21 December 2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ರಾಷ್ಟ್ರಕೂಟರ ಕೊನೆಯ ಆಡಳಿತಗಾರ ಯಾರು?
ಎ) 3ನೇ ಕೃಷ್ಣ
ಬಿ) 3ನೇ ಇಂದ್ರ
ಸಿ) 3ನೇ ಗೋವಿಂದ
ಡಿ) 2ನೇ ಕರ್ಕ
ಸರಿಯಾದ ಉತ್ತರ: ಡಿ) 2ನೇ ಕರ್ಕ
2. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
ಎ) ಪೆಟ್ರೋಲಿಯಂ ಉತ್ಪಾದನೆ - ಹಳದಿ ಕ್ರಾಂತಿ
ಬಿ) ಸೆಣಬು ಉತ್ಪಾದನೆ - ಗುಲಾಬಿ ಕ್ರಾಂತಿ
ಸಿ) ಮೀನು ಉತ್ಪಾದನೆ - ನೀಲಿ ಕ್ರಾಂತಿ
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ: ಸಿ) ಮೀನು ಉತ್ಪಾದನೆ - ನೀಲಿ ಕ್ರಾಂತಿ
3. ಈ ಕೆಳಗಿನವುಗಳಲ್ಲಿ ಯಾವುದು ಕೃಷ್ಣಾ ನದಿಯ ಉಪನದಿಯಾಗಿವೆ?
ಎ) ಘಟಪ್ರಭಾ
ಬಿ) ಮಲಪ್ರಭಾ
ಸಿ) ತುಂಗಭದ್ರಾ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
4. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನೇತರ ಸಂಸ್ಥೆಯಾಗಿದೆ?
ಎ) ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಷ್ಟ್ರೀಯ ಆಯೋಗ
ಬಿ) ರಾಜ್ಯ ಮಾನವ ಹಕ್ಕುಗಳ ಆಯೋಗ
ಸಿ) ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರ
ಡಿ) ಬಿ ಮತ್ತು ಸಿ
ಸರಿಯಾದ ಉತ್ತರ: ಬಿ) ರಾಜ್ಯ ಮಾನವ ಹಕ್ಕುಗಳ ಆಯೋಗ
5. ಪಟ್ಟಿ-1 ನ್ನು ಪಟ್ಟಿ-2 ಹೊಂದಿಸಿ ಕೆಳಗೆಕೊಟ್ಟಿರುವ
ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ
ಎ. ಡಾಲ್ಪಿನ್ 1. ಸರೀಸೃಪ
ಬಿ. ಹಲ್ಲಿ 2. ಉಭಯವಾಸಿ
ಸಿ. ಶಾರ್ಕ್ 3.ಸಸ್ತನಿ
ಡಿ. ಕಪ್ಪೆ 4. ಮೀನು
ಸಂಕೇತಗಳು
ಎ) ಎ-2, ಬಿ-3, ಸಿ-4, ಡಿ-4
ಬಿ) ಎ-1. ಬಿ-4, ಸಿ-2, ಡಿ-3
ಸಿ) ಎ-4. ಬಿ-1, ಸಿ-2, ಡಿ-1
ಡಿ) ಎ-3, ಬಿ-1, ಸಿ-4, ಡಿ-2
ಸರಿಯಾದ ಉತ್ತರ: ಡಿ) ಎ-3, ಬಿ-1, ಸಿ-4, ಡಿ-2
6. ಈ ಕೆಳಗಿನವುಗಳಲ್ಲಿ ಯಾವುದು ರಕ್ತ ಹೆಪ್ಪುಗಟ್ಟಲು ಬೇಕಾಗುತ್ತದೆ
ಎ) ಮೊನೊಸೈಟ್
ಬಿ) ಮ್ಯಾಕ್ರೋಫೇಜ್
ಸಿ) ಪ್ಲೇಟ್ಲಟ್
ಡಿ) ಇಯೋ ನೋಫಿಲ್ಸ್
ಸರಿಯಾದ ಉತ್ತರ: ಸಿ) ಪ್ಲೇಟ್ಲಟ್
7. ಈ ಕೆಳಗಿನವುಗಳಲ್ಲಿ ಯಾವುದು ನಿದ್ರಾರೋಗಕ್ಕೆ ಕಾರಣವಾದ ಟ್ರಿಪಾನೋಸೋಮ್ ಬ್ರುಸೈಯನ್ನು ಅತಿಥೇಯ ಮನುಷ್ಯನಿಗೆ ಕಳುಹಿಸುವ ವಾಹಕವಾಗಿದೆ?
ಎ) ಹೂಯಿಗೆ ನೊಣ
ಬಿ) ಟ್ಸೆಟ್ಸೆ ನೊಣ
ಸಿ) ಮನೆ ನೊಣ
ಡಿ) ಟ್ರಿಯೋಟೊಮೈನ್ ತಿಗಣೆ
ಸರಿಯಾದ ಉತ್ತರ: ಬಿ) ಟ್ಸೆಟ್ಸೆ ನೊಣ
8. ಮಾನವನ ದೇಹದಲ್ಲಿ ಅತಿ ವಿಪುಲವಾಗಿ ಇರುವ ಪ್ರೋಟಿನ್ ಯಾವುದು?
ಎ) ಬ್ಯೂಬಲಿನ್
ಬಿ) ಕೂಲಾಜಿನ್
ಸಿ) ಅಲ್ಬುಮಿನ್
ಡಿ) ಕೆರಾಟಿನ್
ಸರಿಯಾದ ಉತ್ತರ: ಬಿ) ಕೂಲಾಜಿನ್
9. ನೀರು ಆಧಾರಿತ ದ್ರವಗಳನ್ನು ಇವುಗಳ PH ಆಧರಿಸಿ ಆಮ್ಲೀಯ ತಬಸ್ಥ ಹಾಗೂ ಪ್ರತ್ಯಾಮ್ಲಯ ಎನ್ನಲಾಗುತ್ತದೆ. ಈ ಕೆಳಗಿನವುಗಳಲ್ಲಿ ಯಾವುದು ಹಾಲಿನ ವರ್ಗವಾಗಿದೆ.
ಎ) ಕೊಂಚ ಆಮ್ಲೀಯ
ಬಿ) ಪ್ರಬಲ ಆಮ್ಲ
ಸಿ) ತಟಸ್ಥ
ಡಿ) ಕೊಂಚ ಪ್ರತ್ಯಾಮ್ಲೀಯ
ಸರಿಯಾದ ಉತ್ತರ: ಎ) ಕೊಂಚ ಆಮ್ಲೀಯ
10. ನೀರನ್ನು ಲೋಟದ ಕಂಠಪೂರ್ತಿ ಹಾಕಿ ಅದರಲ್ಲಿದ್ದ ಮಂಜುಗಡ್ಡೆ ದ್ರವಿಸಿದರೆ ಏನಾಗುವುದು?
ಎ) ಮಂಜುಗಡ್ಡೆ ನೀರಾದೊಡನೆಯೇ ಲೋಟದ ನೀರು ತುಂಬಿ ಹರಿಯುವುದು
ಬಿ) ಲೋಟದಲ್ಲಿನ ನೀರಿನ ಮಟ್ಟ ಬದಲಾಗದ ಹಾಗೆ ಇರುವುದು
ಸಿ) ಮಂಜುಗಡ್ಡೆ ಕರಗಿದಂತೆ ನೀರಿನ ಮಟ್ಟ ಕೊಂಚ ತಗ್ಗುವುದು
ಡಿ) ಇದನ್ನು ಹೇಳಲು ಆಗುವುದಿಲ್ಲ
ಸರಿಯಾದ ಉತ್ತರ: ಬಿ) ಲೋಟದಲ್ಲಿನ ನೀರಿನ ಮಟ್ಟ ಬದಲಾಗದ ಹಾಗೆ ಇರುವುದು