ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಇವರು, ಮಾಜಿ ರಾಷ್ಟ್ರಪತಿಯಾದರೂ ಜನ ಸಾಮಾನ್ಯರೊಂದಿಗೆ ಬೆರೆತು ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದರು. ಅಬ್ದುಲ್ ಕಲಾಂ ರವರ ಸರಳ ಬದುಕು ಎಲ್ಲರಿಗೂ ಮಾದರಿ. ಜೀವನದ ಬಗ್ಗೆ ಕಲಾಂರವರು ಹೇಳಿದ ಮಾತುಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಅವರ ಜನ್ಮದಿನವಾದ ಇಂದು ಅವರನ್ನು ಸ್ಮರಿಸುತ್ತಾ ಅವರ ಜೀವನ ಸಾಧನೆ ಹಾಗೂ ವಿಚಾರಗಳಿಂದ ಪ್ರೇರಣೆ ಪಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಡಾ. ಅಬ್ದುಲ್ ಕಲಾಂರವರ ಜೀವನ ಪಥ
1) 1931 ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನನ, ಇವರ ಪೂರ್ಣ ಹೆಸರು; ಅವುಲ್ ಫಕೀರ್ ಜೈನುಲುಬ್ದೀನ್ ಅಬ್ದುಲ್ ಕಲಾಂ'
ಇವರ ತಂದೆ: ಜೈನುಲುಬ್ದೀನ್
ಇವರ ತಾಯಿ : ಆಶಿಮಾ
2) 1954 ರಲ್ಲಿ ತಿರುಚನಾಪಳ್ಳಿ ಸೇಂಟ್ ಜೋಸೆಫ್ಕಾ ಲೇಜಿನಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು.
3) 1960 ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು
4) 1960 ರಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ [DRDO] ಗೆ ವಿಜ್ಞಾನಿಯಾಗಿ ಸೇರ್ಪಡೆಯಾದರು.
5) 1980 ರಲ್ಲಿ 'ರೋಹಿಣಿ' ಉಪಗ್ರಹವನ್ನು ಭಾರತದ ಪ್ರಪ್ರಥಮ ಸ್ವದೇಶಿ ನಿರ್ಮಿತ ಎಸ್‌ಎಲ್‌ವಿ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಸೇರಿಸಿದ ಕೀರ್ತಿಗೆ ಪಾತ್ರರಾದರು.
6) 1992 ರಲ್ಲಿ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಅವರಿಗೆ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕ.
7) 2002 ಜುಲೈ 25 ರಂದು ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
8) 2012 ರಲ್ಲಿ ಹೃದಯ ತಜ್ಞ ಸೋಮರಾಜ ಅವರೊಂದಿಗೆ ಸೇರಿ ಗ್ರಾಮೀಣ ಆರೋಗ್ಯ ಸೇವೆಗಾಗಿ ವಿಶೇಷ ಟ್ಯಾಬ್ಲೆಟ್ ನಿರ್ಮಾಣ
9) 2015 ಜುಲೈ 27 ರಂದು ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಿಧನ
ತಂತ್ರಜ್ಞಾನ ಲೋಕಕ್ಕೆ ಡಾ. ಅದ್ಬುಲ್ ಕಲಾಂರವರ ಕೊಡುಗೆಗಳು:
ಎ) ರೋಹಿಣಿ ಕೃತಕ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ತಲುಪಿಸಿದ ಭಾರತದ ಮೊದಲ ಸ್ಯಾಟಲೈಟ್ ಲಾಂಚ್ ವೆಹಿಕಲ್ [SLV-3] ಅಭಿವೃದ್ಧಿಯ ನೇತೃತ್ವ ವಹಿಸಿದ್ದರು. ಕಲಾಂ ಅವರು ಈ ಉಪಗ್ರಹದ ಉಡಾವಣೆ ಬಳಿಕ ಭಾರತದ ಸ್ಪೇಸ್ ಕ್ಲಬ್‌ಗೆ ಸೇರುವಂತಾಯಿತು.
ಬಿ) ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಪರೀಕ್ಷೆಯ ನೇತೃತ್ವ ವಹಿಸಿ ಯಶಸ್ವಿಯಾದ ಕಾರಣ ಕಲಾಂ ಅವರನ್ನು 'ಮಿಸೈಲ್ ಮ್ಯಾನ್' ಎಂದು ಕರೆಯಲಾಗುತ್ತದೆ.
ಸಿ) ಕಲಾಂ ಅವರ ಮುಂದಾಳತ್ವದಲ್ಲಿ ಪೋಖ್ರಾನ್-2 (ಆಪರೇಷನ್ ಶಕ್ತಿ-1988) ಅಣು ಪರೀಕ್ಷೆ ನಡೆಯಿತು. ಇದರಿಂದಾಗಿ ಭಾರತ ನ್ಯೂಕ್ಲಿಯರ್ ಪವರ್ ರಾಷ್ಟ್ರಗಳ ಗುಂಪಿಗೆ ಸೇರಿತು.
ಡಿ) ಹೃದ್ರೋಗ ತಜ್ಞ ಸೋಮರಾಜ ಅವರ ಜೊತೆ ಸೇರಿ ಕಡಿಮೆ ಬೆಲೆಯ ಸ್ಟೆಂಟ್‌ಗಳನ್ನು ಅಭಿವೃದ್ಧಿ ಪಡಿಸಿದರು.
ಇ) ಏಳು ವರ್ಷಗಳ ಕಾಲ [1992-1999] ರ ಅವಧಿಯಲ್ಲಿ ಪ್ರಧಾನಿಯವರ ಮುಖ್ಯ ವೈಜ್ಞಾನಿಕ ಸಲಹೆಗಾರ ಹಾಗೂ DRDO ಸೆಕ್ರೆಟರಿಯಾಗಿದ್ದರು.
ಡಾ. ಅಬ್ದುಲ್ ಕಲಾಂ ಅವರಿಗೆ ಸಂದ ಗೌರವ & ಪ್ರಶಸ್ತಿಗಳು:
1) 1981 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದರು
2) 1990 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದರು
3) 1997 ರಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾದರು
4) ಭಾರತ & ವಿದೇಶ ಸೇರಿದಂತೆ ಸುಮಾರು 48 ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.
ಸೂಚನೆ: ಇವರ ಜನ್ಮ ದಿನಾಚರಣೆಯನ್ನು ವಿಶ್ವ ವಿದ್ಯಾರ್ಥಿ ದಿನವನ್ನಾಗಿ 2010 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ.
2021 ರ ಥೀಮ್: “Learning from people, planet, prosperity & peace”
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಬೇಕು ಎಂಬುದು ಕಲಾಂ ಅವರ ಕನಸಾಗಿತ್ತು. 500 ತಜ್ಞರ ಸಮಿತಿಯ ಮುಖ್ಯಸ್ಥರಾಗಿ ಅವರು ರೂಪಿಸಿದ 'ವಿಷನ್ 2020' ಯೋಜನೆ ಮೂಲಕ ಅನೇಕ ಕಾರ್ಯ ಕ್ರಮಗಳನ್ನು ಒಳಗೊಂಡಿದೆ.
ಕಲಾಂ ಅವರ ನುಡಿಮುತ್ತುಗಳು:
ಎ) ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರವಾದ ಚಿಂತನೆಗಳನ್ನು ಕಾಣಬಹುದು
ಬಿ) ಸಮಾಜವನ್ನು ಮೂವರು ಮಾತ್ರ ನಿರ್ಮಾಣ ಮಾಡಬಲ್ಲರು. ಅವರೆಂದರೆ ತಂದೆ, ತಾಯಿ & ಗುರು.
ಸಿ) ನಿಮ್ಮ ಗುರಿಯೆಡೆಗೆ ಸಾಗಬೇಕು ಎಂದಾದರೆ ಒಂದು ದೃಷ್ಟಿಯ ಯೋಚನೆಯ ಧೈಯ ಚಿನ್ನ ಹಿಂದೆ ಇರಲಿ.
ಕಲಾಂ ಅವರ ಕೃತಿಗಳು:
- ವಿಂಗ್ಸ್ ಆಫ್ ಫೈರ್ (ಆತ್ಮಕಥೆ)
- ಇಗ್ನೈಟೆಡ್ ಮೈಂಡ್ಸ್
- ಇಂಡಿಯಾ 2020
- ಮೈ ಜರ್ನಿ
- ದಿ ಲೈಫ್ ಟ್ರೀ
ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಸತ್ಯ ನಾದೆಲ್ಲಾ ಆಯ್ಕೆ
ಉದ್ಯಮ-ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ತೋರಿದ ಆ ನಾಯಕತ್ವಕ್ಕಾಗಿ ಮೈಕ್ರೋಸಾಫ್ಟ್‌ನ ಸಿಇಒ, ಭಾರತೀಯ ಅಮೆರಿಕನ್ ಸತ್ಯ ನಾದೆಲ್ಲಾ ಅವರನ್ನು 'ಗ್ಲೋಬಲ್ ಬಿಸಿನೆಸ್ ಸಸ್ಟೇನಬಿಲಿಟಿ ಲೀಡರ್‌ಷಿಪ್'ಗಾಗಿ ನೀಡುವ ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೈಕ್ರೋಸಾಫ್ಟ್‌ನ ಉನ್ನತ ಅಧಿಕಾರಿಗಳಾದ, ಅಧ್ಯಕ್ಷ ಬ್ಯಾಂಡ್ ಸ್ಮಿತ್, ಮುಖ್ಯ ಹಣಕಾಸು ಅಧಿಕಾರಿ ಅಮಿಹೂಡ್ ಹಾಗೂ ಮುಖ್ಯ ಪರಿಸರ ಅಧಿಕಾರಿ ಲೂಕಾಸ್ ಜೊಪ್ಪಾ ಅವರೂ ಸಹ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಈ ಪ್ರತಿಷ್ಠಿತ ಪ್ರಶಸ್ತಿ ನೀಡುವ “ಕಾರ್ಪೋರೇಟ್ ಇಕೋ ಫೋರಂ'ನ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ತಿಳಿಸಿದ್ದಾರೆ. ಪರಿಸರಕ್ಕೆ ಇಂಗಾಲ ಸೇರುವುದನ್ನು ತಡೆಗಟ್ಟಲು ಕಂಪನಿ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 2030ರ ವೇಳೆಗೆ ಮೈಕ್ರೋಸಾಫ್ಟ್ ಅನ್ನು 'ಕಾರ್ಬನ್ ನೆಗೆಟಿವ್ ಕಂಪನಿ'ಯನ್ನಾಗಿ ಪರಿವರ್ತಿಸಲು ಈ ನಾಲ್ವರ ಸಂಘಟಿತ ಪ್ರಯತ್ನ, ನಾಯಕತ್ವ ಅನುಕರಣೀಯವಾಗಿದೆ.
ದೇಶದ ಎಲ್ಲಾ ಜಿಲ್ಲೆಗಳಲ್ಲೂ 'ರಫ್ತು ಹಬ್' ಯೋಜನೆ ಅನುಷ್ಠಾನ
ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಸದುಪಯೋಗ ಮಾಡಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲೂ 'ಜಿಲ್ಲಾ ರಫ್ತು ಕೇಂದ್ರ' (ಡಿಇಎಚ್) ಸ್ಥಾಪಿಸಲು ಮುಂದಾಗಿದೆ. “ಡಿಇಎಚ್' ಯೋಜನೆ ಅಡಿಯಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ರಫ್ತು ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ. ರಫ್ತು ಸಾಮರ್ಥ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳನ್ನೂ ಗುರುತಿಸಲಾಗಿದೆ.
ಭಾರತದ ಗ್ರಾಂಡ್ ಮಾಸ್ಟರ್ ಪಿ, ಇನಿಯನ್‌ಗೆ ಪ್ರಶಸ್ತಿ
ಭಾರತದ ಗ್ರಾಂಡ್‌ಮಾಸ್ಟರ್ ಪಿ.ಇನಿಯನ್ ಅವರು ಲಾ ನೂಸಿಯಾ ಓಪನ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 19 ವರ್ಷದ ಇನಿಯನ್ (ಇಎಲ್‌ಒ ರೇಟಿಂಗ್ 2529), ಉಕ್ರೇನ್‌ನ ಆ್ಯಂಡ್ರಿ ಸುಮೆಟ್ಸ್ ಮತ್ತು ಚಿಲಿಯ ರೊಡ್ರಿಗೊ ವಾಸ್ಕೆಚ್ ಪ್ರೋಡರ್ ತಲಾ ಏಳು ಪಾಯಿಂಟ್ಸ್ ಕಲೆ ಹಾಕಿದರು. ಆದರೆ ಉತ್ತಮ ಟೈಬ್ರೇಕ್ ಸ್ಕೋರ್ ಆಧಾರದಲ್ಲಿ ಇನಿಯನ್‌ಗೆ ಪ್ರಶಸ್ತಿ ಒಲಿಯಿತು.
ಭಾರತದ ಅಂದಾಜು ಆರ್ಥಿಕ ಅಭಿವೃದ್ಧಿ ಪ್ರಕಟಿಸಿದ ಐಎಂಎಫ್
ಕೊರೋನಾದಿಂದ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದ್ದರೂ, ಭಾರತವು 2021 ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವೇಗದಿಂದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎನ್ನಿಸಿಕೊಳ್ಳಲಿದೆ. ಭಾರತದ ಜಿಡಿಪಿ ಬೆಳವಣಿಗೆ ದರ 2021 ರಲ್ಲಿ ಶೇ.9.5 ಹಾಗೂ 2022 ರಲ್ಲಿ ಶೇ.8.5 ಇರಲಿದೆ. ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಭಾರತ ಮೀರಿಸಲಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ (ಐಎಂಎಫ್) ಹೇಳಿದೆ. ತನ್ನ ಆರ್ಥಿಕ ಅಭಿವೃದ್ಧಿ ಮುನ್ನೋಟದಲ್ಲಿ ಈ ಮಾಹಿತಿಯನ್ನು ಅದು ದಾಖಲಿಸಿದೆ. ಭಾರತವು ಕೊರೋನಾ 2ನೇ ಅಲೆಯ ಹಿನ್ನಡೆಯಿಂದ ಹೊರಬಂದಿದೆ.
ಈ ಕುರಿತು ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಭಾರತಕ್ಕೆ ಶಹಬ್ಬಾಸ್‌ಗಿರಿ ನೀಡಿದ್ದಾರೆ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ವಿಶ್ವದ ಆರ್ಥಿಕತೆ ಬೆಳವಣಿಗೆ ವೇಗಕ್ಕಿಂತ ಭಾರತದ ವೇಗ ಹೆಚ್ಚಿದೆ. ವಿಶ್ವದ ಜಿಡಿಪಿ 2021 ರಲ್ಲಿ ಶೇ.5.9 ಹಾಗೂ 2022ರಲ್ಲಿ ಶೇ.49ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ. ಆದರೆ ಭಾರತದ ದರ ಶೇ.9.5 ಮತ್ತು ಶೇ.8.5 ರಷ್ಟಿರಲಿದೆ ಎಂದು ಐಎಂಎಫ್ ತಿಳಿಸಿದೆ.
- ಇದೇ ವೇಳೆ, ಅಮೆರಿಕದ ಆರ್ಥಿಕತೆ 2021ರಲ್ಲಿ ಶೇ.6 ಹಾಗೂ 2022 ರಲ್ಲಿ ಶೇ.5.2ರ ದರದಲ್ಲಿ.
- ಚೀನಾ ಜಿಡಿಪಿ 2021 ರಲ್ಲಿ ಶೇ.8 ಹಾಗೂ 2022 ರಲ್ಲಿ ಶೇ 5.6ರ ದರದಲ್ಲಿ ಅಭಿವೃದ್ಧಿ ಕಾಣಲಿದ್ದು, ಭಾರತಕ್ಕಿಂತ ಹಿಂದೆ ಬೀಳಲಿವೆ ಎಂದು ಅದು ವಿವರಿಸಿದೆ.
- 9.5ಶೇ. ಪ್ರಸ್ತುತ ಸಾಲಿನಲ್ಲಿ ಭಾರತದ ಜಿಡಿಪಿ ಏರಿಕೆ ಅಂದಾಜು
- 06 ಶೇ. ಪ್ರಸ್ತುತ ಸಾಲಿನಲ್ಲಿ ಅಮೆರಿಕದ ಜಿಡಿಪಿ ಹೆಚ್ಚಳ
- 08 ಶೇ. ಪ್ರಸ್ತುತ ಹಣಕಾಸು ವರ್ಷದಲ್ಲಿ ಚೀನಾ ಜಿಡಿಪಿ ಏರಿಕೆ
- 5.6 ಶೇ. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಹೆಚ್ಚಳದ ಸಾಧ್ಯತೆ
- 5.2 ಶೇ. ಮುಂದಿನ ವರ್ಷದಲ್ಲಿ ಅಮೆರಿಕದ ಜಿಡಿಪಿ ಹೆಚ್ಚಳದ ಅಂದಾಜು
- 5.9 ಶೇ. ಜಾಗತಿಕ ಮಟ್ಟದಲ್ಲಿ ಪ್ರಸ್ತುತ ಸಾಲಿನ ಜಿಡಿಪಿಗು ಹೆಚ್ಚಳದ ಸಾಧ್ಯತೆ
ಅಂತರಾಷ್ಟ್ರೀಯ ಹಣಕಾಸು ನಿಧಿ (IMF) (International Monetary Fund)
- ಸ್ಥಾಪನೆ : 27 ಡಿಸೆಂಬರ್ 1945
- ಕೇಂದ್ರ ಕಛೇರಿ : ವಾಷಿಂಗ್ಟನ್
- ವ್ಯವಸ್ಥಾಪಕ ನಿರ್ದೇಶಕ - ಕ್ರಿಸ್ಟಲಿನಾ ಜಾರ್ಜಿವಾ
- ಮುಖ್ಯ ಅರ್ಥಿಕತಜ್ಞೆ : ಗೀತಾ ಗೋಪಿನಾಥ್
ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಲಕ್ಷ್ಮೀನಾರಾಯಣ ಅಧ್ಯಕ್ಷ
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಸ್ಥಾಪಿಸಿ ಅಧಿಕೃತ ಆದೇಶ ಮಾಡಿರುವ ಸರ್ಕಾರ ಈ ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀ ನಾರಾಯಣ ಅವರನ್ನು ನೇಮಕ ಮಾಡಿದೆ. ಈ ಮೂಲಕ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯನ್ನು ಮುಂದೂಡಲು ರಾಜ್ಯ ಸರ್ಕಾರದ ಚಿಂತನೆಗೆ ಬಲ ಸಿಕ್ಕಂತಾಗಿದೆ.
* ಮೂರು ಹಂತದ ಪಂಚಾಯತ್ ವ್ಯವಸ್ಥೆಯಡಿ ಕ್ಷೇತ್ರ ಪುನರ್ ವಿಂಗಡಣೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂದಕ್ಕೆ ಪಡೆದು ಈ ಕಾರ್ಯಕ್ಕೆ ಆಯೋಗ ಸ್ಥಾಪಿಸುವ ಅವಕಾಶ ಕಲ್ಪಿಸಿ 'ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ಸರ್ಕಾರ ಈ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಪಡೆದು ರಾಜ್ಯಪಾಲ ಸಹಿ ಪಡೆದಿತ್ತು. ಇದೀಗ ಅಧಿಕೃತವಾಗಿ ಆಯೋಗ ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಿದೆ.
ಪಿ.ಎಂ.ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ರೂಪುರೇಷೆ
ಈ ಯೋಜನೆಯು ಪ್ರಧಾನಿ ಮೋದಿಯವರ ಆತ್ಮ ನಿರ್ಭರ ಭಾರತ್ ದೃಷ್ಟಿ ಕೋನದ ಒಂದು ಪ್ರಮುಖ ಭಾಗವಾಗಿದೆ ಮತ್ತು ಮಹತ್ವಾಕಾಂಕ್ಷೆಯಿಂದ 1.5-ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಅಡಿಯಲ್ಲಿ ಯೋಜನೆಗಳಿಗೆ ಹೆಚ್ಚಿನ ಶಕ್ತಿ ಮತ್ತು ನೀಡುವ ಗುರಿ ಹೊಂದಿದೆ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಯೋಜನೆಯನ್ನೂ ಹೊಂದಿದೆ.
ಪಿ. ಎಂ. ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್
ಸಮಗ್ರತೆ: ಇದು ಒಂದು ಕೇಂದ್ರೀಕೃತ ಪೋರ್ಟಲ್ ನೊಂದಿಗೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಯೋಜಿತ ಉಪಕ್ರಮಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಇಲಾಖೆಯು ಈಗ ಪರಸ್ಪರ ಚಟುವಟಿಕೆಗಳ ಗೋಚರತೆಯನ್ನು ಹೊಂದಿದ್ದು, ಸಮಗ್ರ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ನಿರ್ಣಾಯಕ ಡೇಟಾವನ್ನು ಒದಗಿಸುತ್ತದೆ.
ಆದ್ಯತೆ: ಈ ಮೂಲಕ, ವಿವಿಧ ಇಲಾಖೆಗಳು ಮತ್ತು ಯೋಜನೆಗಳಿಗೆ ವಿವಿಧ-ವಿಭಾಗದ ಪರಸ್ಪರ ಕ್ರಿಯೆಗಳ ಮೂಲಕ ಆದ್ಯತೆ ನೀಡಲು ಸಾಧ್ಯವಾಗುತ್ತದೆ.
ಆಪ್ಟಿಮೈಸೇಶನ್: ನಿರ್ಣಾಯಕ ಅಂತರಗಳನ್ನು ಗುರುತಿಸಿದ. ನಂತರ ಯೋಜನೆಗಳನ್ನು ಪ್ಲಾನ್ ಮಾಡುವಲ್ಲಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ವಿವಿಧ ಸಚಿವಾಲಯಗಳಿಗೆ ಸಹಾಯ ಮಾಡುತ್ತದೆ. ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು, ಸಮಯ ಮತ್ತು ವೆಚ್ಚದ ದೃಷ್ಟಿಯಿಂದ ಅತ್ಯಂತ ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಲು ಯೋಜನೆಯು ಸಹಾಯ ಮಾಡುತ್ತದೆ.
ಸಿಂಕ್ರೋನೈಸೇಶನ್: ವೈಯಕ್ತಿಕ ಸಚಿವಾಲಯಗಳು ಮತ್ತು ಇಲಾಖೆಗಳು ಹೆಚ್ಚಾಗಿ ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ. ಯೋಜನೆಯನ್ನು ರೂಪಿಸುವುದು ಮತ್ತು ಅನುಷ್ಠಾನದಲ್ಲಿ ಸಮನ್ವಯದ ಕೊರತೆಯು ವಿಳಂಬಕ್ಕೆ ಕಾರಣವಾಗುತ್ತದೆ. ಪಿಎಂ ಗತಿಶಕ್ತಿಯು ಪ್ರತಿಯೊಂದು ಇಲಾಖೆಯ ಚಟುವಟಿಕೆಗಳನ್ನು ಹಾಗೂ ವಿವಿಧ ಹಂತದ ಆಡಳಿತಗಳನ್ನು ಅವುಗಳ ನಡುವೆ ಕೆಲಸದ ಸಮನ್ವಯವನ್ನು ಖಾತ್ರಿಪಡಿಸುವ ಮೂಲಕ ಸಮಗ್ರ ರೀತಿಯಲ್ಲಿ ಸಿಂಕ್ರೋನೈಸ್ ಮಾಡಲು ಸಹಾಯ ಮಾಡುತ್ತದೆ.
ವಿಶ್ಲೇಷಣಾತ್ಮಕ: ಈ ಯೋಜನೆಯು ಸಂಪೂರ್ಣ ಡೇಟಾವನ್ನು ಒಂದೇ ಸ್ಥಳದಲ್ಲಿ ಜಿಐಎಸ್ ಆಧಾರಿತ ಪ್ರಾದೇಶಿಕ ಯೋಜನೆ ಮತ್ತು 200 + ಪದರಗಳನ್ನು ಹೊಂದಿರುವ ವಿಶ್ಲೇಷಣಾತ್ಮಕ ಸಾಧನಗಳನ್ನು ಒದಗಿಸುತ್ತದೆ. ಇದು ಕಾರ್ಯಗತಗೊಳಿಸುವ ಏಜೆನ್ಸಿಗೆ ಉತ್ತಮ ಗೋಚರತೆಯನ್ನು ಒದಗಿಸುತ್ತದೆ.
ಡೈನಾಮಿಕ್: ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಈಗ ಜಿಐಎಸ್ ಪ್ಲಾಟ್‌ಫಾರ್ಮ್ ಮೂಲಕ ಬೇರೆ ಬೇರೆ ವಿಭಾಗದ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಉಪಗ್ರಹ ಚಿತ್ರಣವು ನಿಯತಕಾಲಿಕವಾಗಿ ನೆಲದ ಪ್ರಗತಿಯನ್ನು ನೀಡುತ್ತದೆ ಮತ್ತು ಪೋರ್ಟಲ್‌ನಲ್ಲಿ ನಿಯಮಿತವಾಗಿ ಯೋಜನೆಗಳ ಪ್ರಗತಿಯನ್ನು ನವೀಕರಿಸಲಾಗುತ್ತದೆ. ಇದು ಮಾಸ್ಟರ್ ಪ್ಲಾನ್ ನವೀಕರಿಸಲು ಸಹಾಯ ಮಾಡುತ್ತದೆ.
ಐಇಎ ನಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ
ವಿಶ್ವದ ಮೂರನೇ ಅತಿದೊಡ್ಡ ಬಳಕೆದಾರನಾಗಿರುವ ಭಾರತವನ್ನು ಅಂತಾ ರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತನ್ನ ಪೂರ್ಣಾವಧಿ ಸದಸ್ಯನಾಗುವಂತೆ ಆಹ್ವಾನ ನೀಡಿದೆ. ಈ ಪ್ರಸ್ತಾಪವನ್ನು ಭಾರತ ಒಪ್ಪಿಕೊಂಡರೆ ಪ್ರಸಕ್ತ ತೈಲ ನಿಕ್ಷೇಪಗಳಲ್ಲಿ ಶೇಖರಿಸುವ 9.5 ದಿನಗಳ ಅಗತ್ಯದ ತೈಲವನ್ನು 90 ದಿನಗಳ ಅಗತ್ಯಕ್ಕೆ ಶೇಖರಿಸಬೇಕಾಗುತ್ತದೆ.
ಏನಿದು ಐಇಎ?
1973-74 ರ ಸಂದರ್ಭದಲ್ಲಿ ಎದುರಾದ ತೈಲ ಬಿಕ್ಕಟ್ಟನ್ನು ಎದುರಿಸಲು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಯ ನಿಯಮಗಳ ಅನ್ವಯ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಸ್ಥಾಪನೆಗೊಂಡಿತು. ತೈಲ ಉತ್ಪಾದಕ ರಾಷ್ಟ್ರಗಳು ತೈಲ ಪೂರೈಕೆ ಮೇಲೆ ವಿಧಿಸಿದ ನಿರ್ಬಂಧವನ್ನು ಕೈಗಾರೀಕರಣಗೊಂಡ ರಾಷ್ಟ್ರಗಳು ಸಮರ್ಪಕವಾಗಿ ಎದುರಿಸಲು ಸಜ್ಜಾಗಿಲ್ಲ ಎನ್ನುವುದನ್ನು ಅರಿತ ಹಿನ್ನೆಲೆ ಪೂರೈಕೆಯಲ್ಲಿನ ಸಂಭವನೀಯ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಹಾಗೂ ಇಂಧನ ಭದ್ರತೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಲಾಗಿದೆ.
ಸದಸ್ಯ ರಾಷ್ಟ್ರಗಳು
ಪ್ರಸಕ್ತ ಸಂಸ್ಥೆಯಲ್ಲಿ 30 ಸದಸ್ಯ ರಾಷ್ಟ್ರಗಳಿದ್ದು, ಸಂಸ್ಥೆಯ ಸದಸ್ಯತ್ವ ಪಡೆಯಬಯಸುವ ರಾಷ್ಟ್ರಗಳು ಒಸಿಇಡಿಯ ಸದಸ್ಯತ್ವವನ್ನು ಪಡೆದಿರಬೇಕು. ಅಲ್ಲದೇ, 90 ದಿನಗಳಿಗೆ ಅಗತ್ಯವಿರುವ ತೈಲ ಆಮದನ್ನು ವಾಣಿಜ್ಯ ದಾಸ್ತಾನುವಾಗಿ ಹೊಂದಿರಬೇಕಿದೆ. 30 ರಾಷ್ಟ್ರಗಳ ಸದಸ್ಯತ್ವದೊಂದಿಗೆ ಸಂಸ್ಥೆಯು ಜಾಗತಿಕ ಇಂಧನ ಬೇಡಿಕೆಯ ಶೇ.75ನ್ನು ಪ್ರತಿನಿಧಿಸುತ್ತಿದ್ದು, 2015ರಲ್ಲಿ ಈ ಪ್ರಮಾಣ ಶೇ. 40 ಆಗಿತ್ತು ಎನ್ನಲಾಗಿದೆ. ಔಪಚಾರಿಕ ಸದಸ್ಯತ್ವ ಪಡೆದ 30 ರಾಷ್ಟ್ರಗಳ ಜತೆಗೆ ಬ್ರೆಜಿಲ್, ಚೀನಾ, ಭಾರತ, ಇಂಡೋನೇಷ್ಯಾ, ಮೊರಾಕೊ, ಸಿಂಗಾಪುರ, ದಕ್ಷಿಣ ಆಫ್ರಿಕಾ ಮತ್ತು ಥೈಲ್ಯಾಂಡ್ ಅಸೋಸಿಯೇಷನ್ ಸದಸ್ಯತ್ವ ಪಡೆದುಕೊಂಡಿದೆ.
ಸಂಸ್ಥೆಯ ಉದ್ದೇಶ
ಇಂಧನ ಭದ್ರತೆಯನ್ನು ಹೆಚ್ಚಿಸುವುದರ ಜತೆಗೆ ಶಕ್ತಿ ಪರಿವರ್ತನೆ ವೇಗಗೊಳಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸುವುದು, ಪರ್ಯಾಯ ಇಂಧನ ಮೂಲಗಳ ಅಭಿವೃದ್ಧಿ, ಇಂಧನ ಸಂಶೋಧನೆ ಪ್ರಮುಖ ಗುರಿಯಾಗಿದೆ. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಇಂಧನ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಹಿನ್ನೆಲೆ ಜಗತ್ತಿನ ಅತಿ ಪ್ರಮುಖ ಆರ್ಥಿಕತೆಗಳೊಂದಿಗೂ ಐಇಎ ಕಾರ್ಯನಿರ್ವಹಿಸುತ್ತಿದೆ. ಹವಾಮಾನ ಬದಲಾವಣೆ, ವಾಯುಮಾಲಿನ್ಯದಂತಹ ಹಲವು ಜಾಗತಿಕ ಸಮಸ್ಯೆಗಳ ಪರಿಹಾರದತ್ತವೂ ಗಮನಹರಿಸಿದ್ದು, ಕಾರ್ಯವ್ಯಾಪ್ತಿ ವಿಸ್ತರಿಸಿದೆ.
ಭಾರತದ ಆಹ್ವಾನಕ್ಕೆ ಕಾರಣವಿದು
2017ರಲ್ಲಿ ಭಾರತರ ಐಇಎಯ ಅಸೋಸಿಯೇಟ್ ಸದಸ್ಯತ್ವ ಪಡೆದುಕೊಂಡಿದ್ದು, ಈಗ ಸಂಸ್ಥೆ ಭಾರತವನ್ನು ತನ್ನ ಪೂರ್ಣಾವಧಿ ಸದಸ್ಯನಾಗುವಂತೆ ಕೇಳಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇಂಧನ ಬಳಕೆ. ಭಾರತ ಜಗತ್ತಿನಲ್ಲಿ 3ನೇ ಅತಿದೊಡ್ಡ ಇಂಧನ ಗ್ರಾಹಕನಾಗಿದ್ದು, ಮುಂಬರುವ ದಶಕಗಳಲ್ಲಿ ಇಂಧನ ಬೇಡಿಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದೆ. ಇಂತಹ ಸಂದರ್ಭದಲ್ಲಿ ಭಾರತಕ್ಕೆ ಇಂಧನ ಅವಲಂಬನೆ ಕಡಿಮೆ ಮಾಡುವುದು ಅವಶ್ಯವಾಗಿದೆ. ಇಂಧನ ಭದ್ರತೆ ಕಾಯ್ದುಕೊಳ್ಳುವುದು ದೇಶದ ಆರ್ಥಿಕತೆಗೆ ಅಗತ್ಯವಾಗಿದೆ. ಈ ಹಿನ್ನೆಲೆ ಭಾರತ ಮತ್ತು ಐಇಎ ನವೀಕರಿಸಬಹುದಾದ ಇಂಧನ ಶಕ್ತಿಯ ವಿಸ್ತರಣೆ, ಇಂಧನ ದಕ್ಷತೆ, ತೈಲ ಸಂಗ್ರಹ ಮತ್ತು ತುರ್ತು ಸಿದ್ಧತೆ, ಹೂಡಿಕೆ ಮತ್ತು ನಾವೀನ್ಯತೆ ಸೇರಿದ ಹಲವು ವಿಚಾರಗಳಲ್ಲಿ ಸಹಕಾರ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ಐಇಎ ಖಾಯಂ ಸದಸ್ಯತ್ವ ಪಡೆಯಲು ಆಹ್ವಾನ ನೀಡಿದೆ.
ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ
ಗರ್ಭಪಾತಕ್ಕೆ ಇರುವ ಗರಿಷ್ಠ ಮಿತಿಯನ್ನು 20 ರಿಂದ 24 ವಾರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದಕ್ಕಾಗಿ '2021 ರ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ (ತಿದ್ದುಪಡಿ) ಕಾಯ್ದೆಯನ್ನು ತರಲಾಗಿದ್ದು, ಸೀಮಿತ ವ್ಯಕ್ತಿಗಳಿಗೆ ಹಾಗೂ ಸೀಮಿತ ಸಂದರ್ಭಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಪ್ರತ್ಯೇಕ ಮಂಡಳಿ ಸ್ಥಾಪನೆ :
ಹೊಸ ನಿಯಮದಡಿ, ಆಯಾ ರಾಜ್ಯಮಟ್ಟದಲ್ಲಿ ಗರ್ಭಪಾತವನ್ನು ನಿರ್ಧರಿಸಲೆಂದು ಪ್ರತ್ಯೇಕ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಬೇಕಿದೆ. ಆ ಮಂಡಳಿಯ ಅನುಮತಿ ಇದ್ದರಷ್ಟೇ ಗರ್ಭಪಾತ ಪ್ರಕ್ರಿಯೆ ನಡೆಸುವುದು ಕಡ್ಡಾಯವಾಗಲಿದೆ.
# ಯಾವುದೇ ಮಹಿಳೆ, ತನ್ನ ಗರ್ಭಪಾತಕ್ಕೆ ಈ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಆಗ, ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಸ್ಥಿತಿಗತಿಗಳನ್ನು ಸಂಬಂಧಿಸಿದ ಇತರ ವರದಿಗಳನ್ನು ಸೂಕ್ತವಾಗಿ ಅಧ್ಯಯನ ಮಾಡುವ ಮಂಡಳಿಯ ತಜ್ಞರು.
ಬಂಗಾಳ ವಿಭಜನೆ ದಿವಸ : ಅಕ್ಟೋಬರ್ 16
ಬ್ರಿಟಿಷರ ಆಡಳಿತಕ್ಕೆ ಪ್ರಬಲ ಪ್ರತಿರೋಧ ಒಡ್ಡುತಿದ್ದ ಬಂಗಾಳದ ಹೋರಾಟಗಾರರನ್ನು ಮಣಿಸಲು ಬ್ರಿಟಿಷರು ಮತೀಯ ಆಧಾರದ ಮೇಲೆ 1905 ಅಕ್ಟೋಬರ್ 16 ರಂದು ಪೂರ್ವ & ಪಶ್ಚಿಮ ಬಂಗಾಳ ವೆಂದು ಎರಡು ಪ್ರಾಂತ್ಯಗಳನ್ನಾಗಿ ಅಂದಿನ ವೈಸ್‌ರಾಯ್ ಲಾರ್ಡ್ ಕರ್ಜನ್ ಬಂಗಾಳ ವಿಭಜನೆ ಮಾಡಿದ್ದನು.
ಪ್ರತಿಭಟನೆಯ ತೀವ್ರ ವಿರೋಧವನ್ನು ಎದುರಿಸಿದಂತಹ ಬ್ರಿಟಿಷರು ಅಂದಿನ ಬ್ರಿಟಿಷ ರಾಜ 5 ನೇ ಜಾರ್ಜ್‌ನ ಅಪ್ಪಣೆ ಮೇರೆಗೆ ಡಿಸೆಂಬರ್ 12, 1911 ರಂದು ಬಂಗಾಳ ವಿಭಜನೆಯನ್ನು ರದ್ದು ಮಾಡಿದರು ಅಂದಿನ ವೈಸರಾಯ್ ಲಾರ್ಡ್ ಹಾರ್ಡಿಂಜ್ ಬಂಗಾಳ ವಿಭಜನೆಯ ಪರಿಣಾಮದಿಂದಾಗಿ ಅಸ್ಸಾಂ, ಬಿಹಾರ ಮತ್ತು ಒರಿಸ್ಸಾ ಗಳನ್ನು ಪ್ರತ್ಯೇಕಿಸಲಾಯಿತು. & ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾವಣೆ ಮಾಡಲಾಯಿತು.
ಜಾಗತಿಕ ಹಸಿವು ಸೂಚ್ಯಂಕ ಪ್ರಕಟ
2021ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟಗೊಂಡಿದ್ದು, 116 ದೇಶಗಳ ಪೈಕಿ ಭಾರತ 101 ನೇ ಸ್ಥಾನ ಪಡೆದುಕೊಂಡಿದೆ. 2020ರಲ್ಲಿ ಭಾರತ 94ನೇ ಸ್ಥಾನದಲ್ಲಿತ್ತು ಐರ್ಲೆಂಡ್‌ನ ಕನ್ಸರ್ನ್ ವರ್ಲ್ಡ್‌ವೈಡ್ ಹಾಗೂ ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫೆ ಎಂಬ ಸಂಸ್ಥೆಗಳು 2021ನೇ ಸಾಲಿನ ವರದಿ ತಯಾರಿಸಿವೆ.
ನೆರೆ ರಾಷ್ಟ್ರಗಳ ಸೂಚ್ಯಂಕ :
- ನೇಪಾಳ - 76
- ಬಾಂಗ್ಲಾದೇಶ - 76
- ಮಯನ್ಮಾರ್ - 71
- ಪಾಕಿಸ್ತಾನ - 92
ಮಾನದಂಡಗಳು:
- ಮಕ್ಕಳಲ್ಲಿನ ಅಪೌಷ್ಠಿಕತೆ, 5 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಎತ್ತರಕ್ಕೆ ತಕ್ಕ ತೂಕ ಇಲ್ಲದೇ ಇರುವುದು 5 ವರ್ಷಕ್ಕಿಂತ ಚಿಕ್ಕ ಮಕ್ಕಳು ವಯಸ್ಸಿಗೆ ತಕ್ಕಂತೆ ತೂಕ ಹೊಂದಿಲ್ಲದೆ ಇರುವುದು ಮತ್ತು 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣವನ್ನು ಪರಿಗಣಿಸಿ ದೇಶಗಳಿಗೆ ಅಂಕ ನೀಡಲಾಗುತ್ತದೆ.
- 9.9 ಕ್ಕಿಂತ ಕಡಿಮೆ ಅಂಕ ಗಳಿಸುವ ದೇಶಗಳಲ್ಲಿ ಹಸಿವಿನ ಪ್ರಮಾಣ ಕಡಿಮೆ ಇದೆ ಎಂದು ನಿರ್ಧರಿಸಲಾಗುತ್ತದೆ.
- ಜಾಗತಿಕ ಹಸಿವು ಸೂಚ್ಯಂಕದಲ್ಲಿ 18 ದೇಶಗಳು 5 ಅಂಕಕ್ಕಿಂತ ಕಡಿಮೆ ಅಂಕ ಪಡೆದುಕೊಂಡಿವೆ. ಚೀನಾ, ಬ್ರೆಜಿಲ್ & ಕುವೈತ್ ಸೇರಿದಂತೆ 18 ರಾಷ್ಟ್ರಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ.
ಕರ್ನಾಟಕ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ನೇಮಕ
- ಕರ್ನಾಟಕ ಬ್ಯಾಂಕ್‌ನ ಸ್ವತಂತ್ರ ನಿರ್ದೇಶಕರಾದ ಪ್ರದೀಪ್ ಕುಮಾರ್ ಪಂಜ ಅವರನ್ನು ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
- ಇವರ ಅಧಿಕಾರವಧಿ 3 ವರ್ಷ ಇರಲಿದೆ.
- ಪ್ರಸ್ತುತ ಅಧ್ಯಕ್ಷ ಪಿ ಜಯರಾಂ ಭಟ್ ಅವರ ಅಧಿಕಾರವಧಿ ಮುಕ್ತಾಯವಾಗಲಿದ್ದು, ಅವರ ಸ್ಥಾನಕ್ಕೆ ಈ ನೇಮಕ ಮಾಡಲಾಗಿದೆ.
- ಪ್ರದೀಪ್ ಕುಮಾರ್ ಅವರು ವೃತ್ತಿಪರ ಬ್ಯಾಂಕರ್ ಆಗಿದ್ದು, ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
ಪ್ರಸ್ತುತ ಅವರು “ಬ್ಯಾಂಕ್ಸ್ ಬೋರ್ಡ್ ಬ್ಯೂರೋ” ಸದಸ್ಯರಾಗಿದ್ದಾರೆ. ಮತ್ತು ಆಸ್ತಿ ಪುನರ್ ನಿರ್ಮಾಣ ಸಿಮೆಂಟ್ ರಿಯಲ್ ಎಸ್ಟೇಟ್ ಬ್ಯಾಂಕೇತರ ಹಣಕಾಸು ಸಂಸ್ಥೆ, ಇತ್ಯಾದಿಗಳ ವ್ಯವಹಾರದಲ್ಲಿ ತೊಡಗಿರುವ 7 ಕಂಪೆನಿಗಳಲ್ಲಿ ನಿರ್ದೇಶಕರಾಗಿದ್ದಾರೆ.
ಕರ್ನಾಟಕ ಬ್ಯಾಂಕ್
ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಭಾರತದ ಹನ್ನೆರಡನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ ಇದು ಭಾರತದ ಕರ್ನಾಟಕದಲ್ಲಿರುವ “ಎ ಶೆಡ್ಯೂಲ್ಡ್ ಬ್ಯಾಂಕ್” ಆಗಿದೆ.
- ಪ್ರಧಾನ ಕಚೇರಿ : ಮಂಗಳೂರು
- ಸ್ಥಾಪನೆ : 18ನೇ ಫೆಬ್ರುವರಿ 1924
- ಸಿಇಒ : ಮಹಾಬಲೇಶ್ವರ ಎಂ.ಎಸ್
ನಾಡಹಬ್ಬ ದಸರಾ ಸಂಪನ್ನ
ಜನಮನ ಸೆಳೆಯುವ ಕಣ್ಮನ ತಣಿಸುವ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾದ ಜಂಬೂಸವಾರಿ ಮೆರವಣಿಗೆ ವರ್ಣರಂಜಿತವಾಗಿ ಸಂಪನ್ನಗೊಂಡಿತು. ಪ್ರಸ್ತುತ 411ನೇ ದಸರಾ ಮಹೋತ್ಸವವಾಗಿದ್ದು, ಇದರ ಉದ್ಘಾಟನೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೆರವೇರಿಸಿದರು.
* ಜಂಬೂ ಸವಾರಿಗೆ ಜಾನಪದ ಕಲಾ ತಂಡಗಳ ಪ್ರದರ್ಶನ 5 ಸ್ತಬ್ಧಚಿತ್ರಗಳು ಮೆರಗು ಕೊಟ್ಟವು ಸ್ವಾತಂತ್ರ್ಯ ಸಂಗ್ರಾಮದ ತಿರುಳು ತೆರೆದಿಟ್ಟು 75ನೇ ವರ್ಷದ ಅಮೃತ ಮಹೋತ್ಸವ ಸ್ತಬ್ಧಚಿತ್ರ ಮುಡಾ ರೂಪಿಸಿದ್ದ ಗುಂಪುಮನೆ ಯೋಜನೆ ಕೊರೋನಾ ಜಾಗೃತಿ ಪರಿಸರ ಪ್ರಾಮುಖ್ಯತೆ, ಕೃಷಿ ಸೌಲಭ್ಯಗಳ ಅರಿವು ಮೂಡಿಸಿದ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ದಸರಾ ವಿಶೇಷ :
- 2ನೇ ಸಲ ಅಂಬಾರಿ ಹೊತ್ತ ಅಭಿಮನ್ಯು
- 6 ಸ್ತಬ್ಧಚಿತ್ರ, ಪೊಲೀಸ್ ಪಡೆ, ಅಶ್ವಾರೋಹಿ ಪಡೆ ಭಾಗಿ
- ಕಳೆ ಹೆಚ್ಚಿಸಿದ ಮಂಗಳವಾದ್ಯ, ವೀರಗಾಸೆ, ಕತ್ತಿವರಸೆ, ನಗಾರಿ, ಡೊಳ್ಳು, ಕಂಸಾಳೆ, ತಾಳಮದ್ದಲೆ, ಪಟ ಕುಣಿತ, ಗೊಂಬೆ ಕುಣಿತದ ಮೆರುಗು.
- 14 ಜಾನಪದ ಕಲೆ ಅನಾವರಣ
- 26 ಕಲಾ ತಂಡ ಭಾಗಿ
ಮೈಸೂರು ಅರಮನೆ ಅಂಗಳದಲ್ಲಿ ಆನೆ ಅಭಿಮನ್ಯು ಹೊತ್ತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪ ನಮನ ಸಲ್ಲಿಸಿ ಜಂಬೂಸವಾರಿಗೆ ಚಾಲನೆ ನೀಡಿದರು. ಮೇಯರ್ ಸುನಂದಾ ಪಾಲನೇತ್ರ, ಕರ್ನಾಟಕ ಹೈಕೋರ್ಟ್‌ನ ನೂತನ ಮುಖ್ಯನ್ಯಾಯಮೂರ್ತಿ ರಿತು ರಾಜ್ ಅವೆಸ್ಥಿ, ಸಚಿವ ಎಸ್.ಟಿ.ಸೋಮಶೇಖರ್ ಇತರರಿದ್ದರು.
ವಿಶ್ವ ಆಹಾರ ದಿನ ಅಕ್ಟೋಬರ್ - 16
- ಪ್ರತಿವರ್ಷ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.
- Theme - 2021: "Safe Food now for a Healthy Tomorrow"
- ಹಿನ್ನೆಲೆ : 1945 ಆ. 16ರಲ್ಲಿ ವಿಶ್ವಸಂಸ್ಥೆ ತನ್ನ ಪ್ರಮುಖ ಅಂಗ ಸಂಸ್ಥೆಯಾಗಿರುವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಯ ಮುಖ್ಯ ಕಚೇರಿಯನ್ನು ರೋಮ್ಮಲ್ಲಿ ಸ್ಥಾಪನೆ ಮಾಡಿದ್ದು,
- ಈ ದಿನದ ನೆನಪಿಗಾಗಿ 'ವಿಶ್ವ ಆಹಾರ ದಿನ' ವನ್ನು ಆಚರಿಸಲಾಗುತ್ತಿದೆ.
- 1981 ರಿಂದ ಪ್ರಾರಂಭ ವಿಶ್ವ ಆಹಾರ ದಿನವನ್ನು ಅಧಿಕೃತವಾಗಿ 1981 ರಿಂದ ಪ್ರತಿ ವರ್ಷ ಅಕ್ಟೋಬರ್ 16 ರಂದು ಆಚರಣೆ ಮಾಡಲಾಗುತ್ತದೆ.
ಪ್ರಮುಖ ಉದ್ದೇಶ
ಕೃಷಿ ಅಭಿವೃದ್ಧಿ ಮೂಲಕ ಜಗತ್ತಿನಾದ್ಯಂತ ಹಸಿವು ಮುಕ್ತ ಸಮಾಜ ನಿರ್ಮಾಣ ಮತ್ತು ಬಡತನ ನಿರ್ಮೂಲನೆ ಪ್ರಮುಖ ಉದ್ದೇಶ.
- ಆಹಾರ ಮತ್ತು ಕೃಷಿ ಸಂಸ್ಥೆ FAO-(Food and Agriculture Organization)
- ಸ್ಥಾಪನೆ – 1945, ಅಕ್ಟೋಬರ್ 16
- ಕೇಂದ್ರ ಕಛೇರಿ - ರೋಮ್ (ಇಟಲಿ)
- ಸದಸ್ಯ ರಾಷ್ಟ್ರಗಳ ಸಂಖ್ಯೆ -197
- ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತದೆ.
- ಈ ಸಂಸ್ಥೆಯ ಉದ್ದೇಶ ವಿಶ್ವವನ್ನು ಆಹಾರದಿಂದ ಮುಕ್ತಗೊಳಿಸುವುದು.
- ಈ ಸಂಸ್ಥೆಯ ಧೈಯ ವಾಕ್ಯ - “ILet therebe Bread”
No comments:
Post a Comment