Breaking

Wednesday, 3 November 2021

02 November 2021 Detailed Daily Current Affairs in Kannada for All Competitive Exams

         

02 November 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ.

💥 Click here to Read Daily Current Affairs in Kannada  

ಪಶ್ಚಿಮ ಕಮಾಂಡ್ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಖಂಡೂರಿ ನೇಮಕ

ಚಂಡಿಮಂದಿರದಲ್ಲಿರುವ ಭಾರತೀಯ ಸೇನೆಯ ಪಶ್ಚಿಮ ಕಮಾಂಡ್‌ನ ಮುಂದಿನ ಮುಖ್ಯಸ್ಥರನ್ನಾಗಿ “ಆರ್ಮಿ ಏರ್ ಡಿಫೆನ್ಸ್ ಕಾರ್ಪ್ಸ್” ಅಧಿಕಾರಿ ಲೆಫ್ಟಿನೆಂಟ್ ಜನರಲ್ ನವ್. ಕೆ. ಖಂಡೂರಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಾಗಿದೆ.

* ಜಮ್ಮು ಸೆಕ್ಟರ್‌ನ ಕೆಲವು ಭಾಗದಿಂದ ಪಂಜಾಬ್‌ವರೆಗೆ ಪಾಕಿಸ್ತಾನದೊಂದಿಗೆ ಭಾರತದ ಗಡಿಯನ್ನು ನೋಡಿಕೊಳ್ಳದ ಜವಾಬ್ದಾರಿಯನ್ನು ಈ ಕಮಾಂಡ್ ಹೊಂದಿದೆ.


ಜನರಲ್ ನವ್. ಕೆ. ಖಂಡೂರಿ ಅವರು ಶೀಘ್ರದಲ್ಲೇ ಅಧಿಕಾರವಹಿಸಿಕೊಳ್ಳಲಿದ್ದು, ಜನರಲ್ ಆರ್.ಪಿ.ಸಿಂಗ್ ರವರ ಸ್ಥಾನ ತುಂಬಲಿದ್ದಾರೆ. ಈ ಹಿಂದೆ ಅವರು ಸುಕ್ಕಾ ಮೂಲದ ತ್ರಿಶಕ್ತಿ ಕಾರ್ಪ್ಸ್ ನ ಕಮಾಂಡರ್ ಆಗಿದ್ದರು.

* ಜನರಲ್ ಖಂಡೂರಿ ಅವರು ಆಪರೇಷನಲ್ ಲಾಜಿಸ್ಟಿಕ್ಸ್ ಮತ್ತು ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್ ನ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.


ಜನರಲ್ ಖಂಡೂರಿ ಅವರು ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು ಮತ್ತು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ. ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದ ನಂತರ ಡಿಸೆಂಬರ್ 1983 ರಲ್ಲಿ ಅವರನ್ನು ಸೇನೆಯ ವಾಯು ರಕ್ಷಣಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.


ಸ್ಪೇಸ್‌ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭ

ಪ್ರಪಂಚದ ನಂ 1. ಶ್ರೀಮಂತ ಎಲಾನ್ ಮಸ್ಟ್ ಮಾಲೀಕತ್ವದ ಸ್ಪೇಸ್ ಎಕ್ಸ್ ಅಧೀನ ಸಂಸ್ಥೆ “ಸ್ಟಾರ್ ಲಿಂಕ್” ಭಾರತದಲ್ಲಿ 2022 ರಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಟರ್ಮಿನಲ್‌ಗಳಿಗೆ ಸರ್ಕಾರದಿಂದ ಅನುಮತಿ ಕೋರಿದ್ದು “ಸ್ಟಾರ್ ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ ಪ್ರೈ.ಲಿ” ಭಾರತದಲ್ಲಿ ತನ್ನ ಕಚೇರಿಯನ್ನು ಆರಂಭಿಸಲಿದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Space - X ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ


* ಸ್ಥಾಪನೆ :6 ಮೇ 2002

* ಮಾದರಿ : ಏರೋಸ್ಪೇಸ್ ಸಂವಹನ

* ಸ್ಥಾಪಕ : ಏಲಾನ್ ಮಸ್ಕ್

* ಅಧ್ಯಕ್ಷ : ಗ್ವಿನ್ನೆ ಶಾಟ್‌ವೆಲ್

* ಸೇವೆಗಳು

1. ಅರ್ಬಿಟಲ್ ರಾಕೆಟ್ ಉಡಾವಣೆ

2. ಉಪಗ್ರಹ ಇಂಟರ್ನೆಟ್


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಎಲಾನ್ ಮಸ್ಕ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


* ಜನನ- 28 ಜೂನ್ 1971, ಪ್ರಿಟೋರಿಯಾ, ದಕ್ಷಿಣಾ ಆಫ್ರಿಕಾ


ಸ್ಥಾಪಿಸಿದ ಪ್ರಮುಖ ಕಂಪನಿಗಳು


1. ಜಿಪ್ 2

4. ಸ್ಪೇಸ್.ಎಕ್ಸ್

2. X.Com

5. ಟೆಸ್ಲಾ

3, ಪೇಪಾಲ್ 

6. Open A1



ಜನಸೇವಕ ಯೋಜನೆ

ರಾಜ್ಯದ ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ “ಜನಸೇವಕ” ಮತ್ತು ಏಕೀಕೃತ ಸಾರ್ವಜನಿಕ ಕುಂದು ಕೊರತೆ ನಿವಾರಣೆ ಮಾಡುವ “ಜನಸ್ಪಂದನ” ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.


* ಪ್ರಸ್ತುತ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ, ಈ ಯೋಜನೆ ರಾಜ್ಯಾದ್ಯಂತ ಜಾರಿಗೊಳಿಸಲಾಗುತ್ತದೆ.

 

ಜನಸೇವಕ ಯೋಜನೆ

 

ಇದು ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಒಂದು ಯೋಜನೆಯಾಗಿದೆ. ಆಧಾರ್ ನವೀಕರಣ, ಕಂದಾಯ ಇಲಾಖೆಯ ವಿಧವಾ ವೇತನ ಆದಾಯ, ಜಾತಿ ಪ್ರಮಾಣ ಪತ್ರ, ಪಿಂಚಣಿ ಸೇರಿ 21 ಸೇವೆಗಳು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಲಭಿಸುವ ಮದುವೆ ಶೈಕ್ಷಣಿಕ ಮತ್ತು ಪಿಂಚಣಿ ಸಹಾಯಧನ ಅರ್ಜಿ ಸೇರಿ 9 ಸೇವೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯ ಖಾತಾ ಬದಲಾವಣೆ ಮತ್ತು ವರ್ಗಾವಣೆ ಸೇರಿ 18 ಸೇವೆಗಳು ಹಾಗೂ ಇತರೆ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.


ಜನಸ್ಪಂದನ ಯೋಜನೆ


ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಪೋರ್ಟಲ್‌ನಲ್ಲಿ ಲಾಗಿನ್ ಆಗುವ ಮೂಲಕ 1902 ಸಹಾಯವಾಣಿಗೆ ಕರೆ ಮಾಡಿ 33 ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಿ ಆನ್‌ಲೈನ್ ಸೇವೆ ಪಡೆಯಬಹುದು. ಆರೋಗ್ಯ, ನೀರು & ವಿದ್ಯುತ್ ಶಕ್ತಿ ವಲಯ ಹೊರತು ಪಡಿಸಿ ಪಡಿಸಿ ಇತರೆ ದೂರುಗಳಿಗೆ ಪರಿಹಾರ ಪಡೆದುಕೊಳ್ಳುವ & ವ್ಯವಸ್ಥೆಯನ್ನು ಜನಸ್ಪಂದನ ಯೋಜನೆ ಒಳಗೊಂಡಿದೆ.



ಕಾರ್ಬನ್ ಮುಕ್ತ ಭಾರತಕ್ಕೆ ಪಂಚಸೂತ್ರಗಳು


ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಹವಾಮಾನ ವೈಪರೀತ್ಯದ ತಡೆ ಕ್ರಮಗಳನ್ನು ಪ್ರತಿಪಾದಿಸಿದೆ. 2070 ರ ವೇಳೆಗೆ ದೇಶವನ್ನು ಸಂಪೂರ್ಣ ಕಾರ್ಬನ್ ಮುಕ್ತಗೊಳಿಸಲು ಪಂಚಸೂತ್ರಗಳನ್ನು ಮಂಡಿಸಿದ್ದಾರೆ.


ಪಂಚ ಸೂತ್ರಗಳು


1. ಪಳೆಯುಳಿಕೆ ಹೊರತು ಪಡಿಸಿದ ಇಂಧನ ಮೂಲಗಳ ಬಲವರ್ಧನೆಗೆ ಆದ್ಯತೆ, 2030 ರ ವೇಳೆಗೆ ಇಂತಹ ಸುರಕ್ಷಿತ ವಿದ್ಯುತ್ ಉತ್ಪಾದನೆ ಪ್ರಮಾಣ 500 ಮೆ.ವ್ಯಾ ಹೆಚ್ಚಿಸುವ ಗುರಿ.

2. 2030 ರ ವೇಳೆಗೆ ಭಾರತ ಅಗತ್ಯ ಇರುವ ವಿದ್ಯುತ್ ಪ್ರಮಾಣವನ್ನು ನವೀಕೃತ ಇಂಧನ ಮೂಲಗಳಿಂದ ಪಡೆಯಲಿದೆ.

3. 2030 ರ ಹೊತ್ತಿಗೆ ಇಂಗಾಲ ಹೊರಸೂಸುವಿಕೆಯಲ್ಲಿ ಶೇ50% ರಷ್ಟು ತಗ್ಗಿಸುವ ಗುರಿ.

4. ಆರ್ಥಿಕತೆ ಮೇಲೆ ಆಗುತ್ತಿರುವ ಇಂಗಾಲ ಪರಿಣಾಮವನ್ನು 2030 ರ ವೇಳೆಗೆ ಶೇ 45% ರಷ್ಟು ತಗ್ಗಿಸುವ ಶಪಥ ಮಾಡಲಾಗಿದೆ.

5. 2070 ರ ವೇಳೆಗೆ ಮಾಲಿನ್ಯ ಹೊರ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಪಣ ತೊಡಲಾಗಿದೆ.


ಹಸಿರು ಮನೆ ಅನಿಲ ವರದಿ ಬಿಡುಗಡೆ

ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ಇತ್ತೀಚೆಗೆ ಹಸಿರುಮನೆ ಅನಿಲ ವರದಿ (ಗ್ರೀನ್‌ಹೌಸ್ ಗ್ಯಾಸ್ ಬುಲೆಟಿನ್ ಜಿಎಚ್‌ಜಿ) ಅನ್ನು ಬಿಡುಗಡೆ ಮಾಡಿದೆ. ಹಸಿರುಮನೆ ಅನಿಲಗಳ ಬಿಡುಗಡೆಯ ಪ್ರಮಾಣ ಮತ್ತೊಮ್ಮೆ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ವರದಿಯಲ್ಲಿ ಸೂಚಿಸಿದೆ.


ಸರಾಸರಿ ಹೆಚ್ಚಳ


ವಾತಾವರಣದಲ್ಲಿ ಉಷ್ಣತೆಯನ್ನು ಹೀರುವ ಹಸಿರುಮನೆ ಅನಿಲದ ಪ್ರಮಾಣವು 2020ರಲ್ಲಿ ಮತ್ತೆ ಹೊಸ ದಾಖಲೆ ಮಟ್ಟವನ್ನು ತಲುಪಿದೆ. ಎಂದು ಈ ವರದಿ ತಿಳಿಸಿದೆ. ಏರಿಕೆಯ ವಾರ್ಷಿಕ ದರವು 2011-2020 ರ ಸರಾಸರಿಗಿಂತ ಹೆಚ್ಚಾಗಿದೆ. ಈ ಪ್ರವೃತ್ತಿ 2021 ರಲ್ಲೂ ಮುಂದುವರಿದಿದೆ.


ಇಂಗಾಲ ಸಾಂದ್ರತೆ


ಇಂಗಾಲದ ಡೈ ಆಕ್ಸೆಡ್ (CO) ಸಾಂದ್ರತೆಯು 413.2 ಪಿಪಿಎಮ್ ಗೆ ಏರಿಕೆಯಾಗಿದೆ. ಅದು ಕೈಗಾರಿಕಾ-ಪೂರ್ವಮಟ್ಟದ ಶೇಕಡ 149 ರಷ್ಟಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ. ಮಿಥೇನ್ (ಸಿಎಚ್ 4) ಶೇ. 262 ಮತ್ತು ನೈಟ್ರಸ್ ಆಕ್ಸೆಡ್ (ಎನ್‌2ಒ) 1750 ಮಟ್ಟಕ್ಕೆ ಏರಿದ್ದು, ಶೇಕಡ 123 ಬೆಳವಣಿಗೆ ಕಂಡಿದೆ. ಮಾನವ ಚಟುವಟಿಕೆಗಳು ಭೂಮಿಯ ನೈಸರ್ಗಿಕ ಸಮತೋಲನವನ್ನು ಹಾಳು ಮಾಡಲು ಆರಂಭವಾದ ನಂತರದ ಕಾಲಮಾನದಲ್ಲಿ ಇದು ದಾಖಲಾಗಿದೆ.


ಪ್ರಸಕ್ತ ಮಾನವ ಚಟುವಟಿಕೆಗಳಿಂದ ಹೊರಸೂಸುವ ಅರ್ಧದಷ್ಟು CO, ವಾತಾವರಣದಲ್ಲೇ ಇರುತ್ತದೆ. ಇನ್ನರ್ಧ ಭಾಗ ಭೂಮಿ ಮತ್ತು ಸಾಗರ-ಸಮುದ್ರಗಳು ಹೀರುತ್ತವೆ. 


ಮಾಲಿನ್ಯ ಮತ್ತು ಜಾಗತಿಕ ತಾಪಮಾನ 


ಹೊಗೆ ಸೂಸುವಿಕೆ (ಎಮಿಷನ್) ಮುಂದುವರಿಯುವಷ್ಟು ಕಾಲ ಜಾಗತಿಕ ತಾಪಮಾನ ಏರುತ್ತಲೇ ಇರುತ್ತದೆ. CO, ಜೀವಿತಾವಧಿ ಸುದೀರ್ಘವಾಗಿರುವುದರಿಂದ ಭೂಮಿಯ ಪ್ರಸಕ್ತ ತಾಪಮಾನ ಹಲವು ದಶಕಗಳ ಕಾಲ ಹೀಗೆ ಇರಲಿದೆ. ಅನಿಲ ಸೂಸುವಿಕೆಯನ್ನು ತ್ವರಿತವಾಗಿ ಶೂನ್ಯ ಮಟ್ಟಕ್ಕೆ ಇಳಿಸಿದರೂ ತಾಪಮಾನ ಹೀಗೆಯೇ ಮುಂದುವರಿಯಲಿದೆ ವಿಶ್ವ ಹವಾಮಾನ ಸಂಸ್ಥೆ ವಿಶ್ವ ಹವಾಮಾನ ಸಂಸ್ಥೆಯು (ಡಬ್ಲೂಎಂಒ) ವಿಶ್ವ ಸಂಸ್ಥೆಯ ಒಂದು ವಿಶೇಷ ಏಜೆನ್ಸಿ ಆಗಿದೆ. ಹವಾಮಾನಶಾಸ್ತ್ರ, ಜಲವಿಜ್ಞಾನ, ವಾತಾವರಣ ವಿಜ್ಞಾನ, ಮತ್ತು ಜಿಯೋಫಿಸಿಕ್ಸ್ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದು ಈ ಸಂಸ್ಥೆಯ ಹೊಣೆಯಾಗಿದೆ. 1873 ರಲ್ಲಿ ಸ್ಥಾಪಿತವಾದ ಸರ್ಕಾರೇತರ ಸಂಸ್ಥೆಯಾಗಿರುವ ಅಂತಾರಷ್ಟ್ರೀಯ ಹವಾಮಾನ ಸಂಸ್ಥೆಯಿಂದ ಡಬ್ಲೂಎಂಬ ಹುಟ್ಟಿಕೊಂಡಿದೆ.


Cop 26 ಸಮಾವೇಶ


ಸ್ಕಾಟ್ಲಂಡ್‌ನ ಗ್ಲಾಸ್ಗೋದಲ್ಲಿ ಆ.31 ರಿಂದ ಆರಂಭವಾಗಿ ನ.12 ರ ವರೆಗೆ ನಡೆಯಲಿರುವ ಸಮಾವೇಶದಲ್ಲಿ 197 ಸದಸ್ಯ ದೇಶಗಳು ಭಾಗವಹಿಸುತ್ತಿವೆ. ಇದು “ಹವಾಮಾನ ಬದಲಾವಣೆ ಸಂಬಂಧಿತ ವಿಶ್ವಸಂಸ್ಥೆ ಯೋಜನಾ ಚೌಕಟ್ಟು” (ಯುಎನ್‌ಎಫ್ಸಿಸಿಸಿ) ಸಂಘಟನೆ ನಡೆಸುತ್ತಿರುವ ಕಾರ್ಯಕ್ರಮ, ಇದನ್ನು 26ನೇ ಸದಸ್ಯರ ಸಮಾವೇಶ (ಸಿಒಪಿ 26) ಎಂದು ಕರೆಯಲಾಗುತ್ತಿದೆ. ಅಮೇರಿಕ, ಚೀನಾ, ಭಾರತ ಸೇರಿದಂತೆ ಎಲ್ಲ ದೊಡ್ಡ ದೇಶಗಳು ಈ ಸಮಾವೇಶದಲ್ಲಿ ಭಾಗವಹಿಸಿವೆ.


ಶೂನ್ಯ ಗುರಿಯತ್ತ ಹೆಜ್ಜೆ


2050ರ ಸುಮಾರಿಗೆ ಇಡೀ ಜಗತ್ತಿನ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಶೂನ್ಯ ತಲುಪಬೇಕು. ಎಂಬುದು ದೊಡ್ಡಗುರಿ. ಇದನ್ನು 'ನಿವ್ವಳ ಶೂನ್ಯ' ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ನಿವ್ವಳ ಶೂನ್ಯ ಎಂದರೆ ವಾತಾವರಣಕ್ಕೆ ಹೊರಸೂಸುವ ಮತ್ತು ಅಲ್ಲಿಂದ ನಿವಾರಿಸುವ ಹಸಿರುಮನೆ ಅನಿಲಗಳ ನಡುವೆ ಸಮತೋಲನವನ್ನು ಸಾಧಿಸುವುದು. ನಿವ್ವಳ ಶೂನ್ಯ ಗುರಿಗೆ ಬದ್ಧರಾಗಲು ದೇಶಗಳು ಮತ್ತು ಸಂಸ್ಥೆಗಳಿಗೆ ಒತ್ತಡ ಹೆಚ್ಚುತ್ತಿದೆ. ಆದರೆ ಇದಕ್ಕೆ ಟೀಕೆಗಳೂ ಇವೆ. ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಗ್ಯಾಸ್ ಇಂಧನಗಳ ಬಳಕೆಯಲ್ಲಿ ತೀವ್ರವಾದ ಮತ್ತು ತಕ್ಷಣದ ಕಡಿತ ಮಾಡದಿದ್ದರೆ 2050 ರ ವೇಳೆಗೆ ಶೂನ್ಯ ಗುರಿ ಸಾಧಿಸಲು ಸಾಧ್ಯವಿಲ್ಲ, ಈಗಾಗಲೇ 130 ಕ್ಕೂ ಹೆಚ್ಚು ದೇಶಗಳು ಶತಮಾನದ ಮಧ್ಯಭಾಗದಲ್ಲಿ ಅನಿಲ ಹೊರಸೂಸುವಿಕೆ ಶೂನ್ಯಕ್ಕೆ ತಗ್ಗಿಸುವ ಗುರಿಯನ್ನು ನಿಗದಿಪಡಿಸಿವೆ ಅಥವಾ

ಪರಿಗಣಿಸುತ್ತಿವೆ. ದೊಡ್ಡ ಹೂಡಿಕೆದಾರರು,2,100 ದೊಡ್ಡ ಕಾರ್ಪೋರೇಟ್‌ಗಳು ವಿಶ್ವಸಂಸ್ಥೆ ಬೆಂಬಲಿತ ' ರೇಸ್ ಟು ಜೀರೋ' ಅಭಿಯಾನದ ಅಡಿಯಲ್ಲಿ ನಿವ್ವಳ ಶೂನ್ಯ ಗುರಿಯತ್ತ ಸಾಗುತ್ತಿದ್ದಾರೆ. ವಿಶ್ವದ 20 ದೊಡ್ಡ ಆರ್ಥಿಕತೆಗಳ ನಾಯಕರು ಪ್ಯಾರಿಸ್ ಒಪ್ಪಂದದ ಗುರಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಕೈಗಾರಿಕಾ ಕ್ರಾಂತಿಯ ಕಾಲದ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಮಟ್ಟವನ್ನು ಜಾಗತಿಕ ತಾಪಮಾನ ದಾಟದಿರುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ.


ಸಿಒಪಿ 26 ಪ್ರಾಮುಖ್ಯತೆ


ಪ್ಯಾರಿಸ್ ಹವಾಮಾನ ಶೃಂಗ ಸಭೆ' ಯಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳು ಮತ್ತು ಈ ಹಿಂದಿನ ಯುಎನ್ ಎಫ್ ಸಿಸಿಸಿ ಸಭೆಗಳ ಗುರಿಗಳ ಕಡೆ ಕಣ್ಣು

ಹಾಯಿಸಲು, ಕ್ರಮಗಳನ್ನು ವೇಗಗೊಳಿಸಲು ಈ ಸಮಾವೇಶ ನೆರವಾಗಲಿದೆ. ಪ್ಯಾರಿಸ್ ಒಪ್ಪಂದದ ಭಾಗವಾಗಿ, ಪ್ರತಿ ದೇಶವೂ ತನ್ನ ಕಾರ್ಬನ್ ಹೊರ ಸೂಸುವಿಕೆ ಕಡಿತ ಮಾಡಲು ಒಪ್ಪಿಕೊಂಡಿವೆ. ಪ್ರತಿ ದೇಶವೂ 5 ವರ್ಷಗಳಿಗೊಮ್ಮೆ ತನ್ನ ರಾಷ್ಟ್ರೀಯ ನಿರ್ಧರಿತ ದೇಣಿಗೆ (ಎನ್‌ಡಿಸಿ) ಯನ್ನು ನೀಡುತ್ತದೆ. ಕಾಲಾಂತರದಲ್ಲಿ ಕಾರ್ಬನ್ ಹೆರ ಸ ಸ ವಿಕೆ ಕಡಿಮೆಯಾಗುತ್ತ ಹೋಗಬೇಕು. ಆಯಾ ದೇಶಗಳು ತಮ್ಮ ಸಂಪೂರ್ಣ ಆರ್ಥಿಕತೆಯಲ್ಲಿ ಅಥವಾ ನಿರ್ಧಿಷ್ಟ ವಲಯಗಳಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ಎಷ್ಟು ಕಡಿಮೆ ಮಾಡಲು ಯೋಚಿಸುತ್ತವೆ ಎಂಬುದನ್ನು ಈ ಗುರಿಗಳು ಹೇಳುತ್ತವೆ. ಮೊದಲ ಐದು ವರ್ಷಗಳ ಅವಧಿ 2020ಕ್ಕೆ ಮುಗಿದಿದೆ. ಮುಂದಿನ ವರ್ಷಗಳಲ್ಲಿ ನಾವು ತೆಗೆದುಕೊಳ್ಳುವ ಗುರಿ ಯಾವುದು ಎಂಬುದನ್ನು ಗ್ಲಾಸ್ಟೋದಲ್ಲಿ ಪ್ರತಿ ದೇಶವೂ ಹೇಳಬೇಕು.


ಭಾರತದ ಸ್ಥಿತಿಗತಿ


* ಭಾರತ ಈಗಾಗಲೇ ಹಸಿರುಮನೆ ಅನಿಲಗಳ ಸೂಸುವಿಕೆ ತಡೆಗಟ್ಟಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಪ್ಯಾರಿಸ್ ಒಪ್ಪಂದದಲ್ಲಿ ಬದ್ಧತೆ ಪ್ರದರ್ಶಿಸಿದ ಹಲವು ಅಂಶಗಳನ್ನು ಈಡೇರಿಸಿದೆ.

* 2030 ರೊಳಗೆ ತನ್ನ ವಿದ್ಯುತ್ ಬಳಕೆಯ ಶೇ.40 ರಷ್ಟನ್ನು ಮರು ಬಳಸಬಹುದಾದ, ಪಳೆಯುಳಿಕೆಂರುಲ್ಲದ

ಮೂಲಗಳಿಂದ ಪಡೆಯುವುದಾಗಿ ವಚನ ನೀಡಿತ್ತು. 2021 ರೊಳಗೆ ನಾವು ಇದರ 38.5% ತಲುಪಿದ್ದೇವೆ. ನಿಗದಿತ ಗುರಿಗಿಂತಲೂ ಮುಂದಿದ್ದೇವೆ.

* 2030 ರೊಳಗೆ ನಮ್ಮ ಜಿಡಿಪಿಯ ಹೊರಸೂಸುವಿಕೆ ಸಾಂದ್ರತೆ ಶೇ.35 ರಷ್ಟು ಇಳಿಸುವುದಾಗಿ ಹೇಳಿದ್ದು, ಈಗಾಗಲೇ ಶೇ.24 ರಷ್ಟು ತಲುಪಿದ್ದೇವೆ.

* ಪೆಟ್ರೋಲ್, ಡೀಸೆಲ್, ಉರುವಲು ಬಳಕೆ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದು, ವಿದ್ಯುತ್‌ಚಾಲಿತ ವಾಹನಸ್ನೇಹಿ ಕ್ರಮಗಳನ್ನು ತೆಗೆದುಕೊಂಡಿದೆ. ಇ-ವಾಹನಗಳಿಗೆ ಸಹಾಯಧನ, ಹೂಡಿಕೆ ಮಾಡುತ್ತಿದೆ.

* ಸೋಲಾರ್‌ ಇಂಧನಕ್ಕೆ ಸಹಾಯಧನ ನೀಡುತ್ತಿದೆ. ಹೆಚ್ಚಿನ ಹಾನಿಕಾರಕ ಅನಿಲ ಹೊರಸೂಸದ ಹೈಡೋಜನ್ ಇಂಧನ, ನೈಸರ್ಗಿಕ ದ್ರವ ಇಂಧನಗಳ ಶೋಧ ಸಂಸ್ಕರಣೆ ಹಾಗೂ ಬಳಕೆಗೆ ಒತ್ತು.

* 2030ರ ಹೊತ್ತಿಗೆ ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ಕಡಿಮೆಗೊಳಿಸುವ, 2.5 ರಿಂದ 3 ಶತಕೋಟಿ ಟನ್‌ಗಳಷ್ಟು ಕಾರ್ಬನ್ ಡಯಾಕ್ಸೆಡ್ ಅನ್ನು ಸಂಸ್ಕರಿಸಬಲ್ಲ ಹಸಿರು ಕವಚವನ್ನು ಬೆಳೆಸುವ ಚಿಂತನೆ ಹೊಂದಿದೆ.


ಭಾರತಕ್ಕಿರುವ ಸವಾಲುಗಳು


* ದೇಶದ ಜನಸಂಖ್ಯೆ 139 ಕೋಟಿಯನ್ನೂ ಮೀರಿ ಮುನ್ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಇಂಧನ ಬೇಡಿಕೆ-ಬಳಕೆ, ಆಹಾರ ಉತ್ಪಾದನೆ ವಲಯಗಳಲ್ಲಿ ಹೊರಸೂಸುವಿಕೆ ಕಡಿಮೆ ಮಾಡುವುದು ಕಷ್ಟದಾಯಕ, ಕಡಿಮೆ ಜನಸಾಂದ್ರತೆಯಿರುವ ಶ್ರೀಮಂತ ದೇಶಗಳ ಗುರಿಯ ಜೊತೆಗೆ ಭಾರತ ನಿಲ್ಲಲು ಸಾಧ್ಯವಿಲ್ಲ.

* ಮುಂದಿನ ವರ್ಷಗಳಲ್ಲಿ 'ಪರಿಸರ ಹೂಡಿಕೆ' ಬಲು ಗಣನೀಯ ವೆಚ್ಚವಾಗಲಿದೆ. ಇದಕ್ಕೆ ಸಂಪನ್ಮೂಲಗಳನ್ನು ಹೊಂದಿಸುವುದು ಕಷ್ಟಸಾಧ್ಯ. 


ಜಾಗತಿಕ ತಾಪಮಾನ ಏರಿಕೆ ಆತಂಕ 


2040 ಕ್ಕಿಂತ ಮೊದಲೇ ಜಗತ್ತಿನ ಸರಾಸರಿ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಬದಲಾವಣೆ ಕುರಿತ ಅಂತರ್ ಸರಕಾರಿ ಸಮಿತಿ (ಐಪಿಸಿಸಿ) ವರದಿ ನೀಡಿದೆ. ಇದು ವಿಶ್ವಸಂಸ್ಥೆಯಡಿ ನಡೆಯುವ, ವಿಶ್ವ ಹವಾಮಾನ ಶಾಸ್ತ್ರ ಸಂಸ್ಥೆ (ಡಬ್ಲೂಎಂಒ) ಹಾಗೂ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಸೇರಿ ನಡೆಸುತ್ತಿರುವ ತಜ್ಞರ ಒಂದು ಸಮಿತಿ, ಈ ಸಮಿತಿ, ಈ ವರದಿಯು ಅಂತಾರಾಷ್ಟ್ರೀಯ ಸಮುದಾಯ ತೆಗೆದುಕೊಳ್ಳುವ ಪರಿಸರಸ್ನೇಹಿ ಕ್ರಮಗಳಿಗೆ ಆಧಾರ ಹಾಗೂ ಅಂತಾರಾಷ್ಟ್ರೀಯ ಹವಾಮಾನ ಮಾತುಕತೆಗಳಿಗೆ ಅಡಿಪಾಯ. ಇದರ ಐದನೇ ವರದಿ 2014 ರಲ್ಲಿ ಬಂದಿದ್ದು, ಪ್ಯಾರಿಸ್ ಸಮಾವೇಶದಲ್ಲಿ ಚರ್ಚೆಗೆ ಆಧಾರವಾಗಿತ್ತು. ಈಗ ಆರನೇ ವರದಿ ಬಂದಿದ್ದು, Cop 26 ಕ್ಕೆ ಆಧಾರವಾಗಿದೆ. ಈಗಿನ ಹಸಿರುಮನೆ ಅನಿಲಗಳನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡರೂ ಈ ದಶಕದ ಅಂತ್ಯದಲ್ಲಿ ಜಾಗತಿಕ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ತಡೆಯುವುದು ಸಾಧ್ಯವಿಲ್ಲ. ಅತ್ಯಂತ ಕಠಿಣ ಮಹತ್ವಾಕಾಂಕ್ಷಿ ಕ್ರಮಗಳನ್ನು ತೆಗೆದುಕೊಂಡರೂ 2030ರ ದಶಕದಲ್ಲಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಏರಲಿದೆ. ಭೂಮಿಯ ಮೇಲೆ ಇಲ್ಲ ಕಡೆಯೂ 1.5 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಏರಿಕೆಯಾದರೆ, ಪ್ರಕೃತಿಯಲ್ಲಿ ಗಣನೀಯ ಬದಲಾವಣೆಯಾಗುತ್ತದೆ. ಹಿಮಪ್ರದೇಶಗಳು ಹೆಚ್ಚು ಪ್ರಮಾಣದಲ್ಲಿ ಕರಗುತ್ತವೆ. ನದಿಗಳಲ್ಲಿ ಪ್ರವಾಹ ಉಂಟಾಗುತ್ತದೆ. ಸಮುದ್ರ ಮಟ್ಟ ಏರುತ್ತದೆ. ಕೆಲವು ಕರಾವಳಿ ಪ್ರದೇಶಗಳು, ತಗ್ಗಿನಲ್ಲಿರುವ ದ್ವೀಪಗಳು ಮುಳುಗಬಹುದು. ಮಳೆ ಹಾಗೂ ಬಿಸಿಲಿನ ಚಕ್ರ ಏರುಪೇರಾಗುತ್ತದೆ. ಇದರಿಂದ ಕೃಷಿಗೆ ಭಾರಿ ಹಾನಿ ಉಂಟಾಗಿ, ಆಹಾರ ಉತ್ಪಾದನೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಬಹುದು. ಅಕಾಲಿಕ ಚಂಡಮಾರುತಗಳು ಉಂಟಾಗಬಹುದು.


ಪ್ರಮುಖಾಂಶಗಳು

1. ಕಾಂತಾವರ ಕನ್ನಡ ಸಂಘ ಕೊಡ ಮಾಡುವ 2021 ನೇ ಸಾಲಿನ “ಮುದ್ದಣ ಕಾವ್ಯ ಪ್ರಶಸ್ತಿ” ಗೆ ಚಿತ್ರದುರ್ಗದ ಸಾಹಿತಿ ವಿಮರ್ಶಕಿ “ಡಾ ತಾರಿಣಿ ಶುಭಾವಾಯಿನಿ” ಅವರ “ವಿವೇಕಿಯ ಸ್ವಾಗತ” ಕವನ ಸಂಕಲನದ ಹಸ್ತ ಪ್ರತಿಯನ್ನು ಆಯ್ಕೆ ಮಾಡಲಾಗಿದೆ.


2. ರಾಯಭಾರಿಗಳ ನೇಮಕ 

 

ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ “ಪವನ್ ಕಪೂರ್” ಹಾಗೂ “ಯುನೈಟೆಡ್ ಅರಬ್ ಎಮಿರೆಟ್ಸ್” ಗೆ “ಸಂಜಯ್ ಸುಧೀರ್ ರನ್ನು ಹಾಗೂ ಸ್ಪೇನ್‌ಗೆ “ದಿನೇಶ್ ಕೆ ಪಟ್ನಾಯಕ್ ಅವರನ್ನು ನೇಮಕ ಮಾಡಲಾಗಿದೆ.


3. ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಇದ್ದ ಕನಿಷ್ಠ ವಯೋಮಿತಿ 60 ವರ್ಷವನ್ನು ಸಡಿಲಿಸುವುದರ ಜೊತೆಗೆ ಪ್ರಶಸ್ತಿ ಮೊತ್ತವನ್ನು 1 ಲಕ್ಷ ದಿಂದ 5 ಲಕ್ಷಕ್ಕೆ ಏರಿಸಲಾಗಿದ್ದು, ಈ 5 ಮಾನದಂಡವು 2022 ರಿಂದ ಅನ್ವಯಗೊಳ್ಳಲಿದೆ. ಪ್ರಸ್ತುತ ವರ್ಷದಲ್ಲಿ 66 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು.




 ಇವುಗಳನ್ನೂ ಓದಿ 

 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್...

100 Question Answers General Knowledge Quiz in Kannada For All Competitive Exams

  100 Question Answers General Knowledge Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ  ಪ್ರಶ್ನೋತ್ತರಗಳ ಕ್ವಿಜ್   www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

SSLC Social Science 2022 All Chapterwise Quiz in Kannada For All Competitive Exams

  SSLC Social Science 2022 All Chapterwise Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

Top-10 Indian Constitution Question Answers in Kannada for All Competitive Exams-01

  Top-10 Indian Constitution Question Answers in Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!!  KPSC NOTES MCQS  ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ  ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ  ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  "ಭಾರತದ ಸಂವಿಧಾನದ ಟಾಪ್-10 ಪ್ರಶ್ನೋತ್ತರಗಳು"  ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!!  Top-10 Indian Constitution Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Polic...

17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher'...

16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು

          16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top General Knowledge One-liner Question Answers in Kannada for All Competitive Exams-13

Top General Knowledge One-liner Question Answers in Kannada for All Competitive Exams-13 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher...

20th March 2025 Daily Current Affairs Quiz in Kannada for All Competitive Exams

          20th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-20th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

29th March 2025 Daily Current Affairs Quiz in Kannada for All Competitive Exams

          29th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-29th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs