Breaking

Wednesday, 3 November 2021

01 November 2021 Detailed Daily Current Affairs in Kannada for All Competitive Exams

        

01 November 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ.

💥 Click here to Read Daily Current Affairs in Kannada  


ರಾಷ್ಟ್ರೀಯ ಏಕತಾ ದಿವಸ - ಅಕ್ಟೋಬರ್ 31

01 November 2021 Detailed Daily Current Affairs in Kannada for All Competitive Exams


ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತಗಳನ್ನು ಒಗ್ಗೂಡಿಸಿ ಏಕೀಕರಣ ಪರಿಕಲ್ಪನೆಗೆ ನಾಂದಿ ಹಾಡಿದವರು “ಭಾರತದ ಉಕ್ಕಿನ ಮನುಷ್ಯ" ಸರ್ದಾರ್ ವಲ್ಲಭಭಾಯಿ ಪಟೇಲ್, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ನಾಯಕರಾಗಿದ್ದ ವಲ್ಲಭಬಾಯಿ ಪಟೇಲ್ ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾಗಿದ್ದರು. ಇಂದು ಅವರ 145ನೇ ಜನ್ಮದಿನವಾಗಿದೆ. ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಅವರ ಜನ್ಮದಿನವನ್ನು "ರಾಷ್ಟ್ರೀಯ ಏಕತಾ ದಿವಸ” ಎಂದು ಆಚರಿಸಲಾಗುತ್ತದೆ.

* ಜನನ - ಅಕ್ಟೋಬರ್ 31, 1875 ಗುಜರಾತಿನ ನಡಿಯಾದ್

* ತಂದೆ - ಝವೇರ್‌ಭಾಯ್ ಪಟೇಲ್


ಸರ್ದಾರ ವಲ್ಲಭಭಾಯಿ ಪಟೇಲರಿಗೆ ಝವೆರ್ಬೆನ್‌ನೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿತ್ತು. ಇವರು ತಮ್ಮ 36ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಮಿಡ್ ಟೆಂಪಲ್ ಇನ್ ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು. ನಂತರ ಅಹಮದಾಬಾದಿನಲ್ಲಿ ನೆಲೆನಿಂತು ಅಗ್ರಮಾನ್ಯ ಬ್ಯಾರಿಸ್ಟರ್ ಗಳಲ್ಲಿ ಒಬ್ಬರೆಂದು ಹೆಸರಾದರು.


ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ:


ವಕೀಲಿ ವೃತ್ತಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರೂ ಪಟೇಲರನ್ನು ಸೆಳೆದಿದ್ದು ಸ್ವಾತಂತ್ರ್ಯ ಹೋರಾಟ 1918ರಲ್ಲಿ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಚಂಪಾರಣ್ಯ ಸತ್ಯಾಗ್ರಹದ ನಂತರ ಗಾಂಧಿಯವರು ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತೀ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು.


ಸಾಮಾಜಿಕ ಹೋರಾಟಗಳು:


1) 1919ರಿಂದ 1928ರವರೆಗೆ ಅಸ್ಪೃಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಞಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು.

2) 1922ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು.

3) 1923ರಲ್ಲಿ ನಾಗಪುರ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.

4) ಮುಂಬೈ ಸರಕಾರ ಕಂದಾಯವನ್ನು 22% ಹೆಚ್ಚಿಸಿದ್ದರಿಂದ ಇದರ ವಿರುದ್ಧ ವಲ್ಲಭಭಾಯಿ ಪಟೇಲರ ನೇತೃತ್ಯದಲ್ಲಿ 1928ರ ಲ್ಲಿ ಬಾರ್ಡೋಲಿ ಸತ್ಯಾಗ್ರಹ ಹೋರಾಟ ಹಮ್ಮಿಕೊಂಡಿದ್ದರು.

* ಈ ಹೋರಾಟಕ್ಕೆ ಗಾಂಧೀಜಿ “Young India” ಎಂಬ ಪತ್ರಿಕೆಯ ಮೂಲಕ ಬೆಂಬಲ ವ್ಯಕ್ತಪಡಿಸಿದರು.

* ಈ ಹೋರಾಟದಲ್ಲಿ ಪಟೇಲರು “ಸತ್ಯಾಗ್ರಹ” ಎಂಬ ಪತ್ರಿಕೆಯನ್ನು ಹೊರಡಿಸಿ ಸ್ವಯಂ ಸೇವಕರ ಮೂಲಕ ಹಳ್ಳಿ-ಹಳ್ಳಿಗೂ ತಲುಪಿಸಿದರು.

* ಪಟೇಲರ ಮಗಳು “ಮಣಿಬೇನ್” ಸಹ ಹೋರಾಟದಲ್ಲಿ ಭಾಗಿಯಾಗಿದ್ದರು.

* ಈ ಚಳುವಳಿ ಯಶಸ್ವಿಯಾಗಿದ್ದಕ್ಕೆ ಗಾಂಧೀಜಿಯವರು ಪಟೇಲರಿಗೆ “ಸರ್ದಾರ” ಎಂಬ ಬಿರುದು ನೀಡಿ ಗೌರವಿಸಿದರು.

5) 1920-1945 ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

6) 1947 ಅಗಸ್ಟ್ 15 ರಿಂದ 1950ರ ಡಿಸೆಂಬರ್ 15 ರವರೆಗೆ ಕೇಂದ್ರ ಗೃಹ ಮಂತ್ರಿ ಹಾಗೂ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.


ಸಂಸ್ಥಾನಗಳ ವಿಲೀನೀಕರಣ:


ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು. 1947ರ ವಿಲೀನ ಕಾಯ್ದೆಯ ಪ್ರಕಾರ ಭಾರತ ಸರ್ಕಾರ ಎಲ್ಲಾ ದೇಶೀಯ ಸಂಸ್ಥಾನಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರುವಂತೆ ಆಹ್ವಾನಿಸಲಾಯಿತು.

* 562 ಸಂಸ್ಥಾನಗಳಲ್ಲಿ ಹೈದರಾಬಾದ್, ಜುನಾಗಢ ಮತ್ತು ಜಮ್ಮು ಕಾಶ್ಮೀರ ಮೂರು ಸಂಸ್ಥಾನಗಳು ತೀವ್ರ ಪ್ರತಿರೋಧ ತೋರಿದವು.

1) ಹೈದರಾಬಾದ್ ನಿಜಾಮ ವಿಲೀನಿಕರಣಕ್ಕೆ ಒಪ್ಪದಿದ್ದಾಗ 1948ರಲ್ಲಿ ಪಟೇಲರು ಸೇನೆ ಕಳುಹಿಸಿದಾಗ, “ಆಪರೇಷನ್ ಪೋಲೋ” ಕಾರ್ಯಾಚರಣೆಯಲ್ಲಿ ರಜಾಕರರು ಕೊಲ್ಲಲ್ಪಟ್ಟರು. 1948 ಸೆಪ್ಟೆಂಬರ್ 17 ರಂದು ಈಗಿನ ಬೀದರ್ ಜಿಲ್ಲೆಯ ಹುಮನಾಬಾದಿನಲ್ಲಿ” ನಿಜಾಮರ ಸೈನ್ಯ ಶರಣಾಯಿತು.

2) 1948ರಲ್ಲಿ ಜುನಾಗಢ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು.

3) 1947ರಲ್ಲಿನ ಕಾಶ್ಮೀರ ವಿಲೀನದ ಸಂದರ್ಭದಲ್ಲಿ, ಜನೆವರಿ-01 1949ರ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಕದನ ವಿರಾಮವಾದಾಗ “ಪಾಕ್ ಆಕ್ರಮಿತ ಕಾಶ್ಮೀರ” ಪಾಕಿಸ್ತಾನದ ಬಳಿಯೇ ಉಳಿಯಿತು.

ಭಾರತದ ಬಿಸ್ಮಾರ್ಕ್:


ಭಾರತವನ್ನು ಒಗ್ಗೂಡಿಸುವುದು ಸುಲಭವಾದ ಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು “ಭಾರತದ ಬಿಸ್ಮಾರ್ಕ್” ಎಂದು ಕರೆಯಲಾಗುತ್ತದೆ.


ಏಕತೆ ಪ್ರತಿಮೆ


ಸರ್ದಾರ್ ಪಟೇಲರ ಸ್ಮರಣಾರ್ಥ ನಿರ್ಮಿಸಿರುವ ಏಕತೆ ಪ್ರತಿಮೆ 182 ಮೀಟರ್ (597 ಅಡಿ) ನಷ್ಟು ಎತ್ತರವಿದ್ದು, ವಿಶ್ವದ ಅತಿ ಎತ್ತರದ ಪ್ರತಿಮೆಯೆಂಬ ದಾಖಲೆಯನ್ನು ಹೊಂದಿದೆ. ಗುಜರಾತಿನ ವಡೋದರಾ ನಗರದ 100 km ಆಗ್ನೆಯ ಭಾಗದಲ್ಲಿರುವ “ರಾಜಿಪ್ಲಾ” ಬಳಿಯ “ಸರ್ದಾರ್ ಸರೋವರ” ಆಣೆಕಟ್ಟೆಗೆ ಎದುರಾಗಿ ಈ ಪ್ರತಿಮೆಯನ್ನು 2014ರಲ್ಲಿ ಶಂಕುಸ್ಥಾಪನೆ ನೆರವೇರಿಸಿ, ಅಕ್ಟೋಬರ್ 31, 2018ರಂದು ಪಟೇಲ್‌ರವರ 143ನೇ ಜನ್ಮವಾರ್ಷಿಕೋತ್ಸವದಂದು ಲೋಕಾರ್ಪಣೆ ಮಾಡಲಾಯಿತು.

* ಅಂದಾಜು ಮೊತ್ತ - 420 ಮಿಲಿಯನ್ ಡಾಲರ್

* ಕಂಪೆನಿ - ಲಾರ್ಸನ್ ಅಂಡ್ ಟಾರ್ಬೋ


ರಾಷ್ಟ್ರೀಯ ಏಕತಾ ದಿವಸ ಆಚರಣೆ ಉದ್ದೇಶ :


ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿ ಕ್ರಮಗಳು ಬರದೇ ಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವರಾಗಿದ್ದ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಇಂದು ಸದೃಢ ಭಾರತವನ್ನು ಕಟ್ಟಿವೆ. ದೇಶದ ಏಕತೆಗಾಗಿ ಸರ್ದಾರ್ ಪಟೇಲ್ ಅವರು ನಡೆಸಿದ ಹೋರಾಟ ಮತ್ತು ಅವರ ಸಂದೇಶ ಸಾರುವುದು ಈ ದಿನಾಚರಣೆಯ ಉದ್ದೇಶವಾಗಿದೆ.


ಸೂಚನೆಗಳು:

1) 1991ರಲ್ಲಿ ಸದಾರ್ ವಲ್ಲಭಭಾಯಿ ಪಟೇಲರಿಗೆ ಮರಣೋತ್ತರ “ಭಾರತರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2) ಸಂವಿಧಾನ ರಚನೆ ಸಮಿತಿಯಲ್ಲಿ “ಮೂಲಭೂತ ಹಕ್ಕುಗಳ ಸಮಿತಿ”, “ಅಲ್ಪಸಂಖ್ಯಾತರ ಸಮಿತಿ” ಹಾಗೂ “ಬುಡಕಟ್ಟು ವರ್ಗಗಳ ಸಮಿತಿ” ಯ ಅಧ್ಯಕ್ಷರಾಗಿದ್ದರು.


ನಿವೃತ್ತ ಲೋಕಾಯುಕ್ತ ನ್ಯಾ.ವೆಂಕಟಾಚಲ ನಿಧನ

01 November 2021 Detailed Daily Current Affairs in Kannada for All Competitive Exams


ಮೊದಲ ಲೋಕಾಯುಕ್ತರಾಗಿ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನರಾಗಿದ್ದ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಇತ್ತೀಚೆಗೆ ನಿಧನರಾಗಿದ್ದಾರೆ.


ಎನ್. ವೆಂಕಟಾಚಲಯ್ಯ


* ಜನನ - 3 ಜುಲೈ 1930

* ಮರಣ - 30 ಅಕ್ಟೋಬರ್ 2019

# ವೆಂಕಟಾಚಲ ಅವರು 16 ನವೆಂಬರ್ 1955 ಮೈಸೂರಿನ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಆರಂಭ.

* 1992 ರಲ್ಲಿ ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

* ಜುಲೈ 01, 1992 ರಂದು ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಲೋಕಾಯುಕ್ತ ಸಂಸ್ಥೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


ವಿವಿಧ ರಾಜ್ಯಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ದುರಾಡಳಿತದ ವಿರುದ್ಧ ನಾಗರಿಕ ದೂರುಗಳನ್ನು ಪರಿಶೀಲಿಸಲು ಲೋಕಾಯುಕ್ತರನ್ನು ನೇಮಕ ಮಾಡಲಾಗಿದೆ.

* ಲೋಕಾಯುಕ್ತ ಕಾಯ್ದೆಯನ್ನು ಒರಿಸ್ಸಾ ರಾಜ್ಯವು 1970 ರಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದಿದೆ.

* ಲೋಕಾಯುಕ್ತರನ್ನು ಮಹಾರಾಷ್ಟ್ರವು ಪ್ರಥಮವಾಗಿ

* ಕರ್ನಾಟಕ ರಾಜ್ಯದಲ್ಲಿ 1984 ರಲ್ಲಿ ಲೋಕಾಯುಕ್ತ ಸ್ಥಾಪನೆ ಮಾಡಲಾಯಿತು.

* ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ.

* ಪ್ರಸ್ತುತ ಲೋಕಾಯುಕ್ತ - ಪಿ. ವಿಶ್ವನಾಥ್ ಶೆಟ್ಟಿ

* ಲೋಕಾಯುಕ್ತ ಅಧಿಕಾರವಧಿ -5 ವರ್ಷ ಅಥವಾ 65 ವರ್ಷ ವಯಸ್ಸು.


ವಿಶ್ವ ಕಿಕ್ ಬಾಕ್ಸಿಂಗ್‌ನಲ್ಲಿ ತಜಮುಲ್‌ಗೆ ಚಿನ್ನದ ಪದಕ

01 November 2021 Detailed Daily Current Affairs in Kannada for All Competitive Exams


ಭಾರತದ ಪ್ರತಿಷ್ಠಿತ ಯೋಜನೆ “ಬೇಟಿ ಪಡಾವೋ.. ಬೇಟಿ ಬಚಾವೋ”ದ ರಾಯ ಭಾರಿಯಾಗಿರುವ ಜಮ್ಮು-ಕಾಶ್ಮೀರದ ಕಿಕ್ ಬಾಕ್ಸರ್ ತಜ ಮುಲ್ ಇಸ್ಲಾಂ, ಕಿಕ್ ಬಾಕ್ಸಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಜಮ್ಮು-ಕಾಶ್ಮೀರದ ಏಕೈಕ ಕಿಕ್ ಬಾಕ್ಸಿಂಗ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಈಜಿಪ್ಪನ ಕೈರೋದಲ್ಲಿ ಅಕ್ಟೋಬರ್ 22ರಂದು ನಡೆದ 14 ವರ್ಷ ದೊಳಗಿನವರ ಕಿಕ್ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಲಾಲೀನಾ ಅವರನ್ನು ಪರಾಭವಗೊಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

* ತಜಮುಲ್, ಜನಿಸಿದ್ದು, ಉತ್ತರ ಕಾಶ್ಮೀರದ ಬಂಡಿಪೋರಾದ ಶ್ರೀನಗರದಲ್ಲಿ. 2016ರಲ್ಲಿ ಇಟಲಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನ 9 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆಗ ಅಲ್ಲಿ ವಿಶ್ವದ 90 ದೇಶಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ತಜಮುಲ್, ಟೂರ್ನಿಯಲ್ಲಿ ಒಟ್ಟು ಅತಿಥೇಯ ಈಜಿಪ್ಟ್ನ ಇಬ್ಬರು, ಫ್ರಾನ್ಸ್ ಹಾಗೂ ಅರ್ಜೆಂಟೀನಾ ಸ್ಪರ್ಧಿಗಳನ್ನು ಎದುರಿಸಿದರು.


ಒಂದು ವಿಶ್ವ ಒಂದು ಆರೋಗ್ಯ



ಜಾಗತಿಕ ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ 'ಒಂದು ಭೂಮಿ; ಒಂದು ಆರೋಗ್ಯ' ಎಂಬ ದೃಷ್ಟಿ ಕೋನ ಹೊಂದಿರಬೇಕಾದ್ದು ಅವಶ್ಯ ಎಂಬ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು.


ರೋಮ್‌ನಲ್ಲಿ ಜಿ-20 ರಾಷ್ಟ್ರಗಳ 16ನೇ ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ ಸಂಕಷ್ಟವನ್ನು ಎದುರಿಸುವುದಕ್ಕಾಗಿ ಜಗತ್ತಿನ ನೆರವಿನೊಂದಿಗೆ ಮುಂದಿನ ವರ್ಷದ ಕೊನೆಯ ಹೊತ್ತಿಗೆ 500 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಉತ್ಪಾದಿಸಿ ಕೊಡಲು ಭಾರತ ಸಿದ್ಧವಿದೆ. ಮಾರಣಾಂತಿಕ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾರತದ ಕೊಡುಗೆ, ನಿರ್ವಹಿಸುತ್ತಿರುವ ಪ್ರಮುಖ ಪಾತ್ರ ಕೊಡುಗೆ, ನಿರ್ವಹಿಸುತ್ತಿರುವ ಪ್ರಮುಖ ಪಾತ್ರ ಗಮನಾರ್ಹ, ಭಾರತದ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಒಪ್ಪಿಗೆ ನೀಡಿಲ್ಲ. ಇದಕ್ಕೆ ಒಪ್ಪಿಗೆ ಸಿಕ್ಕರೆ ಭಾರತ ಇತರೆ ದೇಶಗಳಿಗೆ ನೆರವಾಗವುದಕ್ಕೆ ಸಾಧ್ಯವಾಗಲಿದೆ.


ಶೃಂಗಸಭೆಯ ಪ್ರಮುಖ ವಿದ್ಯಮಾನಗಳು


ಇನ್ನು 4 ವರ್ಷದಲ್ಲಿ ಕಾರ್ಬನ್ ಕಡಿಮೆ ಮಾಡುವ ಗುರಿ ತಲುಪಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೇಲೆ ಒತ್ತಡ ಹೇರಿದರೂ ಅದರಿಂದ ಪ್ರಯೋಜನವೇನೂ ಆಗಿಲ್ಲ ಎಂದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್. ಜಗತ್ತಿನ ಬಡ ರಾಷ್ಟ್ರಗಳಿಗೆ 6.7 ಕೋಟಿ ಲಸಿಕೆ ಡೋಸ್‌ಗಳನ್ನು ಫ್ರಾನ್ಸ್ ವಿತರಿಸಿದೆ. ವಿಶ್ವಸಂಸ್ಥೆ ಬೆಂಬಲಿತ ಕೊವಾಕ್ಸ್ ಅನ್ನು ಅತಿಹೆಚ್ಚು ವಿತರಿಸಿದ ಎರಡನೇ ರಾಷ್ಟ್ರ ಎಂಬ ಕೀರ್ತಿ ನಮ್ಮ ಎರಡನೇ ರಾಷ್ಟ್ರ ಎಂಬ ಕೀರ್ತಿ ನಮ್ಮ ದೇಶಕ್ಕೆ ಎಂದ ಫ್ರಾನ್ಸ್ ವಿದೇಶಾಂಗ ಸಚಿವ ಯೇವ್ಸ್ ಲೇ ಡ್ರಿಯಾನ್.


ರೋಮ್‌ನಲ್ಲಿ ಜಿ20 ಶೃಂಗದ ಸ್ಥಳಕ್ಕೆ ಸಮೀಪದಲ್ಲಿ ಹವಾಮಾನ ವೈಪರೀತ್ಯ ತಡೆಗೆ ಸರ್ಕಾರಗಳು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.


ಶೃಂಗ ಸಭೆಯ ಧೈಯವಾಕ್ಯ :


“ಪೀಪಲ್, ಪ್ಲಾನೆಟ್ ಮತ್ತು ಪ್ರಾಸ್ಟೆರಿಟಿ” (ಪಿಪಿಪಿ) ಎಂಬುದು ಈ ಸಲದ ಜಿ-20 ಶೃಂಗದ ಧೈಯವಾಕ್ಯವಾಗಿದೆ.


ಜಾಗತಿಕ ಆರೋಗ್ಯ ವ್ಯವಸ್ಥೆ, ಮೂಲಸೌಕರ್ಯ ಬಲಪಡಿಸುವ ವಿಚಾರ, ಕರೊನಾ ಸೋಂಕು ನಿರ್ಮೂಲನೆ ಮಾಡುವ ವಿಷಯಗಳ ಕಡೆಗೆ ಈ ಬಾರಿಯ ಶೃಂಗಸಭೆಯಲ್ಲಿ ಹೆಚ್ಚಿನ ಗಮನಹರಿಸಲಾಯಿತು.


ಕನಿಷ್ಠ ತೆರಿಗೆ ನೀತಿ

ಬಹುರಾಷ್ಟ್ರೀಯ ಕಂಪನಿಗಳಿಗೆ ಜಾಗತಿಕ ಕನಿಷ್ಟ ತೆರಿಗೆ ವಿಧಿಸುವ ಯೋಜನೆ ಜಾರಿಗೆ ಒಲವು ವ್ಯಕ್ತವಾಗಿದೆ. ಜಿ-20 ಶೃಂಗದಲ್ಲಿ ಅಂಗೀಕಾರವಾಗುವ ನಿರೀಕ್ಷೆ ಇದೆ. ಅಮೇರಿಕ, ಜಿ-20 ಶೃಂಗವು ಜಾಗತಿಕ ಆರ್ಥಿಕತೆ, ಕರೊನಾ ಸೋಂಕು ಮುಂತಾದ ಕಾರ್ಯ ಸೂಚಿ ಹೊಂದಿವೆಯಾದರೂ, ಜಾಗತಿಕ ಕನಿಷ್ಟ ತೆರಿಗೆ ಯೋಜನೆಗೆ ಅನುಮೋದನೆ ಪಡೆಯುವುದು ಮುಖ್ಯ ಉದ್ದೇಶವಾಗಿದೆ. ಬಹುರಾಷ್ಟ್ರೀಯ ಕಂಪನಿ (ಎಂಎನ್‌ಸಿ)ಗಳು ತೆರಿಗೆ ತಪ್ಪಿಸಿ ಕಡಿಮೆ ತೆರಿಗೆ ಇರುವ ರಾಷ್ಟ್ರಗಳಲ್ಲಿ ವಹಿವಾಟು ಮುಂದುವರಿಸುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಜಿ-20 ಒಕ್ಕೂಟದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


* ರಚನೆ - 26 ಸೆಪ್ಟಂಬರ್ 1999

* ಉದ್ದೇಶ ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ವ್ಯವಸ್ಥಿತವಾದ ಪ್ರಮುಖವಾದ ಕೈಗಾರಿಕೀಕರಣಗೊಂಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳನ್ನು ಒಟ್ಟುಗೂಡಿಸುವುದು.

* ಅಧ್ಯಕ್ಷ - ಮಾರಿಯೊ ಡ್ರಾಗಿ

* ಇದೊಂದು 19 ರಾಷ್ಟ್ರಗಳು ಮತ್ತು ಯುರೋಪಿಯನ್ ಯೂನಿಯನ್‌ನ್ನು ಒಳಗೊಂಡಿದೆ.


ಕರ್ನಾಟಕ ರಾಜ್ಯೋತ್ಸವ : ನವೆಂಬರ್ 1


ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್ 1ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956 ನವೆಂಬರ್ 1 ರಂದು ನಿರ್ಮಾಣವಾದುದರ ಸಂಕೇತವಾಗಿ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಘೋಷಣೆ ಮಾಡಿದ ರಾಜ್ಯವೇ - ಮೈಸೂರು ರಾಜ್ಯ (ಈಗಿನ ಕರ್ನಾಟಕ)ವಾಗಿದೆ.


ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು

ಕರ್ನಾಟಕ ಏಕೀಕರಣ ಚಳುವಳಿಯನ್ನು 1905ರಲ್ಲಿ ಪ್ರಾರಂಭಿಸಿದರು. ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡವು.


ಕರ್ನಾಟಕ ಏಕೀಕರಣ


ರಾಜಕೀಯವಾಗಿ ಭಿನ್ನ-ಭಿನ್ನ ಆಡಳಿತದ ಘಟಕಗಳ ವ್ಯಾಪ್ತಿಗೆ ಸೇರಿದ ಕನ್ನಡ ಮಾತನಾಡುವ ಜನ ಮತ್ತು ಪ್ರದೇಶಗಳು ಸರಿಸುಮಾರು 20 ಆಡಳಿತ ಘಟಕಗಳಲ್ಲಿ ಹಂಚಿ ಹೋಗಿದ್ದವು. ಈ ಎಲ್ಲಾ ಪ್ರಾಂತ್ಯಗಳನ್ನು ಒಂದೂಗೂಡಿಸಿ  ಕನ್ನಡ ಭಾಷಿಕರ ಸಮೃದ್ಧ ನಾಡನ್ನು ಕಟ್ಟುವುದೇ ಏಕೀಕರಣದ ವಿಶೇಷವಾಗಿತ್ತು.


ಏಕೀಕರಣ ನಡೆದು ಬಂದ ಹಾದಿ

ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಿ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ, ಆರ್ .ಎಚ್. ದೇಶಪಾಂಡೆ ನೇತೃತ್ವದಲ್ಲಿ 1890ರಲ್ಲಿ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು.

* 1915ರಲ್ಲಿ ಕನ್ನಡ ಪರಿಷತ್ ಸ್ಥಾಪಿಸಲಾಯಿತು. ಇದು ಪ್ರತಿವರ್ಷ ಒಂದೊಂದು ಊರಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿ ಕನ್ನಡ ಸಂಸ್ಕೃತಿ ಮತ್ತು ಸಂವರ್ಧನೆಗೆ ಸಹಕರಿಸಿತು.

* 1916ರಲ್ಲಿ ಆಲೂರು ವೆಂಕಟರಾಯರ ನೇತೃತ್ವದಲ್ಲಿ “ಕರ್ನಾಟಕ ಸಭೆ” ಸ್ಥಾಪನೆ ಮಾಡಿದರು.

* 1918ರಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆಗೊಂಡಿತು. ಇದರ ಮೊದಲ ಅಧಿವೇಶನವು 1920 ರಲ್ಲಿ ಧಾರವಾಡದಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು “ಮಾಜಿ ದಿವಾನರಾದ ವಿ. ಪಿ. ಮಾಧವರಾವ್” ವಹಿಸಿಕೊಂಡಿದ್ದರು.

*1924ರಲ್ಲಿ ಕರ್ನಾಟಕ ಏಕೀಕರಣ ಸಭೆ ಆರಂಭವಾಗಿ 1946ರವರೆಗೆ 10 ಏಕೀಕರಣ ಸಭೆಗಳು ನಡೆದವು. 10ನೇ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರವರು ಭಾಷಾವಾರು ಪ್ರಾಂತ್ಯಗಳ ರಚನೆಯ ಅಗತ್ಯತೆಯನ್ನು ಪ್ರಸ್ತಾಪಿಸಿದ್ದರು.


* ಏಕೀಕರಣ ವಿಷಯ ಚರ್ಚೆಗೆ ಬಂದ ಕಾಂಗ್ರೇಸ್ ಅಧಿವೇಶನ, 1924ರಲ್ಲಿ ನಡೆದ ಬೆಳಗಾವಿ ಅಧಿವೇಶನವಾಗಿದೆ.

* ಈ ಅಧಿವೇಶನದಲ್ಲಿ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎನ್ನುವ ಗೀತೆಯನ್ನು “ಹುಯಿಲಗೋಳ ನಾರಾಯಣ” ಹಾಡಿದರು.

* ಸ್ವಾತಂತ್ರ್ಯ ನಂತರ ಕರ್ನಾಟಕ ಏಕೀಕರಣಕ್ಕಾಗಿ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಗಾಗಿ ಸರ್ಕಾರವು ಹಲವಾರು ಸಮಿತಿಗಳನ್ನು ರಚಿಸಿತು.


ಧಾರ್ ಸಮಿತಿ :1948


ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳ ರಚನೆ ಕುರಿತಂತೆ ವರದಿ ನೀಡಲು ಅಲಹಾಬಾದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ “S.K. ಧಾರ್” ಅವರ ಅಧ್ಯಕ್ಷತೆಯಲ್ಲಿ 1948ರಲ್ಲಿ ಆಯೋಗವೊಂದನ್ನು ನೇಮಕ ಮಾಡಿತು.


ಈ ಆಯೋಗದಲ್ಲಿ ಕರ್ನಾಟಕದಿಂದ ಟೇಕೂರು ಸುಬ್ರಮಣ್ಯಂ ಮತ್ತು ಆರ್, ಆರ್. ದಿವಾಕರ ಸಹಾಯಕ ಸದಸ್ಯರಾಗಿದ್ದರು. ಈ ಆಯೋಗವು ರಾಷ್ಟ್ರವು ಗಂಡಾಂತರ ಪರಿಸ್ಥಿತಿಯಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಭಾಷಾವಾರು ಪ್ರಾಂತ್ಯ ರಚನೆ ಸಮರ್ಥನೀಯವಲ್ಲ ಎಂಬ ವಾದ ಮಂಡಿಸಿತು.


ಜೆ.ವಿ.ಪಿ. ಸಮಿತಿ-1948


ಧಾರ್ ಆಯೋಗದ ವರದಿಯನ್ನು ಪರಿಶೀಲಿಸಿ ವರದಿ ನೀಡಲು ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ ಇವರನ್ನು ಒಳಗೊಂಡ ತ್ರಿಮೂರ್ತಿ ಸಭೆಯನ್ನು ಕಾಂಗ್ರೇಸ್ ನೇಮಿಸಿತು.

* 1949 ಏಪ್ರಿಲ್‌ನಲ್ಲಿ ವರದಿ ಪ್ರಕಟಿಸಿದ ಈ ಕಮಿಟಿಯು ಧಾರ್ ಆಯೋಗದ ವರದಿಯನ್ನು ಎತ್ತಿ ಹಿಡಿಯಿತು. ಆದರೆ ಆಂಧ್ರದ ರಚನೆಗೆ ಒಪ್ಪಿಗೆ ಸೂಚಿಸಿತು.

* ಇದೇ ಸಂದರ್ಭದಲ್ಲಿ ಪ್ರತ್ಯೇಕ ಆಂಧ್ರ ರಚನೆಗೆ ಒತ್ತಾಯಿಸಿ “ಪೊಟ್ಟಿ ಶ್ರೀರಾಮುಲು” 53 ದಿನಗಳ ಉಪವಾಸ ಕೈಗೊಂಡು ಸಾವನ್ನಪ್ಪಿದರು.

* ಕೇಂದ್ರದ ಮಲತಾಯಿ ಧೋರಣೆಗೆ ಕರ್ನಾಟಕದಲ್ಲಿ ಅಂದಾನಪ್ಪ ದೊಡ್ಡಮೇಟಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು. ಒತ್ತಡಕ್ಕೆ ಸಿಲುಕಿದ ಸರ್ಕಾರ “ಫಜಲ್ ಅಲಿ ಸಮಿತಿಯನ್ನು ರಚಿಸಿತು.


ಫಜಲ್ ಅಲಿ ಸಮಿತಿ :1953


ಭಾಷಾವಾರು ಪ್ರಾಂತ್ಯ ರಚನೆಗಾಗಿ ಕೇಂದ್ರ ಸರ್ಕಾರವು ರಾಜ್ಯ ಪುನರ್ವಿಂಗಡನಾ ಆಯೋಗವನ್ನು 1953 ಡಿಸೆಂಬರ್ 29ರಂದು ನೇಮಕ ಮಾಡಿತು ಮತ್ತು 1955ರ ಒಳಗೆ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಯಿತು.

*ಆಯೋಗದ ಅಧ್ಯಕ್ಷರನ್ನಾಗಿ ಒರಿಸ್ಸಾ ರಾಜ್ಯಪಾಲರಾ ಗಿದ್ದಂತಹ “ಫಜಲ್ ಅಲಿ” ಹಾಗೂ ಸದಸ್ಯರಾಗಿ ಈಜಿಪ್ಟ್ ನಲ್ಲಿ ಭಾರತದ ರಾಯಭಾರಿಯಾಗಿದ್ದ “ಕೆ. ಎಂ. ಪಣಿಕ್ಕರ್” ಮತ್ತು ರಾಜ್ಯಸಭಾ ಸದಸ್ಯರಾಗಿದ್ದ “ಹೃದಯನಾಥ ಕುಂಜೂ' ನಾಮಕರಣಗೊಂಡರು.

* 1954ರಲ್ಲಿ ಆಯೋಗ ನೀಡಿದ ಪತ್ರಿಕಾ ಪ್ರಕಟಣೆಗೆ ಪ್ರತಿಕ್ರಿಯೆಯಾಗಿ ಒಂದೂವರೆ ಲಕ್ಷ ಮನವಿಗಳು ಬಂದವು. ದೇಶದ ವಿವಿಧ ಕಡೆ ಸುಮಾರು 9000 ವ್ಯಕ್ತಿಗಳನ್ನು ಆಯೋಗ ಸಂದರ್ಶಿಸಿತು.


ಈ ಆಯೋಗವು “1955ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಸಂಸತ್ತಿನಲ್ಲಿ ಈ ವರದಿ ಚರ್ಚೆಯಾಗಿ ಕೆಲ ಬದಲಾವಣೆಗಳೊಂದಿಗೆ ಏಕೀಕೃತ ಕರ್ನಾಟಕ ರಚನೆಗೆ ಒಪ್ಪಿಗೆ ಸಿಕ್ಕಿತು.

*ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯ 1956 ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂದಿತು.

* 1956ರಲ್ಲಿ ಏಕೀಕರಣಗೊಂಡ ಮೈಸೂರು ರಾಜ್ಯದಲ್ಲಿ ಒಟ್ಟು 19 ಜಿಲ್ಲೆಗಳನ್ನು ರಚಿಸಲಾಯಿತು.

* 1973ರಲ್ಲಿ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸುರವರು “ಕರ್ನಾಟಕ” ಎಂದು ಮರು ನಾಮಕರಣ ಮಾಡಿದರು.

ಪ್ರಸ್ತುತ ಕರ್ನಾಟಕದಲ್ಲಿ 30 ಜಿಲ್ಲೆಗಳು 4 ಕಂದಾಯ ವಿಭಾಗಗಳಿವೆ.

ಟೋಂಗಾ ದೇಶದಲ್ಲಿ ಮೊದಲ ಕೋವಿಡ್ ಕೇಸ್ ಪತ್ತೆ


ಕೋವಿಡ್-19 ವೈರಸ್ಸಿನಿಂದ ದೂರ ಉಳಿದಿದ್ದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದ್ದ ಟೋಂಗಾ ದೇಶದಲ್ಲಿ ಮೊಟ್ಟ ಮೊದಲ ಸೋಂಕು ಪತ್ತೆಯಾಗಿದೆ.


ನ್ಯೂಜಿಲೆಂಡ್ ನಿಂದ ಬಂದ ಪ್ರಯಾಣಿಕರೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಪೂರ್ಣ ಪ್ರಮಾಣದ ಲಸಿಕೆ ಪಡೆದ 215 ಮಂದಿ ನ್ಯೂಜಿಲೆಂಡ್‌ನಿಂದ ಟೋಂಗಾಕ್ಕೆ ಬಂದಿಳಿದಿದ್ದರು. ಈ ಪೈಕಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.


* ಕೇವಲ 1.06 ಲಕ್ಷ ಜನಸಂಖ್ಯೆ ಇರುವ ಪುಟ್ಟ ರಾಷ್ಟ್ರದಲ್ಲಿ ಈವರೆಗೆ ಮೂರನೇ ಒಂದರಷ್ಟು ಜನರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ.


ಟೋಂಗಾ ದೇಶ


* ರಾಜಧಾನಿ - ನುಕು ಅಲೋಫಾ

* ಪ್ರಧಾನಿಮಂತ್ರಿ - ಪೊಹಿವಾ, ಟುಇಒನೆಟೋವಾ

* ಸ್ವಾತಂತ್ರ್ಯ ಪಡೆದಿದ್ದು - 4 ಜೂನ್ 1970

* ಕರೆನ್ಸಿ - ಪಾಂಗಾ


2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ


ಪ್ರತಿ ವರ್ಷದಂತೆ ಈ ವರ್ಷವೂ ಸಹ ನಾಡು, ನುಡಿ, ಸಮಾಜ ಸೇವೆ, ವೈದ್ಯಕೀಯ, ರಂಗಭೂಮಿ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದಂತಹ "65 ಸಾಧಕರಿಗೆ 2021ನೇ ಸಾಲಿನ” ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.


ರಾಜ್ಯೋತ್ಸವ ಪ್ರಶಸ್ತಿಯು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.


* ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ 01 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ.

* ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಗೌರವಧನ, 25 ಗ್ರಾಂ, ಚಿನ್ನದ ಪದಕ, ಶಾಲು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನ ನೀಡುವ ಕ್ರಮವೂ ಜಾರಿಯಲ್ಲಿದೆ.

* ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ" ಯ ಸಚಿವರು ಪ್ರಕಟಿಸುತ್ತಾರೆ.


ರಾಜ್ಯೋತ್ಸವ ಪ್ರಶಸ್ತಿಯ ಇತಿಹಾಸ


ರಾಜ್ಯೋತ್ಸವ ಪ್ರಶಸ್ತಿಯನ್ನು 1966 ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ.


ಆದರೆ, 2007ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ರಾಮೇಶ್ವ ಠಾಕೋರ್ ಪ್ರಧಾನ ಮಾಡಿದ್ದರು.


ಹಲವಾರು ಕಾರಣಗಳಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಾಗಿಲ್ಲ. 1985 ರಲ್ಲಿ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು 2008 ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

ರಾಜ್ಯೋತ್ಸವ ಪ್ರಶಸ್ತಿ ಕೊಡುವ ವಿಭಾಗಗಳು


1. ಸಾಹಿತ್ಯ

2. ಸಂಗೀತ

3. ನ್ಯಾಯಾಂಗ

4. ಮಾಧ್ಯಮ

5. ಶಿಕ್ಷಣ

6. ಹೊರನಾಡು ಕನ್ನಡಿಗ

7. ಕ್ರೀಡೆ

8. ಸಂಕೀರ್ಣ

9. ಸಂಘ-ಸಂಸ್ಥೆ

10. ಸಮಾಜ ಸೇವೆ

11. ಯೋಗ

12. ವೈದ್ಯಕೀಯ

13. ಕೃಷಿ

14. ಪರಿಸರ

15. ವಿಜ್ಞಾನ-ತಂತ್ರಜ್ಞಾನ

16. ಸಹಕಾರ

17. ಬಯಲಾಟ

18. ಯಕ್ಷಗಾನ


2021ನೇ ಸಾಲಿನ ಪ್ರಶಸ್ತಿ ಪುರಸ್ಕೃತರು


1. ಸಾಹಿತ್ಯ


* ಮಹಾದೇವ ಶಂಕನಪುರ, ಚಾಮರಾಜನಗರ

* ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ರಾಯಚೂರು

* ಡಿ.ಟಿ.ರಂಗಸ್ವಾಮಿ, ಚಿತ್ರದುರ್ಗ

* ಸಿದ್ದಪ್ಪ ಬಿದರಿ, ಬಾಗಲಕೋಟೆ,

* ಕೃಷ್ಣ ಕೊಲ್ಹಾರ ಕುಲಕರ್ಣಿ, ವಿಜಯಪುರ

* ಅಜ್ಜಂಪುರ ಮಂಜುನಾಥ್, ಚಿಕ್ಕಮಗಳೂರು


2. ಕ್ರೀಡೆ

* ಕೆ.ಗೋಪಿನಾಥ್, ಬೆಂಗಳೂರು

* ಎ.ನಾಗರಾಜ್, ಬೆಂಗಳೂರು

* ರೋಹನ್ ಬೋಪಣ್ಣ, ಕೊಡಗು

* ರೋಹಿತ್ ಕುಮಾರ್ ಕಟೀಲ್ ಉಡುಪಿ


3. ಸಂಗೀತ


* ಹೆರಾಲ್ಡ್ ಸಿರಿಲ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲೆ

* ಸಿ.ತ್ಯಾಗರಾಜು, ಕೋಲಾರ


4. ಶಿಲ್ಪಕಲೆ

* ಡಾ.ಜಿ.ಜ್ಞಾನಾನಂದ, ಚಿಕ್ಕಬಳ್ಳಾಪುರ

* ವೆಂಕಣ್ಣ ಚಿತ್ರಗಾರ, ಕೊಪ್ಪಳ


5, ಜಾನಪದ


* ಗೌರಮ್ಮ ಹುಚ್ಚಪ್ಪ ಮಾಸ್ತರ, ಶಿವಮೊಗ್ಗ

* ದುರ್ಗಪ್ಪ ಚನ್ನದಾಸರ, ಬಳ್ಳಾರಿ

* ಮಹಾರುದ್ರಪ್ಪ ಇಟಗಿ, ಹಾವೇರಿ

* ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಧಾರವಾಡ

* ಬನ್ನಂಜೆ ಬಾಬು ಅಮೀನ್, ಉಡುಪಿ

* ರತನ್ ಸಿಂಗ್ ನಾಯಕ, ವಿಜಯಪುರ

* ಮಲ್ಲಿಕಾರ್ಜುನ ಮುದಕವಿ, ಬಾಗಲಕೋಟೆ


6, ಸಮಾಜ ಸೇವೆ

* ಡಾ. ಜೆ.ಎನ್. ರಾಮಕೃಷ್ಣಗೌಡ, ಮಂಡ್ಯ

* ಯಮನವ್ವಾ ಸಾಲಮಂಟಪಿ, ಬಾಗಲಕೋಟೆ

* ಮುನಿಯಪ್ಪ ದೊಮ್ಮಲೂರು, ಬೆಂಗಳೂರು ನಗರ

* ಮಾದಲಿ ಮಾದಯ್ಯ, ಮೈಸೂರು

* ಬಿ.ಎಲ್.ಪಾಟೀಲ್, ಬೆಳಗಾವಿ


7. ಉದ್ಯಮ

* ಶ್ಯಾಮರಾಜು, ಬೆಂಗಳೂರು


8. ವಿಜ್ಞಾನ/ತಂತ್ರಜ್ಞಾನ

* ಡಾ.ಎಚ್.ಎಸ್.ಸಾವಿತ್ರಿ, ಬೆಂಗಳೂರು

* ಪ್ರೊ ಜಿ.ಯು.ಕುಲಕರ್ಣಿ, ಬೆಂಗಳೂರು


9. ಸೈನಿಕ

* ನವೀನ್ ನಾಗಪ್ಪ, ಹಾವೇರಿ


10, ಸಂಘ ಸಂಸ್ಥೆಗಳು

* ಅದಮ್ಯ ಚೇತನ, ಬೆಂಗಳೂರು

* ಬನಶಂಕರಿ ಮಹಿಳಾ ಸಮಾಜ, ಬೆಂಗಳೂರು

* ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ

* ಮಂಗಳೂರಿನ ಶ್ರೀರಾಮಕೃಷ್ಣ ಮಿಷನ್

* ಕರ್ನಾಟಕ ಹಿಮೋಫಿಲಿಯಾ ಸೊಸೈಟಿ

* ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜಯಪುರ

* ಸೈಪ್ ಒನ್, ಬೆಂಗಳೂರು

ಪ್ರಶಸ್ತಿ ಪಡೆದ ಇತರೆ ಸಂಸ್ಥೆಗಳು


* ಉತ್ಸವ ರಾಕ್ ಗಾರ್ಡನ್, ಹಾವೇರಿ

* ವೀರೇಶ್ವರ ಅಂಧ ಮಕ್ಕಳ ಶಾಲೆ, ಗದಗ

* ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್, ಹುಬ್ಬಳ್ಳಿ


11. ವೈದ್ಯಕೀಯ


* ಡಾ.ಎ.ಆರ್.ಪ್ರದೀಪ್, ಬೆಂಗಳೂರು

* ಡಾ.ಶಿವನಗೌಡ ರುದ್ರಗೌಡ ರಾಮನಗೌಡ್ರ, ಧಾರವಾಡ

* ಡಾ.ವ್ಯಾಸ ದೇಶಪಾಂಡೆ, ಧಾರವಾಡ

* ಸುಲ್ತಾನ್.ಬಿ.ಜಗಳೂರು, ದಾವಣಗೆರೆ

* ಎಂ.ಕೆ.ಸುದರ್ಶನ್, ಬೆಂಗಳೂರು

* ಡಾ.ಸುರೇಶ್.ಎಸ್.ರಾವ್ ಕಟೀಲು, ದಕ್ಷಿಣ ಕನ್ನಡ


12. ಹೊರನಾಡು ಕನ್ನಡಿಗರು


* ಡಾ.ಸುನೀತಾ.ಎಂ.ಶೆಟ್ಟಿ, ದಕ್ಷಿಣ ಕನ್ನಡ

* ಚಂದ್ರಶೇಖರ ಪಾಲೆತ್ತಾಡಿ, ದಕ್ಷಿಣ ಕನ್ನಡ

* ಪ್ರವೀಣ್ ಕುಮಾರ್ ಶೆಟ್ಟಿ, ಉಡುಪಿ

* ಡಾ.ಸಿದ್ಧರಾಮೇಶ್ವರ ಕಂಟಿಕರ್‌, ಹೊರನಾಡ ಕನ್ನಡಿಗ ಸಾಧನೆ.


13. ಪರಿಸರ


* ಮಹಾದೇವ ವೆಳಿಪ, ಉತ್ತರ ಕನ್ನಡ

* ರಾಮಚಂದರ್‌ ಬೈಕಂಪಾಡಿ, ದಕ್ಷಿಣ ಕನ್ನಡ


14. ರಂಗಭೂಮಿ, ಸಿನಿಮಾ


* ದೇವರಾಜ್, ಬೆಂಗಳೂರು ನಗರ

* ಪ್ರಕಾಶ ಬೆಳವಾಡಿ, ಚಿಕ್ಕಮಗಳೂರು

* ಎನ್.ಮಲ್ಲೇಶಯ್ಯ, ರಾಮನಗರ ಜಿಲ್ಲೆ

* ರಮೇಶಗೌಡ ಪಾಟೀಲ್, ಬಳ್ಳಾರಿ

* ಫಕ್ಕಿರೇಶ ರಾಮಪ್ಪ ಕೊಂಡಾಯಿ, ಹಾವೇರಿ

* ಸಾವಿತ್ರಿ ನಾರಾಯಣ್ಣಪ್ಪ ಗೌಡರ, ಗದಗ


15, ಪತ್ರಿಕೋದ್ಯಮ


* ಪಟ್ನಂ ಅನಂತ ಪದ್ಮನಾಭ, ಮೈಸೂರು

* ಡಾ.ಯು.ಬಿ.ರಾಜಲಕ್ಷ್ಮೀ, ಉಡುಪಿ


16. ಯೋಗ


* ಡಾ.ರಾಘವೇಂದ್ರ ಶೆಣೈ, ಬೆಂಗಳೂರು

* ಭ.ಮ.ಶ್ರೀಕಂಠ, ಶಿವಮೊಗ್ಗ


17. ಪೌರ ಕಾರ್ಮಿಕ

* ರತ್ನಮ್ಮ ಶಿವಪ್ಪ ಸ್ವಂತಿ, ಯಾದಗಿರಿ


18. ನ್ಯಾಯಾಂಗ

* ಸಿ.ವಿ.ಕೇಶವ ಮೂರ್ತಿ, ಮೈಸೂರು


19, ಸಂಕೀರ್ಣ


* ಕ್ಯಾಪ್ಟನ್.ಎಸ್.ರಾಜಾರಾವ್, ಬಳ್ಳಾರಿ

* ಗಂಗಾವತಿ ಪ್ರಾಣೇಶ್, ಕೊಪ್ಪಳ

* ಡಾ.ಬಿ.ಅಂಬಣ್ಣ, ವಿಜಯನಗರ


20. ಕೃಷಿ


* ಡಾ.ಸಿ.ನಾಗರಾಜ್, ನೆಲಮಂಗಲ

* ಎಸ್.ಶಂಕರಪ್ಪ, ತುಮಕೂರು

* ಗುರುಲಿಂಗಪ್ಪ ಮೇಲ್ಗೊಡ್ಡಿ


21. ಯಕ್ಷಗಾನ


* ಗೋಪಾಲಾಚಾರ್ಯ, ಶಿವಮೊಗ್ಗ


22. ಏಕೀಕರಣ ಹೋರಾಟಗಾರ

* ಮಹಾದೇವಪ್ಪ ಕಡೇಚೂರು, ಕಲಬುರಗಿ


23, ಆಡಳಿತ

* ಎಚ್.ಆರ್.ಕಸ್ತೂರಿರಂಗನ್, ಹಾಸನ


24. ಶಿಕ್ಷಣ

* ಪ್ರೊ.ಪಿ.ವಿ.ಕೃಷ್ಣಭಟ್ಟ, ಶಿವಮೊಗ್ಗ

* ಶ್ರೀಧರ ಚಕ್ರವರ್ತಿ, ಧಾರವಾಡ

* ಸ್ವಾಮಿ ಲಿಂಗಪ್ಪ, ಮೈಸೂರು


ತೆರೆಮರೆ ಪ್ರತಿಭೆಗಳಿಗೆ ಗೌರವ ಮತ್ತು ಪ್ರಶಸ್ತಿಗೂ ಸಂದ ಗೌರವ

* ರತ್ನಮ್ಮ ಶಿವಪ್ಪ, ಮುನಿಯಪ್ಪ,

* ಸೂಲಗಿತ್ತಿ ಯಮನವ್ವ,

* ಮಹಾದೇವ ವೇಳಿಪಾ,

* ನವೀನ್ ನಾಗಪ್ಪ ಮುಂತಾದವರು.


ಪ್ರಧಾನ ಮಂತ್ರಿ ನೂತನ ಆರ್ಥಿಕ ಮಂಡಳಿ ರಚನೆ


ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಯ ಅಧಿಕಾರಾವಧಿ ಕಳೆದ ತಿಂಗಳು ಕೊನೆಗೊಂಡಿದ್ದು, ನೂತನ ಆರ್ಥಿಕ ಸಲಹಾ ಮಂಡಳಿಯ (ಇಎಸಿಪಿಎಂ) ಪುನರ್ ರಚನೆಗೆ ಪ್ರಧಾನಿ ಅನುಮೋದನೆ ನೀಡಿದ್ದಾರೆ. ಆರ್.ಬಿ.ಐ ನ ಮಾಜಿ ಡೆಪ್ಯೂಟಿ ಗವರ್ನರ್ ರಾಕೇಶ್ ಮೋಹನ್, ಐಐಎಂ ಅಹ್ಮದಾಬಾದ್ ಪ್ರೊಫೆಸರ್ ಟಿ.ಟಿ.ರಾಮ್ ಮೋಹನ್, ನ್ಯಾಷನಲ್ ಕೌನ್ಸಿಲ್ ಆಪಲ್ ಆಫೈಂಡ್ಸ್ ಎಕಾನಾಮಿಕ್ ರಿಸರ್ಚ್ (ಎನ್‌ಎಎಇಆರ್‌)ನ ಮಹಾನಿರ್ದೇಶಕಿ ಪೂನಂ ಗುಪ್ತಾ 7 ಸದಸ್ಯರ ಮಂಡಳಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಮೂವರು ಸದಸ್ಯರಾಗಿದ್ದಾರೆ. ಹೊಸ ಸಲಹಾ  ಮಂಡಳಿ ಮುಂದಿನ 2 ವರ್ಷಗಳವರೆಗ ಕಾರ್ಯನಿರ್ವಹಿಸಲಿದ್ದಾರೆ.


* ಬಿಬೆಕ್ ದೇಬ್ರಾಯ್


2017 ರಿಂದಲೂ ಎಇಸಿ ಅಧ್ಯಕ್ಷರಾಗಿ ತಮ್ಮ ಸ್ಥಾನ ಉಳಿಸಿಕೊಂಡಿರುವ ದೇಬ್ರಾಯ್ ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ ಅಲುಮ್ಮಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರೂ ಆಗಿದ್ದಾರೆ. ಪ್ರೆಸಿಡೆನ್ಸಿ ಕಾಲೇಜ್ ಕೋಲ್ಕತ್ತಾ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಹಣಕಾಸು ಸಚಿವಾಲಯ/ ಯುಎನ್ಡಿಪಿ ಯೋಜನೆಯ ನಿರ್ದೇಶಕರಾಗಿ ಕಾನೂನು ಸುಧಾರಣೆ, ಆರ್ಥಿಕ ವ್ಯವಹಾರಗಳ ಇಲಾಖೆ, ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಸಂಶೋಧನಾ ನೀತಿ ಕೇಂದ್ರಗಳಲ್ಲೂ ಕಾರ್ಯನಿರ್ವಸಿದ್ದಾರೆ.

ರಾಕೇಶ್ ಮೋಹನ್ :


ಮಂಡಳಿಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಾಗಿರುವ ಇವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯೂಟಿ ಗವರ್ನರ್ ಮತ್ತು ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರು ಆಗಿದ್ದರು. ನೀತಿ ರಚನೆ, ಕೇಂದ್ರ ಬ್ಯಾಂಕಿಂಗ್, ಹಣಕಾಸು ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ದಶಕಗಳ ಅನುಭವ ಹೊಂದಿದ್ದಾರೆ.


ಟಿ.ಟಿ.ರಾಮ್ ಮೋಹನ್ :


ಅಹಮದಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜೆಂಟ್‌ನಲ್ಲಿ ಹಣಕಾಸು ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಅವರು, ಈ ಹಿಂದೆ ಸ್ಟಾಂಡರ್ಸ್ ಚಾರ್ಟಡ್ ಬ್ಯಾಂಕ್‌ನಲ್ಲಿ ಪ್ರಮುಖ ಕಾರ್ಯತಂತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ಬೇರ್ ಸ್ಪೆರ್ನ್ಸ್ ಏಷ್ಯಾ ಹಾಂಗ್‌ಕಾಂಗ್‌ನ ಉಪಾಧ್ಯಕ್ಷರಾಗಿದ್ದರು.


ಪೂನಂ ಗುಪ್ತಾ :


ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಪೆಯ್ ಎಕಾನಾಮಿಕ್ ರಿಸರ್ಚ್ ಮಹಾನಿರ್ದೇಶಕಿ ಆಗಿರುವ ಇವರು ವಿಶ್ವಬ್ಯಾಂಕ್ ನಲ್ಲಿ ಭಾರತಕ್ಕೆ ಪ್ರಮುಖ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸಿದ್ದರು. ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೇರ್ ಪ್ರೊಫೆಸರ್ ಆಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿನಲ್ಲಿ ಸೇವೆ ಸಲ್ಲಿಸಿದ್ದಾರೆ.


ಸಾಜಿದ್ ಚಿನೋಯ್ :


ಜೆಪಿ ಮೋರ್ಗಾನ್ ಚೇಸ್ ಚೀಫ್ ಇಂಡಿಯನ್ ಎಕಾನಮಿಕ್ಸ್ ಆಗಿರುವ ಸಾಜಿದ್ ಮಂಡಳಿಯಲ್ಲಿ ಮತ್ತೆ ತಮ್ಮ ಶ್ವಾನ ದೃಢಪಡಿಸಿಕೊಂಡಿದ್ದಾರೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನರ ಆರ್ಥಿಕ ವ್ಯವಹಾರಗಳನ್ನೊಳಗೊಂಡಿರುವ ಬ್ಯಾಂಕ್‌ನಲ್ಲಿ 2010 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.


ನೀಲಕಂಠ ಮಿಶ್ರಾ:


ಭಾರತದ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರಾದ ಮಿಶ್ರಾ ಮಂಡಳಿಯಲ್ಲಿ ಮುಂದುವರಿದಿದ್ದು, ಈಕ್ಷಿಟಿ ಕಾರ್ಯತಂತ್ರ, ಏಷ್ಯಾ ಪೆಸಿಫಿಕ್ ಮತ್ತು ಇಂಡಿಯಾ ಈಕ್ಷಿಟಿ ಕಾರ್ಯತಂತ್ರ, ಸೆಕ್ಯೂರಿಟಿ ರಿಸರ್ಚ್‌ನ ಮುಖ್ಯಸ್ಥರೂ ಆಗಿದ್ದಾರೆ. ಜಿಎಸ್‌ಟಿ ಮಂಡಳಿ, ಬಜೆಟ್ ನಿರ್ವಹಣಾ ಮಂಡಳಿಯಲ್ಲೂ ಕಾರ್ಯನಿರ್ವಹಿಸಿದ್ದಾರೆ.


ನೀಲೇಶ್ ಶಾ :


ಕೋಟಕ್ ಮಹೀಂದ್ರಾ ಅಸೆಟ್ ಮ್ಯಾನೆಜ್ಮೆಂಟ್ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಬಂಡವಾಳ ಮಾರುಕಟ್ಟೆ ಹೂಡಿಕೆ ಸಂಬಂಧಿಸಿದಂತೆ ಸಾಕಷ್ಟು ಅನುಭವ ಹೊಂದಿರುವ ಇವರು, ಈಕ್ವಿಟಿ ಸ್ಥಿರ ಆದಾಯ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿದ್ದಾರೆ.



 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್...

SSLC Social Science 2022 All Chapterwise Quiz in Kannada For All Competitive Exams

  SSLC Social Science 2022 All Chapterwise Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

100 Question Answers General Knowledge Quiz in Kannada For All Competitive Exams

  100 Question Answers General Knowledge Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ  ಪ್ರಶ್ನೋತ್ತರಗಳ ಕ್ವಿಜ್   www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

29th March 2025 Daily Current Affairs Quiz in Kannada for All Competitive Exams

          29th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-29th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top General Knowledge One-liner Question Answers in Kannada for All Competitive Exams-13

Top General Knowledge One-liner Question Answers in Kannada for All Competitive Exams-13 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher...

24th March 2025 Daily Current Affairs Quiz in Kannada for All Competitive Exams

          24th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-24th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher'...

16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು

          16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

18th March 2025 Daily Current Affairs Quiz in Kannada for All Competitive Exams

          18th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-15th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs