03 ಜನೆವರಿ : ಬಿ. ಎಂ. ಶ್ರೀಕಂಠಯ್ಯನವರ ಜನ್ಮದಿನಾಚರಣೆ
ಬಿ. ಎಂ. ಶ್ರೀಕಂಠಯ್ಯನವರ ಜನನ:
> ಬಿ ಎಂ ಶ್ರೀ ಅವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ 1884 ರ ಜನವರಿ 3 ರಲ್ಲಿ ಜನಿಸಿದರು.
ಬಿ. ಎಂ. ಶ್ರೀಕಂಠಯ್ಯನವರು ಪ್ರಸಿದ್ಧಿಯಾಗಿದ್ದು:
> ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ 20ನೇ ಶತಮಾನದ ಆದಿ ಭಾಗದಲ್ಲಿ ಕನ್ನಡಬಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ.
> ಸುಮಾರು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು.
> ಧಾರವಾಡದಲ್ಲಿ 1911 ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ ಬಗ್ಗೆ ಎಂಬ ಯುಗ ಪ್ರವರ್ತಕ ಕನ್ನಡ ಭಾಷಣವನ್ನು ಮಾಡಿದರು.
> ಜನವಾಣಿ ಬೇರು ಕವಿವಾಣಿ ಹೂವು ಎಂದು ಗರತಿಯ ಹಾಡುಗಳು ಕೃತಿಯ ಮುನ್ನುಡಿಯಲ್ಲಿ ಪ್ರಸಿದ್ಧಿ ಹೇಳಿಕೆ ಇದೆ.
ಬಿ. ಎಂ. ಶ್ರೀಕಂಠಯ್ಯನವರ ವೃತ್ತಿ ಜೀವನ :
> ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 25 ವರ್ಷ ಸೇವೆ ಸಲ್ಲಿಸಿ 1930ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗವಾದರು.ಅನಂತರ ಅವರು 1942ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು 1944ರಲ್ಲಿ 'ಧಾರವಾಡದ ಕೆ.ಇ.ಬೋರ್ಡ್'ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ 'ಆರ್ಟ್ಸ್ ಕಾಲೇಜ್' ಗೆ 'ಪ್ರಾಂಶುಪಾಲಕ'ರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು.
> 'ಬಿ.ಎಂ.ಶ್ರೀಕಂಠಯ್ಯನವರು' ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು.
ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ 'ಮಾಸ್ತಿ', 'ಕುವೆಂಪು', 'ಎಸ್.ವಿ.ರಂಗಣ್ಣ', 'ತೀ.ನಂ.ಶ್ರೀಕಂಠಯ್ಯ', 'ಜಿ.ಪಿ.ರಾಜರತ್ನಂ', 'ಡಿ.ಎಲ್. 'ನರಸಿಂಹಚಾರ್' ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಕೆಲವು ಉತ್ತಮ ನಾಟಕಗಳನ್ನು ಬರೆದರು.
> ಗದಾಯುದ್ಧ,
> ಅಶ್ವತ್ಥಾಮನ್
> ಪಾರಸಿಕರು
> ಪ್ರೊ. ಬಿ.ಎಂ.ಶ್ರೀ.ರವರು', 'ಹೊಂಗನಸು', 'ಇಂಗ್ಲಿಷ್ ಗೀತೆಗಳು' ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರು ನ್ಯೂಮನ್ ಕವಿ ಬರೆದ 'Lead Kindly Light' ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು.
ಶ್ರೀ ಬಿ ಎಂ ಶ್ರೀಕಂಠಯ್ಯ ನವರಿಗೆ ಸಂದ ಪ್ರಶಸ್ತಿಗಳು
> 'ಬಿ.ಎಂ.ಶ್ರೀ'ಯವರಿಗೆ 1938ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು 'ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು.
> 1928ರಲ್ಲಿ 'ಗುಲಬರ್ಗಾ'ದಲ್ಲಿ ನಡೆದ '14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು
ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು ಕನ್ನಡದ ಕಣ್ಮ' ಎಂದು ಕರೆಯಲಾಗುತ್ತದೆ.
ಬಿ. ಎಂ. ಶ್ರೀಕಂಠಯ್ಯ ರವರ ನಿಧನ
> ಜನವರಿ 5, 1946ರಲ್ಲಿ 'ಪ್ರೊ.ಬಿ.ಎಂ.ಶ್ರೀ' ರವರು, 'ಧಾರವಾಡದಲ್ಲಿ ನಿಧನರಾದರು.
No comments:
Post a Comment