ನಮ್ಮ ರಾಜ್ಯ ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?
ನಮ್ಮ ರಾಜ್ಯ ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?
- ಕಪ್ಪು ಮಣ್ಣು & ಎತ್ತರದಲ್ಲಿರುವುದರಿಂದ ಈ ನೆಲವು ಕರ್ನಾಟಕವೆಂದು ಹೆಸರಾಯಿತು.
- ಕರ್ನಾಟಕ ರಾಜ್ಯವು 1956 ನವೆಂಬರ್ 1ರಂದು ಉದಯವಾಯಿತು.
- 01/11/1973ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಯಿತು.
- ಕರ್ನಾಟಕದ ಒಟ್ಟು ವಿಸ್ತೀರ್ಣ 1,91,791 ಚದರ ಕಿಲೋ ಮೀಟರ್.
- ಎರಡು ತಲೆಯ ಗಂಡಭೇರುಂಡ ಪಕ್ಷಿಯು ಕರ್ನಾಟಕದ ರಾಜ್ಯ ಲಾಂಛನವಾಗಿದೆ.
- 1956 ರಿಂದ ಬೆಂಗಳೂರು ಕರ್ನಾಟಕದ ರಾಜ್ಯಧಾನಿಯಾಗಿದೆ.
- 1956 ಕ್ಕಿಂತ ಮುಂಚೆ ಸಾಂಸ್ಕೃತಿಕ ನಗರಿ ಮೈಸೂರು ನಮ್ಮ ರಾಜ್ಯಧಾನಿಯಾಗಿತ್ತು.
- ಕರ್ನಾಟಕವು ಪ್ರಸ್ತುತ 31 ಜಿಲ್ಲೆಗಳು ಮತ್ತು 238 ತಾಲ್ಲೂಕುಗಳನ್ನು ಹೊಂದಿದೆ.
- 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 6,11,30,704.
- 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತೆಯ ಪ್ರಮಾಣ 75.36%
- ಕರ್ನಾಟಕವು 968 ಲಿಂಗಾನುಪಾತ & 319 ಜನಸಾಂದ್ರತೆಯನ್ನು ಹೊಂದಿದೆ.
- ವಿಸ್ತೀರ್ಣದಲ್ಲಿ 7ನೇ ಮತ್ತು ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದೆ.
- ವಿಸ್ತೀರ್ಣದಲ್ಲಿ ಬೆಳಗಾವಿ ಅತೀ ದೊಡ್ಡ ಮತ್ತು ಬೆಂಗಳೂರು (ನ) ಚಿಕ್ಕ ಜಿಲ್ಲೆಗಳಾಗಿವೆ.
- ಜನಸಂಖ್ಯೆಯಲ್ಲಿ ಬೆಂಗಳೂರು ಅತೀ ದೊಡ್ಡ ಮತ್ತು ಕೊಡಗು ಚಿಕ್ಕ ಜಿಲ್ಲೆಗಳಾಗಿವೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ,
- ಕರ್ನಾಟಕದಲ್ಲಿ ಅತೀ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ ಯಾದಗಿರಿ.
- ಭಾರತದಲ್ಲೇ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ಕರ್ನಾಟಕವು ಚಿನ್ನದ ನಾಡಾಗಿದೆ.
- ಕರ್ನಾಟಕದ ಆಡಳಿತ ಭಾಷೆ ಕನ್ನಡವು 2008ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ.
- ಕರ್ನಾಟಕದ 4 ವಿಭಾಗಗಳು ಬೆಳಗಾವಿ,ಬೆಂಗಳೂರು, ಮೈಸೂರು & ಕಲಬುರಗಿ,
- ಕರ್ನಾಟಕವು ಭಾರತದ ದಕ್ಷಿಣ ಭಾಗದಲ್ಲಿ ಪಶ್ಚಿಮ ಕರಾವಳಿಗೆ ಅಂಟಿಕೊಂಟಿದೆ.
- ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಕರಾವಳಿ ತೀರ ಹೊಂದಿವೆ.
- ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಶಿಖರವಾಗಿದೆ.
No comments:
Post a Comment