Bank of India Recruitment 2021: Apply Online for Security Officers Now
ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಪ್ರಸ್ತುತ ಬ್ಯಾಂಕ್‌ನಲ್ಲಿ 25 ಸೆಕ್ಯುರಿಟಿ ಅಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಹುದ್ದೆಗಳಿಗೆ ಮಿಡಲ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್ 2 ರ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಸಾಮಾನ್ಯ ವರ್ಗದ ಅಭ್ಯರ್ಥಿಗೆ 11 ಸ್ಥಾನ, ಎಸ್ಸಿಗೆ-02
ಎಸ್ಟಿಗೆ-02, ಇತರ ಹಿಂದುಳಿದ ವರ್ಗಕ್ಕೆ 9, ಆರ್ಥಿಕವಾಗಿ
ದುರ್ಬಲವಾಗಿರುವ ಅಭ್ಯರ್ಥಿಗೆ 1 ಸ್ಥಾನ ಕಾಯ್ದಿರಿಸಲಾಗಿದೆ.
Bank of India Recruitment 2021: Total Number of Vacancies :
ಒಟ್ಟು ಹುದ್ದೆಗಳು : 25
ಅಂಗವಿಕಲರು ಈ ಹುದ್ದೆಗೆ ಅರ್ಹರಲ್ಲದ ಕಾರಣ ಅವರು ಅರ್ಜಿ ಸಲ್ಲಿಸುವುದು ಬೇಡ ತಂದು ತಿಳಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಸೂಚಿಸಲಾಗಿದೆ.
Bank of India Recruitment 2021: Salary Details : ವೇತನ
ಮಾಸಿಕ 48,170- 69,810 ರೂ. ವೇತನ ಇರಲಿದೆ.
Bank of India Recruitment 2021: Educational Qualifications : ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. 3 ತಿಂಗಳ ಕಂಪ್ಯೂಟರ್ ಕೋರ್ಸ್/ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ತರಬೇತಿ ಪಡೆದ ಪ್ರಮಾಣಪತ್ರ ಅಥವಾ ಪದವಿ ಹಂತದಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ.
Bank of India Recruitment 2021: Applicatiin Fees Details : ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 175 ರೂ., ಇತರ
ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
Bank of India Recruitment 2021: Selection Process Details ಆಯ್ಕೆ ಪ್ರಕ್ರಿಯೆ:
ಸಂದರ್ಶನ/ ಗುಂಪು ಚರ್ಚೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು.
Bank of India Recruitment 2021: Age Limit Details ವಯೋಮಿತಿ :
ದಿನಾಂಕ: 01.11.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು 02.11.1981
ರಿಂದ 01.11.1996ರ ನಡುವೆ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜು ಸಲ್ಲಿಸಲು ಕೊನೆಯ ದಿನಾಂಕ: 07-01-2022
ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: https://bit.ly/3ziaIIF
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: www.bankofindia.co.in
No comments:
Post a Comment