲ್ - ಕ್ರೀಡೆ
7. ಶ್ರೀ ಪ್ರಮೋದ್ ಭಗತ್ - ಕ್ರೀಡೆ
8. ನೀರಜ್ ಚೋಪ್ರಾ - ಕ್ರೀಡೆ
9. ಫೈಸಲ್ ಅಲಿಧಾರ್ - ಕ್ರೀಡೆ
10. ವಂದನಾ ಕಟಾರಿಯಾ - ಕ್ರೀಡೆ
11. ಅವನಿ ಲೇಖರಾ - ಕ್ರೀಡೆ
12. ಕಮಲಕ ತ್ರಿಪಾಠಿ - ವೈದ್ಯಕೀಯ
13. ಅಜಿತ್ ಶ್ರೀವಾಸ್ತವ್ - ಕಲೆ
14. ಭೀಮಸೇನ್ ಸಂಘಲ್ - ವೈಧ್ಯಕೀಯ
15. ಶ್ರೀಮದ್ ಬಾಬಾ ಬಲಿಯಾ - ಸಾಮಾಜಿಕ ಸೇವೆ
ಪದ್ಮ ವಿಭೂಷಣ ವಿಜೇತರು
1. ಜ.ಬಿಪಿನ್ ರಾವತ್ :
ದೇಶದ ಮೊಟ್ಟಮೊದಲ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು, ಭೂಸೇನೆಯ 27ನೇ ಮುಖ್ಯಸ್ಥರಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಉತ್ತರಾ ಖಂಡದ ಪೌಡಿಘರ್‌ವಾಲ್ ಜಿಲ್ಲೆಯವರಾದ ರಾವತ್ ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಕೂಡ ಭಾರತೀಯ ಸೇನೆಯ ಗೂರ್ಖಾ ರೈಫಲ್‌ನಲ್ಲಿ ಸೇವೆ ಸಲ್ಲಿಸಿದ್ದರು. 1978 ರ ಡಿಸೆಂಬರ್‌ನಲ್ಲಿ ಗೋರ್ಖಾ ರೈಫಲ್ಸ್‌ಗೆ ಸೇರಿದ ಬಿಪಿನ್ ರಾವತ್ ಅವರು 1987 ರಲ್ಲಿ ಸುಮ್‌ದೊರೊಂಗ್ ಕಣಿವೆಯಲ್ಲಿನ ಸಿನೋ-ಇಂಡಿಯನ್ ಬಿಕ್ಕಟ್ಟಿನಲ್ಲಿ ಚೀನಾದ ಸೈನಿಕರಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಸೇನಾಪಡೆಯ ನೇತೃತ್ವ ವಹಿಸಿದ್ದರು. ಕಾಂಗೊದಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಗಳ ನೇತೃತ್ವ ವಹಿಸಿದ ಕೀರ್ತಿ ಇವರದ್ದು, 2017 ರಲ್ಲಿ ಡೊಕ್ಲಾಮ್‌ನಲ್ಲಿ ಚೀನಾ ಸೇನೆಯ ವಿರುದ್ಧದ 73 ದಿನಗಳ ಸಂಘರ್ಷದಲ್ಲಿ ಯೋಧರಿಗೆ ಆತ್ಮಸ್ಥೆರ್ಯ ತುಂಬಿದ್ದರು.
2. ರಾಧೇಶ್ಯಾಮ್ ಖೇಮ್ಕಾ :
ಉತ್ತರ ಪ್ರದೇಶದ ಗೋರಖ್‌ಪುರದ ಖ್ಯಾತ 'ಗೀತಾ ಪ್ರೆಸ್ ಅಧ್ಯಕ್ಷರಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೃತಿಗಳನ್ನು ಜನರಿಗೆ ತಲುಪಿಸುವ ಮೂಲಕ ಸುಮಾರು 40 ವರ್ಷಗಳ ಕಾಲ ಸನಾತನ ಧರ್ಮದ ಸೇವೆ ಸಲ್ಲಿಸಿದ ಕೀರ್ತಿ ಖೇಮ್ಯಾ ಅವರದ್ದು. ಗೀತಾ ಪ್ರೆಸ್‌ನ ಪ್ರಕಟಣೆಗಳು ಕನ್ನಡ ಸೇರಿದಂತೆ ಬಹುತೇಕ ಎಲ್ಲಾಭಾರತೀಯ ಭಾಷೆಗಳಲ್ಲಿಯೂ ಪ್ರಕಟವಾಗುತ್ತಿದ್ದವು ಎನ್ನುವುದು ವಿಶೇಷ. ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಜನಿಸಿದ ಇವರು, ಗೋವು ಸಂರಕ್ಷಣೆ ಹಾಗೂ ಸನಾತನ ಧರ್ಮ ಪಾಲನೆಯಲ್ಲಿ ನಿರತರಾಗಿದ್ದ ತಮ್ಮ ತಂದೆ ಶ್ರೀ ಸೀತಾರಾಮ್‌ಜೀ ಮ್ಯಾ ಅವರಿಂದ ಪ್ರಭಾವಿತ ರಾದರು. ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ ಪಡೆದ ರಾಧೇಶ್ಯಾಮ್ ಅವರು, ಸಂಸ್ಕೃತ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಭಾರಿ ಪಾಂಡಿತ್ಯ ಹೊಂದಿದ್ದರು.
3. ಕಲ್ಯಾಣ್ ಸಿಂಗ್
1991, ಜೂನ್ 24 ರಂದು ಉತ್ತರ ಪ್ರದೇಶದ 16ನೇ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದ ಕಲ್ಯಾಣ್ ಸಿಂಗ್, 1992, ಡಿಸೆಂಬರ್ 6 ರಂದು ಪದತ್ಯಾಗ ಮಾಡಿದರು. ಇವರ ಅವಧಿಯಲ್ಲಿಯೇ ನಡೆದ ಆಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣವೇ ಅವರನ್ನು ಅಧಿಕಾರದಿಂದ ನಿರ್ಗಮಿಸುವಂತೆ ಮಾಡಿತ್ತು. ನಂತರ ಅವರ ವಿರುದ್ಧ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪಿತೂರಿ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ಅವರು ದಶಕಗಳ ಕಾಲ ಕೋರ್ಟ್ ವಿಚಾರಣೆ ಎದುರಿಸಿ, ಕೊನೆಗೆ ದೋಷ ಮುಕ್ತಗೊಂಡಿದ್ದರು. ಅಲ್ಪ ಅವಧಿ ಅಧಿಕಾರ ನಡೆಸಿದರೂ ಉತ್ತರ ಪ್ರದೇಶ ಅಭಿವೃದ್ಧಿಯ ವಿಷಯದಲ್ಲಿ ಹೊಸ ವರ್ಷಕ್ಕೆ ನಾಂದಿ ಹಾಡಿದ್ದರು. 2009 ರಿಂದ 2014 ರವರಿಗೆ ಲೋಕಸಭೆ ಸದಸ್ಯರಾಗಿಯೂ ಗಮನ ಸೆಳೆದಿದ್ದರು.
4. ಡಾ.ಪ್ರಭಾ ಅತ್ರೆ ಹಿಂದೂಸ್ತಾನಿ ಗಾಯಕಿ:
ಪುಣೆಯಲ್ಲಿ ಜನಿಸಿ, ಸುರೇಶ್ ಬಾಬು ಮಾನೆ ಹಾಗೂ ಹೀರಾ ಬಾಯಿ ಬಾಡೋಡೆಕರ್ ಅವರಿಂದ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. ಸಂಗೀತದಲ್ಲಿ ಪಿ.ಎಚ್.ಡಿ. ಸಹ ಮಾಡಿರುವ ಇವರು 2016 ರಲ್ಲಿ ಸಂಗೀತದ ಕುರಿತು ರಚಿಸಿದ 11 ಪುಸ್ತಕಗಳನ್ನು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡುವ ಮೂಲಕ ವಿಶ್ವದಾಖಲೆ ಬರೆದರು. ಇವರಿಗೆ 1990 ರಲ್ಲಿ ಪದ್ಮಶ್ರೀ ಹಾಗೂ 2002 ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಈಗ ಪದ್ಮವಿಭೂಷಣ ಸಹ ದೊರೆತಿದ್ದು, ಖಾಯಲ್‌ನಿಂದ ಹಿಡಿದು ಮರಾಠಿ ಗಜಲ್‌ಗಳನ್ನು ಹಾಡಿದ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಭಾರತ ರತ್ನ ಪುರಸ್ಕೃತರಾದ ಪಂಡಿತ್ ಭೀಮಸೇನ್ ಜೋಶಿ ಅವರು ಪಾರಂಗತರಾಗಿದ್ದ ಶಾಸ್ತ್ರೀಯ ಸಂಗೀತದ 'ಕಿರಾನಾ ಘರಾನಾ' ಪ್ರಾಕಾರದಲ್ಲಿ ಪ್ರಭಾ ಆದ್ರೆ ಅವರು ಸಹ ಪರಿಣತರಾಗಿದ್ದರು.
ಕರ್ನಾಟಕದ ಪದ್ಮಶ್ರೀ ಪುರಸ್ಕೃತರು :
1. ಅಮೈ ಮಹಾಲಿಂಗ ನಾಯ್ಕ್ (ಕೃಷಿ)
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಮೈ ಮಹಾಲಿಂಗ ನಾಯ್ಕ ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಆಧುನಿಕ ಭಗೀರಥ, ಪ್ರಗತಿಪರ ಕೃಷಿಕರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಡ ಸಮೀಪದ ಅಮೈ ನಿವಾಸಿ. 77 ವರ್ಷದ ಸಾಧಕ ಕೃಷಿ, ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಆಧುನಿಕ ತಲೆಮಾರಿಗೆ ತೋರಿಸಿಕೊಟ್ಟಿದ್ದಾರೆ. ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಬಿಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗುರುತ್ವಾಕರ್ಷಣಾ ಬಲದ ನೆರೆವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ವಾಹಾಲಿಂಗ್ ನಾಯ್ಕ್ ಏಕಾಂಗಿಯರಾಗಿ ಸುರಂಗಗಳನ್ನು ಕೊರೆದು ಯಶಸ್ವಿಯಾಗಿದ್ದಾರೆ.
ಇವರು ಸಾಲಕ್ಕಾಗಿ ಯಾವುದೇ ಬ್ಯಾಂಕ್ ಮೊರೆ ಹೋಗಿಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಬಂದಿದೆ. ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನು ನೀಡಿದೆ. ಮಹಾಲಿಂಗ ನಾಯ್ಕರ ಏಕಾಂಗಿ ಸಾಧನೆಯನ್ನು ದೂರದರ್ಶನ ತನ್ನ “ವಾಟರ್ ವಾರಿಯರ್' ಧಾರಾವಾಹಿಯಲ್ಲಿ ಬಿತ್ತರಿಸಿದೆ.
2. ದಿ. ಡಾ. ಸಿದ್ದಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ)
ಬಂಡಾಯ ಸಾಹಿತಿ, ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ದಿ.ಡಾ.ಸಿದ್ದಲಿಂಗಯ್ಯ ಅವರು ದಲಿತ ಹೋರಾಟ ಹಾಗೂ ಸಾಮಾಜಿಕ ಸಮಾನತೆಗಾಗಿ ಕಾವ್ಯ ರಚಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಅತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು.
1954ರ ಫೆ. 3ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ಜನಿಸಿದ ಸಿದ್ದಲಿಂಗಯ್ಯ, ಬೆಂಗಳೂರು ವಿವಿಯಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಹಳ ದಿನಗಳ ಕಾಲ ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. 2021 ರ ಜೂ. 11 ರಂದು ಚಿಕಿತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದರು.
“ಯಾರಿಗೆ ಬಂತು ಎಲ್ಲಿಗೆ ಬಂತು 47 ಸ್ವಾತಂತ್ರ್ಯ' ಎಂಬ ಗೀತೆ ಮೂಲಕ ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿದ ಅವರು, ದಲಿತ ಚಳವಳಿಗೆ ಹೊಸ ರೂಪ ನೀಡಿದರು. ಆ ಮೂಲಕ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
3. ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ತಂತ್ರಜ್ಞಾನ)
ನ್ಯಾಷನಲ್ ಅಗ್ರಿಕಲ್ಡರಲ್ ರೀಸರ್ಚ್ ಆ್ಯಂಡ್ ಎಜುಕೇಶನ್ ಡಿಪಾರ್ಟ್‌ಮೆಂಟ್‌ನ ಡಿಪಾರ್ಟ್‌ಮೆಂಟ್‌ನ ಕಾರೈದರ್ಶಿ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಡರಲ್ ರಿಸರ್ಚ್ ನ ನಿರ್ದೇಶಕರಾಗಿದ್ದ ಅಯ್ಯಪ್ಪನ್ ಅವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಸದ್ಯ ಮಣಿಪುರದ ಇಂಫಾಲ್ ಕೇಂದ್ರೀಯ ಕೃಷಿ ವಿವಿ ಛಾನ್ಸಲರ್ ಆಗಿದ್ದಾರೆ. ಇತ್ತೀಚೆಗೆ ಇವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಯ್ಯಪ್ಪನ್ ಮೀನುಗಾರಿಕೆಯಲ್ಲಿ ಸಾಕಷ್ಟು ಸಂಶೋಧನೆಯನ್ನು ನಡೆಸಿದ್ದಾರೆ. ಇವರಿಗೆ ಇಡೀ ಭಾರತದ ಕೃಷಿ ವ್ಯವಸ್ಥೆ ಬಗ್ಗೆ ಆಧಾರ ಜ್ಞಾನವಿದೆ.
ಅಯ್ಯಪ್ಪನ್ ಅವರು ಡಿಸೆಂಬರ್ 10, 1955 ರಲ್ಲಿ ಚಾಮರಾಜನಗರದ ಯಳಂದೂರು ತಾಲೂಕಿನ ಅಗ್ರಹಾರದಲ್ಲಿ ಜನಿಸಿದರು. ಇವರ ತಂದೆ ಸುಬ್ಬಣ್ಣ ಹಾಗೂ ತಾಯಿ ಸುಶೀಲಮ್ಮ, ಅಯ್ಯಪ್ಪನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡಿನಲ್ಲಿ ಪೂರೈಸುತ್ತಾರೆ. ನಂತರ ಬೆಂಗಳೂರಿನ ನ್ಯಾಷನಲ್ ಹೈ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. 1975 ರಲ್ಲಿ ಪದವಿ ಮುಗಿಸಿ, 1977ರಲ್ಲಿ ಮೀನುಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಮೀನುಗಾರಿಕೆಯಲ್ಲೇ ಸಂಶೋಧನೆ ನಡೆಸಿದ ಅಯ್ಯಪ್ಪನ್ ಬಾರಕ್‌ಪುರ ಸೆಂಟ್ರಲ್ ಫಿಶರಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜ್ಞಾನಿಯಾಗಿ ಸೇರಿಕೊಳ್ಳುತ್ತಾರೆ. ನಂತರ ಮುಂಬಯಿ ಸೆಂಟ್ರಲ್ ಫಿಶರಿಸ್ ಟೇಕಿಂಗ್ ಇನ್ ಸ್ಟಿಟ್ಯೂಟ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ. ಇದುವರೆಗೆ 200ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ-ವಿದೇಶದ ಜನರಲ್ಸ್‌ಗಳಲ್ಲಿ ಪ್ರಕಟವಾಗಿದೆ.
4. ಎಚ್.ಆರ್.ಕೇಶವಮೂರ್ತಿ (ಗಮಕ ಕಲೆ)
ರಾಮಾಯಣ ಕಾಲದಿಂದಲೂ ಇರುವಂತಹ ವಿಶಿಷ್ಟ ಗಾಯನ ಕಲೆ ಗಮಕವನ್ನು ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ಶ್ರೀಮಂತಗೊಳಿಸಿದ ಗಮಕಿ ಎಚ್.ಆರ್.ಕೇಶವಮೂರ್ತಿ ಅವರಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಕಟಿಸಿದೆ. ಗಮಕ ಕಲೆಗಾಗಿಯೇ ಇರುವ ರಾಜ್ಯದ ಇರುವ ರಾಜ್ಯದ ಮೊಟ್ಟ ಮೊದಲ ಕವತಾರ ವ್ಯಾಸ ಪ್ರಶಸ್ತಿ ಪುರಸ್ಕೃತರಾದ ಎಚ್. ಆರ್. ಕೇಶವಮೂರ್ತಿ ಅವರು ಗಮಕ ಕಲೆಯನ್ನು ಕೇವಲ ಹವ್ಯಾಸವಾಗಿ ಉಳಿಸಿಕೊಳ್ಳದೆ ಅದನ್ನು ಎಲ್ಲೆಡೆ ಪಸರಿಸಲು ಶ್ರಮಿಸಿದವರು.
ಶಿವಮೊಗ್ಗ ತಾಲೂಕು ಗಮಕ ಗ್ರಾಮವೆಂದೇ ಹೆಸರಾದ ಹೊಸಹಳ್ಳಿಯಲ್ಲಿ ಕೇಶವಮೂರ್ತಿ ಅವರು ವೇದಬ್ರಹ್ಮ ರಾಮಸ್ವಾಮಿ ಶಾಸ್ತ್ರೀ ಮತ್ತು ಲಕ್ಷ್ಮೀದೇವಮ್ಮ ಅವರಿಗೆ 1934ನೇ ಫೆಬ್ರುವರಿ 22 ರಂದು ಜನಿಸಿದರು. ಕೇಶವಮೂರ್ತಿಗಳ ಗಮಕ ವಾಚನ ಮತ್ತು ಮತ್ತೂರಿನ ದಿವಂಗತ ವೇದಬ್ರಹ್ಮ ಮಾರ್ಕಂಡೆಯ ಅವಧಾನಿಗಳ ವ್ಯಾಖ್ಯಾನ ಬಹಳ ಪ್ರಖ್ಯಾತಿ ಗಳಿಸಿತ್ತು. ಸುಮಾರು 50 ವರ್ಷಗಳ ಕಾಲ ಈ ಇಬ್ಬರೂ ಮಹಾನ್ ವಿದ್ವಾಂಸರು ಗಮಕ ಕಲೆಯನ್ನು ಜನರ ಮನಸ್ಸಿನಲ್ಲಿ ನೆಲೆಯೂರಿಸಿದರು. ಕೇಶವಮೂರ್ತಿ ಅವರೊಂದಿಗೆ ಮತ್ತೂರು ಕೃಷ್ಣಮೂರ್ತಿ ಅವರೂ ಜತೆಯಾಗುತ್ತಿದ್ದರು. ಇವರು ಗಮಕವೆಂದರೆ ಏನೆಂದು ತಿಳಿಯದವರಿಗೂ ಸುಲಲಿತವಾಗಿ ಅದನ್ನು ಹಾಡುವಂತೆ ಅರ್ಥ ಮಾಡಿಕೊಳ್ಳುವಂತೆ ಮಾಡಿ ಗಮಕ ಕಲೆಯನ್ನು ಬೆಳೆಸಿದರು. ಇವರ ಸೇವೆ ಗುರುತಿಸಿ ಕರ್ನಾಟಕ ಗಮಕ ಕಲಾ ಪರಿಷತ್, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಸೇರಿದಂತೆ ದೇಶದೆಲ್ಲೆಡೆಯ ನೂರಾರು ಸಂಘಟನೆಗಳು, ಮಠಗಳು ಗೌರವ ಸಲ್ಲಿಸಿ 25 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ.
ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ, ಪಂಪ ಭಾರತ, ರನ್ನನ ಗದಾಯುದ್ಧ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ, ಭಗವದ್ಗೀತೆ, ರಾಮಾಯಣ, ಮಹಾಭಾರತವನ್ನು ಗಮಕದ ಮೂಲಕ ಮನೆ ಮನಗಳಿಗೆ ತಲುಪಿಸಿದರು. ತುಂಬ ಸರಳ, ಸುಶ್ರಾವ್ಯವಾದ ಅವರ ಗಮಕ ಶೈಲಿಯು ಕೇಶವಮೂರ್ತಿ ಘರಾಣವೆಂದೇ ಖ್ಯಾತಿ ಗಳಿಸಿದೆ.
5. ಅಬ್ದುಲ್ ಖಾದರ್ ನಡಕಟ್ಟಿನ್ (ಕೃಷಿ ಪರಿಕರ ಸಂಶೋಧಕ)
ರೈತರಿಗೆ ಪೂರಕವಾಗುವ ಕೃಷಿ ಪರಿಕರಗಳನ್ನು ಆವಿಷ್ಕರಿಸುವ ಮೂಲಕ ಸಾಧನೆಯ ಮೂಲಕವೇ ಶಿಖರವೇರಿ ಅಣ್ಣಿಗೇರಿಯ ರೈತ ವಿಜ್ಞಾನಿ, ಅಬ್ದುಲ್ ಖಾದರ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 'ನಡಕಟ್ಟಿನ ಕೂರಿಗೆ' ಎಂದೇ ಹೆಸರಾದ ಕೃಷಿ ಪರಿಕರಗಳ ಸಂಶೋಧನೆಯಲ್ಲಿ ಅಬ್ದುಲ್ ಖಾದರ್ ಇಮಾಮಸಾಬ ನಡಕಟ್ಟಿನ ಅವರ ಸಾಧನೆ ಬೆರಗು ವಡಿಸುವಂತಹದು. ಕೂರಿಗೆ, ಕುಂಟೆ, ಕುಡ ಹದಗೊಳಿಸುವ ಯಂತ್ರ ಸೇರಿದಂತೆ ಹಲವಾರು ಯಂತ್ರಗಳನ್ನು ಸಂಶೋಧಿಸಿದ್ದಾರೆ. ಇವರು ಸಂಶೋಧಿಸಿದ ಕೃಷಿ ಸಲಕರಣೆಗಳಿಗೆ ಕೇವಲ ಕರ್ನಾಟಕ ಅಷ್ಟೆ ಅಲ್ಲದೇ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿಯೂ ಬಹಳ ಬೇಡಿಕೆಯಿದೆ.
ಅಣ್ಣಿಗೇರಿಯ ಫಾರ್ಮ್ ಹೌಸ್‌ನಲ್ಲಿ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಮೂಲಕ ಹುಣಸೆ ಬೀಜ ಬೇರ್ಪಡಿಸುವ ಯಂತ್ರ, ಉಪ್ಪಿನಕಾಯಿಗೆ ಹುಣಸೆ ಕತ್ತರಿಸುವ ಯಂತ್ರ, ಕಡಿಮೆ ವಿದ್ಯುತ್ ಬಳಸಿ ನೀರೆತ್ತುವ 5 ಎಚ್‌ಪಿ ಮೋಟರ್, ಸ್ವಯಂಚಾಲಿತ ಬಿತ್ತುವ ಕೂರಿಗೆ, ಹೆಚ್ಚು ಕಾಲ ಬಾಳಿಕೆ ಬರುವ ಹೊಲ ಹರಗುವ ಕುಡ, ಭೂಮಿಗೆ ಜೀವ ಕೊಡುವ ರೊಟೋವೇಟರ್, ಗಾಲಿ ಕುಂಟೆ, ದಿಂಡಿನ ಕುಂಟೆ. ಡೀಸೆಲ್ ಉಳಿತಾಯ ಮಾಡುವ ಕುಡ, 5 ಇನ್ 1 ನಡಕಟ್ಟಿನ ಕೂರಿಗೆ ಅಬ್ದುಲ್ ಖಾದರ್ ಅವರ ಪ್ರಮುಖ ಆವಿಷ್ಕಾರಗಳು.
ಹುಣಸೆಗೆ ಸಂಬಂಧಪಟ್ಟಂತೆ ಅವರು ಸಾಕಷ್ಟು ಕಾರ್ಯಗಳನ್ನು ಮಾಡಿರುವುದರಿಂದ ಜನರು ಅವರಿಗೆ 'ಹುಣಸೆ ಮಚ್ಚಾ' ಎಂದು ಪ್ರೀತಿಯಿಂದ ಹೆಸರಿಟ್ಟಿದ್ದಾರೆ. ಇದೀಗ ನಡಕಟ್ಟಿನ ಎಂಬ ಬ್ರಾಂಡ್ ಮೇಲೆಯೇ ಕೃಷಿ ಪರಿಕರಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. 2014-2015ನೇ ಸಾಲಿನಲ್ಲಿ ಜೀವಮಾನವ ಸಾಧನೆ, ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೀಡಿ ಗೌರವಿಸಿದ್ದಾರೆ. ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.
No comments:
Post a Comment