09 October 2021 Detailed Daily Current Affairs in Kannada for All Competitive Exams
ಹಾಯ್, ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯ, ಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳು, ಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ.
💥 Also Read: 01 October 2021 Detailed daily Current Affairs in Kannada for All Competitive Exams
💥 Also Read: 02 October 2021 Detailed daily Current Affairs in Kannada for All Competitive Exams
💥 Also Read: 03 October 2021 Detailed daily Current Affairs in Kannada for All Competitive Exams
💥 Also Read: 04 October 2021 Detailed daily Current Affairs in Kannada for All Competitive Exams
💥 Also Read: 05 October 2021 Detailed daily Current Affairs in Kannada for All Competitive Exams
💥 Also Read: 06 October 2021 Detailed daily Current Affairs in Kannada for All Competitive Exams
💥 Also Read: 07 October 2021 Detailed daily Current Affairs in Kannada for All Competitive Exams
💥 Also Read: 08 October 2021 Detailed daily Current Affairs in Kannada for All Competitive Exams
💥 Click here to Read Daily Current Affairs in Kannada
ವಿಶ್ವ ಅಂಚೆ ದಿನಾಚರಣೆ : ಅಕ್ಟೋಬರ್ 9
ಅಂಚೆ ದಿನಾಚರಣೆ ಇತಿಹಾಸ
- 1970 ರಲ್ಲಿ ಜಪಾನ್ ದೇಶದ ಟೋಕಿಯೋ ನಗರದಲ್ಲಿ ನಡೆದ *UPU' ಸಮ್ಮೇಳನದಲ್ಲಿ ಅಕ್ಟೋಬರ್ 9 ರಂದು ಮೊಟ್ಟ ಮೊದಲ ಅಂಚೆ ದಿನವೆಂದು ಘೋಷಿಸಲಾಯಿತು.
- UPU-Universal Postal Union
- ಯುನೈಟೆಡ್ ನೇಷನ್ಸ್‌ನ ಒಂದು ಅಂಗ ಸಂಸ್ಥೆಯಾಗಿದೆ
UPU-Universal Postal Union
- ಸ್ಥಾಪನೆ : 1874 [ಬರ್ನ್ ಒಪ್ಪಂದದ ಅನ್ವಯ]
- ಸ್ಥಾಪಕ : ಹೆನ್ರಿ ವೂನ್ ಸ್ಪೆಷನ್
- ಪ್ರಧಾನ ಕಛೇರಿ : ಬರ್ನ್, ಸ್ವಿಟ್ಟರ್‌ಲ್ಯಾಂಡ್
- ಪ್ರಸ್ತುತ ಮುಖ್ಯಸ್ಥ : ಬಿಶಾರ್ ಅಬ್ದಿ ರೆಹಮಾನ್ ಹುಸೇನ್
- ಮಾತೃ ಸಂಸ್ಥೆ : ವಿಶ್ವಸಂಸ್ಥೆಯ ಆರ್ಥಿಕ & ಸಾಮಾಜಿಕ ಮಂಡಳಿ
- ಇದು ಪ್ರಪಂಚದಾದ್ಯಂತ ಅಂಚೆ ಜಾಲವನ್ನು ಹೊಂದಿದೆ
- ಇದು ವಿಶ್ವದ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಇದು 192 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಅಂತರರಾಷ್ಟ್ರೀಯ ಅಂಚೆ ಸಂವಹನದ ನಿಯಮಗಳನ್ನು ಸಹ ಈ ಸಂಸ್ಥೆ ನಿರ್ವಹಿಸುತ್ತದೆ.
ಭಾರತೀಯ ವಾಯುಸೇನೆ ದಿನಾಚರಣೆ
ಭಾರತೀಯ ವಾಯುಸೇನೆಯ ಇತಿಹಾಸ:
IAF Act 1932: (Indian Airforce Act)
- ಸ್ಥಾಪನೆ : ಅಕ್ಟೋಬರ್ 8, 1932
- ಪ್ರಧಾನ ಕಛೇರಿ : ನವದೆಹಲಿ
- ಧೈಯವಾಕ್ಯ : Touching the sky with Glory
- ಪ್ರಸ್ತುತ ಏರ್‌ಚೀಫ್ ಮಾರ್ಷಲ್ : ವಿವೇಕ ರಾಮ್ ಚೌಧರಿ
- ರಾಷ್ಟ್ರಪತಿಯವರು ಎರಡು ಸೇನಾ ಪಡೆಯಂತೆಯೇ ಇಲ್ಲಿಯೂ ಸಹ ಮಹಾದಂಡನಾಯಕರಾಗಿರುತ್ತಾರೆ.
- ಚೀಪ್ ಆಫ್ ಏರ್ ಸ್ಟಾಫ್ & ಏರ್ ಚೀಫ್ ಮಾರ್ಷಲ್ ವಾಯುಸೇನೆಯ ಕಾರ್ಯಗಳನ್ನು ನಿರ್ವಹಿಸುತ್ತಾರೆ.
ರಾಯಲ್ ಏರ್‌ಫೋರ್ಸ್
- ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ವಾಯುಸೇನೆ ತೋರಿದ ಸಾಮರ್ಥ್ಯ ಗುರುತಿಸಿ ರಾಯಲ್ ಎನ್ನುವ ಹೆಸರನ್ನು ವಾಯುಪಡೆಗೆ ಸೇರಿಸಲಾಯಿತು.
- 1947 ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ವಾಯುಸೇನೆಯನ್ನು ರಾಯಲ್ ಇಂಡಿಯನ್ ಏರ್‌ಫೋರ್ಸ್ ಎನ್ನುವ ಹೆಸರಿನಲ್ಲಿ ಗುರುತಿಸಲಾಯಿತು.
- 1950 ರಲ್ಲಿ ಸಂವಿಧಾನ ರಚನೆಯಾದ ನಂತರ ರಾಯಲ್ ಹೆಸರನ್ನು ಕೈ ಬಿಟ್ಟು, 'ಇಂಡಿಯನ್ ಏರ್ ಫೋರ್ಸ್' ಎಂದು ಕರೆಯಲಾಯಿತು.
ವಾಯುಸೇನೆಯ ಸಾಮರ್ಥ್ಯ
- ಭಾರತೀಯ ವಾಯುಸೇನೆಯು ವಿಶ್ವದಲ್ಲಿಯೇ 4 ನೇ ಅತ್ಯುತ್ತಮ ಸೇನೆಯಾಗಿದೆ.
- 1.4 ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- 1700 ಕ್ಕೂ ಅಧಿಕ ಏರ್ ಕ್ರಾಫ್ಟ್ಗಳನ್ನು ಹೊಂದಿದೆ.
- *ನೆರೆ ದೇಶಗಳಾದ ಚೀನಾ, ಪಾಕಿಸ್ತಾನದೊಂದಿಗೆ ನಾಲ್ಕು ಪ್ರಮುಖ ಯುದ್ಧಗಳಲ್ಲಿ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
- 5 ಕಾರ್ಯಕಾರಿ ಕಮಾಂಡ್‌ಗಳು ಮತ್ತು 2 ಕ್ರಿಯಾತ್ಮಕ ಕಮಾಂಡ್ ಗಳನ್ನು ಹೊಂದಿದೆ.
- ರಷ್ಯಾ, ಫ್ರಾನ್ಸ್, ಬಾಂಗ್ಲಾದೇಶ, ಜಪಾನ್, ಅಮೇರಿಕಾ ಸೇರಿ 20 ಕ್ಕೂ ಅಧಿಕ ದೇಶಗಳೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಾಗಿದೆ.
ಗರುಡ ಪಡೆ
ವಾಯುಪಡೆಯ ಶಸ್ತ್ರಾಸ್ತ್ರಗಳು:
ವಾಯುಪಡೆಯ ತರಬೇತಿ ಶಾಲೆಗಳು
2021 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟ (THE NOBEL PEACE PRIZE 2021)
ರೆಪೊದರ ಪ್ರಕಟಿಸಿದ ಆರ್.ಬಿ.ಐ
ಭಾರತೀಯ ರಿಸರ್ವ್ ಬ್ಯಾಂಕ್.
- ಸ್ಥಾಪನೆ : 1935 ಏಪ್ರಿಲ್ 01
- ರಾಷ್ಟ್ರೀಕರಣ 1949 ಜನೇವರಿ 01
- ಲಾಂಛನ - ಹುಲಿ
- ಕೇಂದ್ರ ಕಛೇರಿ - ಮುಂಬೈ
- ಮೊದಲ ಗವರ್ನರ್ : ಸರ್.ಓಸ್.ಬರ್ನ್ಸ್ಮಿತ್
- ಮೊದಲ ಭಾರತೀಯ ಗವರ್ನರ್ - ಸಿ.ಡಿ.ದೇಶ್‌ಮುಖ್
- ಪ್ರಸ್ತುತ ಗವರ್ನರ್ - ಶಕ್ತಿ ಕಾಂತ್ ದಾಸ್ (25)
- ರೆಪೋದರ : ವಾಣಿಜ್ಯ ಬ್ಯಾಂಕುಗಳು ಆರ್.ಬಿ.ಐ ದಿಂದ ತಂದಿರುವ ಸಾಲದ ಮೇಲೆ ಆರ್.ಬಿ.ಐ ವಿಧಿಸುವ ಬಡ್ಡಿದರವಾಗಿದೆ.
- ಪ್ರಸ್ತುತ ರೆಪೊದರ - 4.0% (2021)
- ರಿವರ್ಸ್ ರೆಪೊದರ : ವಾಣಿಜ್ಯ ಬ್ಯಾಂಕ್‌ಗಳು ಆರ್.ಬಿ.ಐ ನಲ್ಲಿ ಇಟ್ಟ ಹಣದ ಮೇಲೆ ಆರ್.ಬಿ.ಐ ವಿಧಿಸುವ ಬಡ್ಡಿದರವೇ ರಿವರ್ಸ್ ರೆಪೋ ದರವಾಗಿದೆ.
- ಪ್ರಸ್ತುತ ರಿವರ್ಸ್ ರೆಪೊ ದರ - 3.35%
ಏರ್ ಇಂಡಿಯಾ ಖರೀದಿಸಿದ ಟಾಟಾ ಸಮೂಹ
- 18,000 ಕೋಟಿ ರೂ.ಗೆ ಟಾಟಾ ಸೆನ್ಸ್‌ಗೆ ಏರ್ ಇಂಡಿಯಾ ಗೆ ಮಾರಾಟ
- 15,300 ಕೋಟಿ ರೂ.ಸಾಲದ ಹೊಣೆ ಹೊರಲಿರುವ ಟಾಟಾ
- 2,700 ಕೋಟಿ ರೂ. ನಗದಿನಲ್ಲಿ ಸರ್ಕಾರಕ್ಕೆ ಪಾವತಿಸಲಿರುವ ಟಾಟಾ ಸನ್ಸ್.
- 5 ವರ್ಷಗಳ ಬಳಿಕ ಟಾಟಾ ಸನ್ಸ್ ಬ್ಯಾಂಡ್‌ನ್ನು ಅದೇ ಹೆಸರಿನೊಂದಿಗೆ ಕೇವಲ ಭಾರತೀಯರಿಗಷ್ಟೇ ವರ್ಗಾಯಿಸಬಹುದು.
- 60,000 ಕೋಟಿ ರೂ. ಏರ್ ಇಂಡಿಯಾ ಸಾಲ; ನಿತ್ಯ 20 ಕೋಟಿ ನಷ್ಟ ಒಪ್ಪಂದದ ಬಳಿಕ 46,262 ಕೋಟಿ ಮೌಲ್ಯದ ಸಾಲ, 14,718 ಕೋಟಿ ರೂ ಮೌಲ್ಯದ ಕಟ್ಟಡ ಮತ್ತು ಭೂಮಿ ಸರ್ಕಾರದ ಸುಪರ್ದಿಗೆ.
ಉದ್ಯೋಗಿಗಳ ಸ್ಥಿತಿ :-
ಏರ್ ಇಂಡಿಯಾ
- ಸ್ಥಾಪಕ : ಜೆಆರ್‌ಡಿ ಟಾಟಾ
- ಏರ್ ಇಂಡಿಯಾದ ಇತಿಹಾಸ ಸಹ ಭಾರತ ಸ್ವಾತಂತ್ರ್ಯಕ್ಕಿಂತಲೂ ಹಳೆಯದು. ಪೈಲಟ್ ಪರವಾನಗಿ ಪಡೆದಿದ್ದ ಮೊದಲ ಭಾರತೀಯ, ಉದ್ಯಮಿ ಜೆಆರ್‌ಡಿ ಟಾಟಾ 1932 ರಲ್ಲಿ ಕರಾಚಿ ಮತ್ತು ಬಾಂಬೆ ನಡುವೆ ಏರ್ ಮೇಲ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದರು.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ
ಇವುಗಳನ್ನೂ ಓದಿ
💥 Also Read: 01 October 2021 Detailed daily Current Affairs in Kannada for All Competitive Exams
💥 Also Read: 02 October 2021 Detailed daily Current Affairs in Kannada for All Competitive Exams
💥 Also Read: 03 October 2021 Detailed daily Current Affairs in Kannada for All Competitive Exams
💥 Also Read: 04 October 2021 Detailed daily Current Affairs in Kannada for All Competitive Exams
💥 Also Read: 05 October 2021 Detailed daily Current Affairs in Kannada for All Competitive Exams
💥 Also Read: 06 October 2021 Detailed daily Current Affairs in Kannada for All Competitive Exams
💥 Also Read: 07 October 2021 Detailed daily Current Affairs in Kannada for All Competitive Exams
💥 Also Read: 08 October 2021 Detailed daily Current Affairs in Kannada for All Competitive Exams
💥 Click here to Read Daily Current Affairs in Kannada
No comments:
Post a Comment