02 January 2022 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಹಣಕಾಸು ನೀತಿ ಸಮಿತಿಯ ಪದನಿಮಿತ್ತ ಅಧ್ಯಕ್ಷರು ಯಾರಾಗಿರುತ್ತಾರೆ?
ಎ) ಹಣಕಾಸು ಮಂತ್ರಿ
ಬಿ) ಆರ್‌ಬಿಐ ಗವರ್ನರ್
ಸಿ) ಪ್ರಧಾನಮಂತ್ರಿ
ಡಿ) ರಾಷ್ಟ್ರಪತಿ
ಸರಿಯಾದ ಉತ್ತರ: ಬಿ) ಆರ್‌ಬಿಐ ಗವರ್ನರ್
2. ಪ್ಲಾಸ್ಟಿಕ್ ಚೀಲಗಳ (ವ್ಯವಸ್ಥಾಪಕತೆ ಮತ್ತು ನಿರ್ವಹಣೆ) ನಿಯಮಗಳು 2011ರ ಅನ್ವಯ_______ಗಿಂತ ಕಡಿಮೆ ಮಂದದ ಪ್ಲಾಸ್ಟಿಕ್ ಚೀಲಗಳ ತಯಾರಿಕೆಯನ್ನು ರದ್ದುಗೊಳಿಸಲಾಗಿದೆ?
ಎ) 25 ಮೈಕ್ರಾನ್‌ಗಳು
ಬಿ) 30 ಮೈಕ್ರಾನ್‌ಗಳು
ಸಿ) 35 ಮೈಕ್ರಾನ್‌ಗಳು
ಡಿ) 40 ಮೈಕ್ರಾನ್‌ಗಳು
ಸರಿಯಾದ ಉತ್ತರ: ಡಿ) 40 ಮೈಕ್ರಾನ್‌ಗಳು
3. ಒಂದು ಪರಿಸರ ವ್ಯವಸ್ಥೆಯಲ್ಲಿ ಸದಾಪೋಷಕಾಂಶಗಳು ಯಾವ ರೀತಿಯಲ್ಲಿ ಸಂಚಲನವಾಗುತ್ತದೆ?
ಎ) ಚಕ್ರೀಯ
ಬಿ) ರೇಖಾತ್ಮಕ
ಸಿ) ಸಮಾಂತರ
ಡಿ) ಸಮತಲ
ಸರಿಯಾದ ಉತ್ತರ: ಎ) ಚಕ್ರೀಯ
4. ಸಂಖ್ಯೆಗಳು ಹಾಗೂ ಜೈವಿಕ ರಾಶಿಯ ತೆಲೆಕೆಳಗಾದ ಪಿರಮಿಡ್ ಎಲ್ಲಿ ಕಂಡು ಬರುತ್ತವೆ?
ಎ) ಅನುಕ್ರಮವಾಗಿ ಪರಾವಲಂಬಿ ಆಹಾರ ಸರಪಳಿ ಮತ್ತು ಅರಣ್ಯದ ಜೀವ ಪರಿಸರ ವ್ಯವಸ್ಥೆಯಲ್ಲಿ
ಬಿ) ಅನುಕ್ರಮವಾಗಿ ಹುಲ್ಲುಗಾವಲಿನ ಜೀವ ಪರಿಸರ ವ್ಯವಸ್ಥೆ ಹಾಗೂ ಅರಣ್ಯ ಜೀವ ಪರಿಸರ ವ್ಯವಸ್ಥೆಯಲ್ಲಿ
ಸಿ) ಅನುಕ್ರಮವಾಗಿ ಪರಾವಲಂಬಿ ಆಹಾರ ಸರಪಳಿ ಹಾಗೂ ಕೊಳದ ಜೀವ ಪರಿಸರ ವ್ಯವಸ್ಥೆಯಲ್ಲಿ
ಡಿ) ಅನುಕ್ರಮವಾಗಿ ಕೊಳದ ಜೀವ ಪರಿಸರ ವ್ಯವಸ್ಥೆ ಹಾಗೂ ಅರಣ್ಯ ಜೀವ ಪರಿಸರ ವ್ಯವಸ್ಥೆಯಲ್ಲಿ
ಸರಿಯಾದ ಉತ್ತರ: ಸಿ) ಅನುಕ್ರಮವಾಗಿ ಪರಾವಲಂಬಿ ಆಹಾರ ಸರಪಳಿ ಹಾಗೂ ಕೊಳದ ಜೀವ ಪರಿಸರ ವ್ಯವಸ್ಥೆಯಲ್ಲಿ
5. ಈ ಮುಂದಿನ ಯಾವುದು EX Situ ಸಂರಕ್ಷಣೆಯಾಗುತ್ತದೆ?
ಎ) ವನ್ಯಜೀವಿಧಾಮ
ಬಿ) ಸೀಡ್‌ಬ್ಯಾಂಕ್
ಸಿ) ಸೇಕ್ರೆಡ್‌ಗೋವ್
ಡಿ) ರಾಷ್ಟ್ರೀಯ ಉದ್ಯಾನವನ
ಸರಿಯಾದ ಉತ್ತರ: ಸಿ) ಸೇಕ್ರೆಡ್‌ಗೋವ್
6. ಒಂದು ಸೆಮಿಕಂಡಕ್ಟರ್‌ನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದನ್ನು ಆಧರಿಸಿ ಸೂಕ್ತ ಕಲ್ಮಶಗಳನ್ನು ಅದಕ್ಕೆ ಸೇರಿಸಲಾಗುವುದು ಹೀಗೆ ಮಾಡುವುದರ ಉದ್ದೇಶವೇನು?
ಎ) ಅದರ ಆಯುಷ್ಯ ಹೆಚ್ಚಿಸಲು ಅದು ಅಧಿಕ ವೋಲ್ವೇಜ್ ಗಳನ್ನು
ಬಿ) ತಾಳಿಕೊಳ್ಳುವಂತೆ ಮಾಡಲು
ಸಿ) ಅದರ ವಿದ್ಯುತ್ ವಾಹಕತ್ವವನ್ನು ಹೆಚ್ಚಿಸಲು
ಡಿ) ಅದರ ವಿದ್ಯುತ್ ಪ್ರತಿರೋಧಕತ್ವವನ್ನು ಹೆಚ್ಚಿಸಲು
ಸರಿಯಾದ ಉತ್ತರ: ಸಿ) ಅದರ ವಿದ್ಯುತ್ ವಾಹಕತ್ವವನ್ನು ಹೆಚ್ಚಿಸಲು
7. ಪರಮಾಣುವಿನ ದ್ರವ್ಯರಾಶಿ ಸಂಖ್ಯೆಯು ಯಾವ ಸಂಖ್ಯೆಗೆ ಸಮಾನವಾಗಿರುತ್ತದೆ?
ಎ) ಎಲೆಕ್ಟ್ರಾನ್ ಸಂಖ್ಯೆಗೆ
ಬಿ) ನ್ಯೂಟ್ರಾನ್ ಸಂಖ್ಯೆಗೆ
ಸಿ) ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡನ್ನು ಕೂಡಿದಾಗ ಬರುವ ಸಂಖ್ಯೆಗೆ
ಡಿ) ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಎರಡನ್ನು ಕೂಡಿದಾಗ ಬರುವ ಸಂಖ್ಯೆಗೆ
ಸರಿಯಾದ ಉತ್ತರ: ಸಿ) ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡನ್ನು ಕೂಡಿದಾಗ ಬರುವ ಸಂಖ್ಯೆಗೆ
8. ಉಕ್ಕಿನ ಚೆಂಡನ್ನು ಪಾದರಸದ ಮೇಲ್ವೆಯಲ್ಲಿ ಇರಿಸಿದಾಗ, ಅದು ಮುಳುಗುವುದಿಲ್ಲ ಕಾರಣವೇನೆಂದರೆ
ಎ) ಪಾದರಸದ ಮೇಲೆ ಒತ್ತಡ
ಬಿ) ಪಾದರಸವು ಅರೆ ಘನ (Semi Solid)
ಸಿ) ಪಾದರಸದ ಸ್ನಿಗ್ಧತೆ ಹೆಚ್ಚು
ಡಿ) ಪಾದರಸದ ಸಾಂದ್ರತೆಯು ಉಕ್ಕಿನ ಸಾಂದ್ರತೆಗಿಂತ ಹೆಚ್ಚಿನದಾಗಿದೆ
ಸರಿಯಾದ ಉತ್ತರ: ಡಿ) ಪಾದರಸದ ಸಾಂದ್ರತೆಯು ಉಕ್ಕಿನ ಸಾಂದ್ರತೆಗಿಂತ ಹೆಚ್ಚಿನದಾಗಿದೆ
9. ಎಲೆಕ್ಟ್ರಿಕ್ ಬಲ್ಬ್ ಗಳ ಬದಲಾಗಿ ಬಳಸಲಾಗುತ್ತಿರುವ LED ಯ ವಿಸ್ತ್ರತ ರೂಪ
ಎ) Light-emitting diode
ಬಿ) Led emitting diode
ಸಿ) Light emerging diode
ಡಿ) Led emerging diode
ಸರಿಯಾದ ಉತ್ತರ: ಎ) Light emitting diode
10. ಹಾಲಿನಲ್ಲಿರುವ ಕೆನೆಯನ್ನು ಹಾಲಿನಿಂದ ಬೇರ್ಪಡಿಸಿದರೆ ಅದರ ಸಾಂದ್ರತೆಯು
ಎ) ಹೆಚ್ಚಾಗುತ್ತದೆ
ಬಿ) ಕಡಿಮೆಯಾಗುತ್ತದೆ
ಸಿ) ಯಾವುದೇ ವ್ಯತ್ಯಾಸವಾಗುವುದಿಲ್ಲ
ಡಿ) ಮೊದಲು ಹೆಚ್ಚಿ ನಂತರ ಕಡಿಮೆಯಾಗುತ್ತದೆ
ಸರಿಯಾದ ಉತ್ತರ: ಬಿ) ಕಡಿಮೆಯಾಗುತ್ತದೆ