Breaking

Saturday, 2 October 2021

02 October 2021 Detailed daily Current Affairs in Kannada for All Competitive Exams

 

02 October 2021 Detailed daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ಮಹಾತ್ಮಾ ಗಾಂಧೀಜಿಯವರ 152 ನೇ ಜನ್ಮದಿನಾಚರಣೆ

 

ಅಹಿಂಸೆಯ ಹಾದಿಯಲ್ಲಿ ಕ್ರಮಿಸಿ ಸದಾ ಭಾರತೀಯರ ಮನದಲ್ಲಿ ಹಸಿರಾಗಿದ್ದಾರೆ ಮಹಾತ್ಮಾ ಗಾಂಧೀಜಿ, ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಗಾಂಧೀಜಿಯವರ ಸತ್ಯ, ಅಹಿಂಸೆಯ ಸಿದ್ಧಾಂತ ಬೋಧನೆಗಳನ್ನು ಇಡೀ ದೇಶವೇ ಅನುಸರಿಸುತ್ತದೆ. ಇಂತಹ ಪುಣ್ಯ ಪುರುಷನ ಜನ್ಮ ದಿನವನ್ನು ಅಕ್ಟೋಬರ್ 02 ರಂದು ಆಚರಿಸಲಾಗುತ್ತದೆ.

 

ಗಾಂಧೀಜಿಯವರ ಜನನ & ಜೀವನ

 

* 1869 ಅಕ್ಟೋಬರ್ 2 ರಂದು ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು.

* ತಂದೆ: ಕರಮಚಂದ ಗಾಂಧಿ, ತಾಯಿ : ಪುತಲೀಬಾಯಿ

* ಇವರ ಪತ್ನಿ : ಕಸ್ತೂರಿ ಬಾ

* ಪುತ್ರರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿರಾಮದಾಸ್ ಗಾಂಧಿ & ದೇವದಾಸ್ ಗಾಂಧಿ 

 

ಗಾಂಧೀಜಿಯವರ ಪ್ರಮುಖ ಹೋರಾಟ ಮತ್ತು ಚಳುವಳಿಗಳು

 

ಗಾಂಧೀಜಿಯವರ ತತ್ವಗಳಿಗೆ ಮುಖ್ಯಸ್ಫೂರ್ತಿ ಭಗವದ್ಗೀತೆ & ರಷ್ಯಾದ ಸಾಹಿತಿ ಲಿಯೋಟಾಲ್ಸ್ಟಾಯ್ ಬರಹಗಳು ಹಾಗೂ ಅಮೆರಿಕನ್ ಸಾಹಿತಿ (ಡೇವಿಡ್ ಥೋಯ್ಸನ್' ರವರ ಪ್ರಬಂಧಗಳು

1) ಭಾರತದಲ್ಲಿ ಇವರು ಕೈಗೊಂಡ ಮೊದಲ ಚಳುವಳಿ 'ಚಂಪಾರಣ್ಯ ಸತ್ಯಾಗ್ರಹ' 1917 ರಲ್ಲಿ. ಈ ಚಳುವಳಿಗೆ ಇವರನ್ನು ಕರೆತಂದವರು - ರಾಜೀವ್ ಕುಮಾರ ಶುಕ್ಲಾ

2) 1918 “ಬೇಡಾ' ಸತ್ಯಾಗ್ರಹ

3) 1920 ಅಸಹಕಾರ ಚಳುವಳಿ

4) 1924 ರ ಬೆಳಗಾವಿ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.

5) 1930 ರಲ್ಲಿ ಕಾನೂನು ಭಂಗ ಚಳುವಳಿ, ದಂಡಿಸತ್ಯಾಗ್ರಹ, ರೈತ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ ಮತ್ತು ಉಪ್ಪಿನ ಸತ್ಯಾಗ್ರಹಗಳು ಗಾಂಧೀಜಿಯವರ ನೇತೃತ್ವದಲ್ಲಿಯೇ ನಡೆದವು.

6) 1931 ರಲ್ಲಿ ಗಾಂಧಿ 'ಇರ್ವಿನ್ ಒಪ್ಪಂದ

7) 1932 ರಲ್ಲಿ ಗಾಂಧಿ & ಅಂಬೇಡ್ಕರ್ ಮದ್ಯೆ 'ಪೂನಾ ಒಪ್ಪಂದ'

8) 1942 ರಲ್ಲಿ 'ಚಲೇಜಾವ್' (ಕ್ವಿಟ್ ಇಂಡಿಯಾ) ಚಳುವಳಿಗೆ ಕರೆ ನೀಡಿದರು.

 

ಗಾಂಧೀಜಿಯವರ ಪತ್ರಿಕೆಗಳು

 

1) ದಕ್ಷಿಣ ಆಫ್ರಿಕಾದಲ್ಲಿ 'Indian Opinion'

2) ಭಾರತದಲ್ಲಿ ಹರಿಜನ ಪತ್ರಿಕೆ [ಇದು ಗುಜರಾತಿ, ಹಿಂದಿ, ಆಂಗ್ಲಭಾಷೆಯಲ್ಲಿ ಪ್ರಕಟವಾಗುತ್ತಿತ್ತು]

3) Young India (ಆಂಗ್ಲಭಾಷೆ)

4) ನವಜೀವನ (ಗುಜರಾತಿ) 


ಗಾಂಧೀಜಿಯವರ ಬದುಕು ಆಧಾರಿತ ಚಿತ್ರಗಳು

1) ಗಾಂಧೀಜಿ ಬದುಕನ್ನು ಆಧರಿಸಿ ಬಂದ ಮೊಟ್ಟ ಮೊದಲ ಸಿನಿಮಾ, ವಿದೇಶದಲ್ಲಿ ರಿಚರ್ಡ್ ಅಟೆನ್ ಬರೋ ನಿರ್ದೇಶನದ 1982 ರಲ್ಲಿ ತೆರೆಕಂಡ 'ಗಾಂಧಿ' ಚಲನಚಿತ್ರ, ಇದರಲ್ಲಿ ಗಾಂಧಿ ಪಾತ್ರದಾರಿಯಾಗಿ 'ಜಿನ್ ಕಿಂಗ್ ಸ್ಲೆ' ನಟಿಸಿದ್ದಾರೆ.

2) 1996 ರಲ್ಲಿ 'ಶ್ಯಾಂ ಬೆನಗಲ್' ನಿರ್ದೇಶನದ 'ಮೇಕಿಂಗ್ ಆಫ್ ಮಹಾತ್ಮ'

3) 2011 ರಲ್ಲಿ 'ಕೂರ್ಮಾವತಾರ' ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ

4) 2000 ದಲ್ಲಿ 'ಹೇ ರಾಮ್' ಕಮಲಹಾಸನ್ ನಿರ್ದೇಶನದಲ್ಲಿ.

5) 2005 ರಲ್ಲಿ 'ಮೈನೆ ಗಾಂಧಿ ತೋ ನಹಿ ಮಾರಾ' ಜಾಹ್ನು ಬರುವ ನಿರ್ದೇಶನದಲ್ಲಿ

6) 2007 ರಲ್ಲಿ 'ಲಗೇ ರಹೋ ಮುನ್ನಾಭಾಯ್' ರಾಜಕುಮಾರ ಹಿರಾನಿ ನಿರ್ದೇಶನ

7) 2012 ರಲ್ಲಿ 'ವೆಲ್‌ಕಮ್ ಬ್ಯಾಕ್ ಗಾಂಧಿ' ಬಾಲಕೃಷ್ಣ ನಿರ್ದೇಶನದಲ್ಲಿ.

 💥 Also Read: 01 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

ವಿಶೇಷತೆಗಳು

 

ಗಾಂಧೀಜಿಯವರಿಗೆ ನಂದಿಬೆಟ್ಟ ಅಚ್ಚು ಮೆಚ್ಚಿನ ತಾಣವಾಗಿತ್ತು. 1927 ಏಪ್ರಿಲ್ 20 ರಂದು ಭೇಟಿ ನೀಡಿ 45 ದಿನಗಳ ಕಾಲ ಇಲ್ಲಿಯೇ ತಂಗಿದ್ದರು.

ಮಹಾತ್ಮಾ ಗಾಂಧೀಜಿಗೆ 'ಬಾಪೂಜಿ' ಎಂದು ಕರೆದ ವ್ಯಕ್ತಿ ಸರ್ಧಾರ್ ವಲ್ಲಬಾಯಿ ಪಟೇಲ್

• 'ರಾಷ್ಟ್ರಪಿತ' ಎಂದು ಕರೆದವರು - ಸುಭಾಷ್ ಚಂದ್ರ ಬೋಸ್

• 'ಮಹಾತ್ಮಾ' ಎಂದು ಕರೆದ ವ್ಯಕ್ತಿ- ರವೀಂದ್ರನಾಥ ಠಾಗೋರ್

• ಅರೆನಗ್ನ ಫಕೀರ' ಎಂದು ಕರೆದ ವ್ಯಕ್ತಿ – ವಿನ್ಸಂಟಿನ್ ಚರ್ಚಿಲ್

ಭಾರತದಲ್ಲಿ ಸುಮಾರು 53 ಪ್ರಮುಖ ರಸ್ತೆಗಳು, ಮಹಾತ್ಮಾ ಗಾಂಧಿಯವರ ಹೆಸರು ಹೊಂದಿವೆ. ವಿದೇಶದಲ್ಲಿಯೂ ಸಹ 45 ಮಹಾತ್ಮಾಗಾಂಧಿ ಹೆಸರಿನ ರಸ್ತೆಗಳಿವೆ.

ಗಾಂಧಿ ಸಾವಿನ 21 ವರ್ಷಗಳ ನಂತರ ಬ್ರಿಟನ್‌ನಲ್ಲಿ ಗೌರವಾರ್ಥವಾಗಿ ಅಂಚೆ ಚೀಟಿಯೊಂದನ್ನು ಹೊರ ತರಲಾಗಿತ್ತು.

* ಗಾಂಧೀಜಿಯವರನ್ನು 5 ಬಾರಿ ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ನೊಬೆಲ್‌ನಲ್ಲಿ ಮರಣೋತ್ತರ ಪ್ರಶಸ್ತಿ ನೀಡಲು ಅವಕಾಶವಿಲ್ಲ.

 

ರಾಷ್ಟ್ರಪಿತನ ಕೊನೆಯ ದಿನಗಳು

 

1948 ಜನೇವರಿ 30 ರಂದು ಕೋಲ್ಕತ್ತಾದಲ್ಲಿ ನಾಥೋರಾಂ ವಿನಾಯಕ ಗೋಡ್ಸ್ ಎಂಬಾತ, ಪ್ರಾರ್ಥನಾ ಮಂದಿರಕ್ಕೆ ಹೋಗುವ ಸಂದರ್ಭದಲ್ಲಿ ಗುಂಡಿಟ್ಟು ಹತ್ಯೆ ಮಾಡಿದನು.

 

ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ

 

ಸ್ವಾತಂತ್ರ್ಯ ಭಾರತದ ಎರಡನೇ ಪ್ರಧಾನಿಯಾಗಿದ್ದ ಇವರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿ ಸರಳತೆಯ ಪ್ರತೀಕವಾಗಿ ಇಂದಿಗೂ ಭಾರತೀಯರ ಮನೆ ಮನಗಳಲ್ಲಿ ಹೆಸರಾಗಿದ್ದಾರೆ.

 

ಲಾಲ ಬಹಾದ್ದೂರ ಶಾಸ್ತ್ರಿ ಕುರಿತು

ಲಾಲ್‌ಬಹಾದ್ದೂರ್ ಶಾಸ್ತ್ರೀಯವರು, 1904 ಅಕ್ಟೋಬರ್ 2 ರಂದು ಜನಿಸಿದರು.

 

ಭಾರತ ಸರ್ಕಾರಕ್ಕೆ ಸಲ್ಲಿಸಿದ ಸೇವೆ

 

* ಗೋವಿಂದ ವಲ್ಲಭ ಪಂತ ಅವರ ಸರ್ಕಾರದಲ್ಲಿ ಪೊಲೀಸ್ ಖಾತೆಯನ್ನು ಇವರು ನಿರ್ವಹಿಸಿದರು

* 1951 ರಲ್ಲಿ 'General Secretry” ಯಾಗಿ ಲೋಕಸಭೆಗೆ ಆಯ್ಕೆ

* 1961 ರಲ್ಲಿ ಭಾರತದ ಗೃಹಮಂತ್ರಿಯಾಗಿದ್ದರು

* 1964 ಜೂನ್ 9 ರಂದು ಭಾರತದ ಪ್ರಧಾನಿಯಾಗಿ ಆಯ್ಕೆಯಾದರು

* 1966 ರ ಜನೇವರಿಯಲ್ಲಿ ಪಾಕಿಸ್ತಾನದೊಂದಿಗೆ ತಾಷ್ಕೆಂಟ್ ಒಪ್ಪಂದ.

 

ತಾಷ್ಕೆಂಟ್ ಒಪ್ಪಂದದ ಕುರಿತು

 

1965 ರ ಇಂಡೋ-ಪಾಕಿಸ್ತಾನ ಯುದ್ಧವನ್ನು ಬಗೆಹರಿಸುವ ಸಲುವಾಗಿ 1966 ಜನೆವರಿ 10 ರಂದು ರಷ್ಯಾದ ಅಲೆಕ್ಷೆ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲ್ಪಟ್ಟ ಸಭೆಯಲ್ಲಿ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಪಾಕ್‌ ಪ್ರಧಾನಿ ಮಹಮ್ಮದ್ ಅಯೂಬ್ ಖಾನ್ ನಡುವೆ ನಡೆದಂತಹ ಶಾಂತಿ ಒಪ್ಪಂದವೇ ಈ ತಾಷ್ಕಂಟ್ ಒಪ್ಪಂದ. ಈ ತಾಷ್ಕೆಂಟ್ ಇರುವುದು ಸೋವಿಯತ್ ರಷ್ಯಾದ ಉಜ್ಜಿಕಿಸಾನ್‌ನಲ್ಲಿ (ಸೋವಿಯತ್ ಯೂನಿಯನ್) .

 

ತಾಷ್ಕೆಂಟ್ ಒಪ್ಪಂದದ ಮುಖ್ಯಾಂಶಗಳು

 

* ಉಭಯ ದೇಶಗಳು ಶಾಶ್ವತ ಶಾಂತಿ ಸ್ಥಾಪಿಸಿಕೊಳ್ಳುವುದು.

* ಭಾರತ & ಪಾಕಿಸ್ತಾನದ ಸೈನಿಕರನ್ನು ಮೊದಲಿದ್ದ ಸ್ಥಳಗಳಿಗೆ ಹಿಂದಿರುಗಿಸುವುದು.

* ಉಭಯ ರಾಷ್ಟ್ರಗಳು ಪರಸ್ಪರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದೇ ಆರ್ಥಿಕ & ರಾಜ ತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಸಿಕೊಳ್ಳುವುದು

* ಯುದ್ಧ ಕೈದಿಗಳ ಕ್ರಮಬದ್ಧ ವರ್ಗಾವಣೆ 

 

ಶಾಸ್ತ್ರೀಯವರ ಜೀವನದ ವಿಶೇಷತೆಗಳು

 

* ಇವರ ಪ್ರಮುಖ ಘೋಷಣೆ 'ಜೈ ಜವಾನ್ ಜೈ ಕಿಸಾನ್”

* 1966 ರಲ್ಲಿ ಇವರಿಗೆ ಮರಣೋತ್ತರ 'ಭಾರತ ರತ್ನ' ಪ್ರಶಸ್ತಿ ದೊರೆತಿತ್ತು. ಶಾಸ್ತ್ರೀಯವರು ಭಾರತದಲ್ಲಿ ನಡೆದ 'ಹಸಿರು ಕ್ರಾಂತಿ' ಹಾಗೂ ಕ್ಷೀರ ಕ್ರಾಂತಿಯ ಕಾರಣ ಪುರುಷರು.

* ಲಾಲ್ ಬಹಾದ್ದೂರ್ ಶಾಸ್ತ್ರೀಯವರು ಜನೇವರಿ 11, 1966 ರಂದು ಮರಣ ಹೊಂದಿದರು.

 

 💥 Also Read: 01 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ಜಗದೀಶ್ಚಂದ್ರ ಅಂಚನ್‌ಗೆ 'ಸಿದ್ಧಗಂಗಾ ಶ್ರೀ ರಾಜ್ಯ ಪ್ರಶಸ್ತಿ'

 

ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸೊಸೈಟಿ ಬೆಂಗಳೂರು ಹಾಗೂ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಇದರ ನೇತೃತ್ವದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇದರಲ್ಲಿ ಕ್ರೀಡಾ ಬರವಣೆಗೆಗಾಗಿ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಪ್ರತಿಷ್ಠಿತ 'ಸಿದ್ಧಗಂಗಾ ಶ್ರೀ ರಾಜ್ಯ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.

 

ಜಗದೀಶ್ಚಂದ್ರ ಅಂಚನ್ ಕಳೆದ ಸುಮಾರು 30 ವರ್ಷಗಳಿಂದ ಕ್ರೀಡಾ ಅಂಕಣ ಹಾಗೂ ಕ್ರೀಡಾ ಲೇಖನಗಳ ಮೂಲಕ ರಾಜ್ಯ, ಅಂತರ್ ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಸುಮಾರು 4000ಕ್ಕೂ ಮಿಕ್ಕಿದ ಕ್ರೀಡಾ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಇವರು “ವಿಶ್ವಕಪ್ ಕ್ರಿಕೆಟ್ ಸಮರ” ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.

 

ಪ್ರಶಸ್ತಿಗಳು & ಪುರಸ್ಕಾರಗಳು

 

ಜಗದೀಶ್ಚಂದ್ರ ಅಂಚನ್‌ಕಳೆದ ಸುಮಾರು 30 ವರ್ಷ ಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡಾ ಬರವಣಿಗೆಗಾಗಿ ಇವರಿಗೆ 2013 ರಲ್ಲಿ 'ಮೀಡಿಯಾ ಅವಾರ್ಡ್, 2014ರಲ್ಲಿ 'ಸಮಾಜ ರತ್ನ' ರಾಜ್ಯ ಪ್ರಶಸ್ತಿ, 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2018 ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಕ್ರೀಡೆಗಳ ಬಗ್ಗೆ ಇವರು ಬರೆದ ಕ್ರೀಡಾ ಲೇಖನಗಳಿಗಾಗಿ 2019'ಜಾನಪದ ಲೋಕ ರಾಜ್ಯ ಪ್ರಶಸ್ತಿ', 'ನಮ್ಮ ಕುಡ್ಲ ಸಾಧಕ ಪ್ರಶಸ್ತಿ', 2020 ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 'ಕೆ.ಎ.ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿ ಸೇರಿ ದಂತೆ ಹಲವು ಪ್ರಶಸ್ತಿಗಳು ಹಾಗೂ ಸನ್ಮಾನ ಪುರಸ್ಕಾರಗಳನ್ನು ಇವರು ಪಡೆದಿದ್ದಾರೆ.

 

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಘೋಷಣೆ

 

ವಿಶಾಲ ಬಳ್ಳಾರಿ ಜಿಲ್ಲೆ ವಿಭಜಿಸಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಘೋಷಣೆಯಾಗಿರುವುದು ಈ ಭಾಗದ ಜನರ ಒಂದೂವರೆ ದಶಕದ ಹೊರಾಟಕ್ಕೆ ಜಯ ಸಿಕ್ಕಿದೆ. ಹೋರಾಟ, ರಾಜಕೀಯ ಇಚ್ಛಾಶಕ್ತಿ ಎರಡೂ ಒಗ್ಗೂಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದು ನಿದರ್ಶನ. ಜಿಲ್ಲೆ ರಚನೆ ಹೋರಾಟದ ಕಾವು ಆರಂಭದಲ್ಲಿ ಜೋರಿತ್ತು. ಎಲ್ಲ ವಲಯದವರು ಅದನ್ನು ಬೆಂಬಲಿಸಿದ್ದರು. ಪ್ರವಾಸೋಧ್ಯಮ, ಪರಿಸರ, ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಅವರ ಇಚ್ಚಾಶಕ್ತಿಯಿಂದ ರಾಜ್ಯ ಸರ್ಕಾರ ಫೆ. 8ರಂದು ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಿತು.

 

ಹೋರಾಟದ ಹಿನ್ನೆಲೆ:

 

ವಿಜಯನಗರ ಜಿಲ್ಲೆ ರಚಿಸಬೇಕೆಂಬ ಕೂಗು ಆರಂಭವಾಗಿದ್ದು, 2006-07ರಲ್ಲಿ. ಆ ವರ್ಷ ಸತತ ಮೂರು ತಿಂಗಳು ಹೋರಾಟ ನಡೆದಿತ್ತು. ವಿಜಯನಗರ ಜಿಲ್ಲಾ ಹೋರಾಟ ಸಮಿತಿ ರಚಿಸಿಕೊಂಡು ಜಿಲ್ಲೆಗಾಗಿ ಈ ಭಾಗದ ಜನ ಹೋರಾಟ ನಡೆಸಿದ್ದರು. ಆದರೆ, ಆ ಬೇಡಿಕೆ ಈಡೇರಿರಲಿಲ್ಲ. ಬಳಿಕ ಹೋರಾಟ ಮನವಿ ಪತ್ರ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ, 2019ರಲ್ಲಿ ಈ ವಿಷಯಕ್ಕೆ ಹೆಚ್ಚಿನ ಮಹತ್ವ ಬಂತು. ಈ ವಿಷಯವನ್ನು ಮುಂದಿಟ್ಟುಕೊಂಡು ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಜಿಲ್ಲೆಯ ಕನಸು ಕಂಡು, ಹೋರಾಟದ ಮುಂಚೂಣಿಯಲ್ಲಿದ್ದ ಡಾ|| ಉಳ್ಳೇಶ್ವರ ಈ ಸಂದರ್ಭ ಕಣ್ಣುಂಬಿಕೊಳ್ಳಲು ನಮ್ಮ ನಡುವೆ ಇಲ್ಲ ಆದರೆ, ಹೋರಾಟದಲ್ಲಿ ಸಕ್ರಿಯರಾಗಿದ್ದ ಅನೇಕರು ಈ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಿದ್ದು, ಅವರಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ.

 

ಜಿಲ್ಲೆಯ ಅಗತ್ಯ ಏಕಿತ್ತು?

 

ಅಖಂಡ ಬಳ್ಳಾರಿ ಜಿಲ್ಲೆ ಹನ್ನೊಂದು ತಾಲ್ಲೂಕುಗಳನ್ನು ಒಳಗೊಂಡಿತ್ತು. ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ, ಹರಪ್ಪನಹಳ್ಳಿ, ತಾಲ್ಲೂಕುಗಳ ಹಳ್ಳಿಗಳು ಇನ್ನೂರು ಕಿ.ಮೀಗೂ ಹೆಚ್ಚು ದೂರದಲ್ಲಿದ್ದವು. ಕಚೇರಿ ಸೇರಿದಂತೆ ಇತರೆ ಕೆಲಸಗಳಿಗೆ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಸಮಸ್ಯೆಯಾಗುತ್ತಿತ್ತು. ಭೌಗೋಳಿಕವಾಗಿ ಜಿಲ್ಲೆ ವಿಶಾಲವಾಗಿರುವುದರಿಂದ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ರಚಿಸಬೇಕು. ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳನ್ನು ಅದರ ವ್ಯಾಪ್ತಿಗೆ ಸೇರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆಡಳಿತದ ಹಿತದೃಷ್ಟಿಯಿಂದಲೂ ಜಿಲ್ಲೆ ಆಗಬೇಕಿದೆ ಎಂಬ ವಾದ ಇತ್ತು. ಸೆ. 8 ರಂದು ಈಡೇರುವುದರ ಮೂಲಕ ಆ ದಿನ ಚರಿತ್ರೆಯ ಪುಟದಲ್ಲಿ ಸೇರಿದೆ.

 

ಬಳ್ಳಾರಿ ಜಿಲ್ಲೆಯ ತಾಲ್ಲೂಕುಗಳು

* ಬಳ್ಳಾರಿ (ಕೇಂದ್ರ ಸ್ಥಾನ)

* ಸಂಡೂರು

* ಸಿರುಗುಪ್ಪ

* ಕಂಪ್ಲಿ

* ಕುರುಗೋಡು

 

ವಿಜಯನಗರ ಜಿಲ್ಲೆ ತಾಲ್ಲೂಕುಗಳು

* ಹೊಸಪೇಟೆ

* ಹರಪ್ಪನಹಳ್ಳಿ

* ಕೊಟ್ಟೂರು

* ಹೂವಿನ ಹಡಗಲಿ

* ಹಗರಿ ಬೊಮ್ಮನ ಹಳ್ಳಿ

* ಕೂಡ್ಲಿಗಿ

 

ಫೆಬ್ರುವರಿ 8 ಐತಿಹಾಸಿಕ ದಿನ

 

ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ಫೆಬ್ರುವರಿ 8.2021 ರಂದು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿತು. ವಿಜಯನಗರಕ್ಕೆ ಆರು ತಾಲ್ಲೂಕು, ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಐದು ತಾಲ್ಲೂಕುಗಳನ್ನು ಸೇರಿಸಿದೆ. ಇದೇ ವೇಳೆ ಎರಡೂ ಜಿಲ್ಲೆಗಳ ಗಡಿ ಸರಹದ್ದು ಸಹ ಗುರುತಿಸಿದೆ.

 

ವಿಮಾನ ನಿರೋಧಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಉತ್ತರ ಕೊರಿಯಾ

 

ನೂತನವಾಗಿ ಅಭಿವೃದ್ಧಿಗೊಳಿಸಿರುವ ವಿಮಾನ ನಿರೋಧಕ ಕ್ಷಿಪಣಿಯನ್ನು ಉತ್ತರ ಕೋರಿಯಾ ಯಶಸ್ವಿಯಾಗಿ ಪರೀಕ್ಷಿಸಿದ್ದು ಈ ವಾರದಲ್ಲಿ ನಡೆಸುತ್ತಿರುವ 2ನೇ ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆ ಇದಾಗಿದೆ.

 

ಇತ್ತೀಚೆಗೆ ಅತ್ಯಂತ ಶಕ್ತಿಶಾಲಿ ಹೈಪರ್‌ಸಾನಿಕ್ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ, 2 ದಿನದ ಬಳಿಕ ವಿಮಾನ ನಿರೋಧಕ ಕ್ಷಿಪಣಿ ಉಡಾಯಿಸಿ ದಕ್ಷಿಣ ಕೋರಿಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅವಳಿ ಪಥದರ್ಶಕ ವ್ಯವಸ್ಥೆ ಸಹಿತ ಇತರ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ, ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಅಸಾಧಾರಣ ಯುದ್ಧ ಸಾಮರ್ಥ್ಯವುಳ್ಳ ಕ್ಷಿಪಣಿ ಇದಾಗಿದೆ ಎಂದು ಸರಕಾರಿ ಸ್ವಾಮ್ಯದ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ಹೇಳಿದೆ.

* ಸುಮಾರು 6 ತಿಂಗಳ ವಿರಾಮದ ಬಳಿಕ ಕ್ಷಿಪಣಿ ಪರೀಕ್ಷೆಗಳನ್ನು ಮತ್ತೆ ಆರಂಭಿಸಿದ್ದ ಉತ್ತರ ಕೋರಿಯಾ, ಪರಮಾಣು ಅವತ್ತರ ಹಡಗಿನಿಂದ ಉಡಾಯಿಸುವ ಕ್ಷಿಪಣಿ, ಬಳಿಕ ರೈಲಿನಿಂದ ಉಡಾಯಿಸಬಹುದಾದ 2 ಪ್ರಕ್ಷೇಪಕ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡಿಸಿತ್ತು.

 

ಉತ್ತರ ಕೊರಿಯಾ

 

* ರಾಜಧಾನಿ - ಪ್ಯಾಂಗಾಂಗ್

* ಕರೆನ್ಸಿ - “ವಾನ್” (ಕೆ.ಪಿ.ಡಬ್ಲ್ಯೂ)

* ಅಧಿಕೃತ ಭಾಷೆ - ಕೊರಿಯನ್

* ಅಧ್ಯಕ್ಷ - ಕಿಮ್-ಯಾಂಗ್-ನಾಮ್

* ಪ್ರಧಾನ ಮಂತ್ರಿ - ಪಕ್-ಪಾಂಗ್-ಜು


💥 Also Read: 01 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ದಿನಾಂಕ: 02-10-2021 ರ ಪ್ರಮುಖ ಪ್ರಚಲಿತ ಘಟನೆಗಳ ಪ್ರಶೋತ್ತರಗಳು

 

1. ಈ ಕೆಳಗಿನ ಯಾರನ್ನು ಶಸ್ತ್ರಾಸ್ತ್ರ ನಿರ್ದೇಶನಾಲಯಕ್ಕೆ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ?

ಎ) ಇ.ಆರ್‌.ಶೇಖ್ 

ಬಿ) ಅರುಣ್ ಕುಮಾರ್

ಸಿ) ವಿವೇಕ್ ದೇಬ್ರಾಯ್

ಡಿ) ಅರ್ಜುನ ಕಶ್ಯಪ್

 

2. ಪ್ರಸ್ತುತ ಮಾಸಿಕದ ಕೈಗಾರಿಕೆ ಬೆಳವಣಿಗೆಯ ಪ್ರಗತಿಯ ಶೇಕಡಾವಾರು ಎಷ್ಟು?

ಎ) ಶೇ 8.14%

ಬಿ) ಶೇ 11.6%

ಸಿ) ಶೇ. 23%

ಡಿ) ಶೇ 10.11%

 

3. ನಗರಗಳ ರೂಪಾಂತರ ಯೋಜನೆಗಳಿಗೆ ಈ ಕೆಳಗಿನ ಯಾವ ಎರಡು ಯೋಜನೆಗಳು ಒಳಗೊಳ್ಳುತ್ತವೆ.

1) ಮೇಕ್ ಇನ್ ಇಂಡಿಯಾ

2) ಸ್ವಚ್ಛ ಭಾರತ್ ಮಿಷನ್

3) ಅಮೃತ್ ಯೋಜನೆ

4) ಮುದ್ರಾ ಯೋಜನೆ

ಆಯ್ಕೆಗಳು

ಎ) 1 ಮತ್ತು 2 ಸರಿ

ಬಿ) 2 ಮತ್ತು 4 ಸರಿ

ಸಿ) 2 ಮತ್ತು 3 ಸರಿ

ಡಿ) 1 ಮತ್ತು 4 ಸರಿ

 

4. ವಿವೇಕ್ ರಾಮ್ ಚೌಧರಿ ಈ ಕೆಳಗಿನ ಯಾವ ಪಡೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?

ಎ) ವಾಯುಸೇನೆ

ಬಿ) ಭೂಸೇನೆ

ಸಿ) ನೌಕಾಸೇನೆ

ಡಿ) ಸಿ.ಡಿ.ಎಸ್

 

5. ಈ ಕೆಳಗಿನ ಯಾವುದು ಹಿರಿಯ ನಾಗರೀಕ ಸಹಾಯವಾಣಿ ಯಾಗಿದೆ?

ಎ) 112

ಬಿ) 14567

ಸಿ) 108

ಡಿ) 144

 

6. ವಿಶ್ವ ಸಸ್ಯಹಾರ ಜಾಗೃತ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸುತ್ತಾರೆ.

ಎ) ಅಕ್ಟೋಬರ್ 02 

ಬಿ) ಸೆಪ್ಟೆಂಬರ್ 30

ಸಿ) ಸೆಪ್ಟೆಂಬರ್ 24 

ಡಿ) ಅಕ್ಟೋಬರ್ 01

 💥 Also Read: 01 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

No comments:

Post a Comment

Important Notes

Random Posts

Important Notes

Popular Posts

ಕೋಚಿನ್ ಶಿಪ್‌ಯಾರ್ಡ್ ಅಧಿಸೂಚನೆ 2024: 71 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೋಚಿನ್ ಶಿಪ್‌ಯಾರ್ಡ್ ಅಧಿಸೂಚನೆ 2024: 71 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL), ಕೇರಳದ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಕಂಪನಿಯು 2024ನೇ ಸಾಲಿನಲ್ಲಿ ತನ್ನ ಕಾರ್ಯಗಾರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಸ್ಕಾಫೋಲ್ಡರ್ ಮತ್ತು ಸೆಮಿ-ಸ್ಕಿಲ್ಲ್ಡ್ ರಿಗರ್ ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದೆ. ನವೆಂಬರ್ 11, 2024 ರಂದು ಬಿಡುಗಡೆಯಾದ CSL ಅಧಿಸೂಚನೆಯ ಮೂಲಕ ಒಟ್ಟು 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಕೋಚಿನ್ ಶಿಪ್‌ಯಾರ್ಡ್ ಅಧಿಸೂಚನೆ 2024 ಈ ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು CSL ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು ಪೂರ್ಣ ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಿಸಬೇಕು. CSL ಉದ್ಯೋಗಗಳ ಕುರಿತ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ: ಹುದ್ದೆಗಳ ವಿವರಗಳು (71 ಹುದ್ದೆಗಳು) ಹುದ್ದೆ ಕೋಟ ಹುದ್ದೆಗಳ ಸಂಖ್ಯೆ ಸ್ಕಾಫೋಲ್ಡರ್ ಸಾಮಾನ್ಯ - 09, EWS - 02, OBC - 09, SC - 01 21 ಸೆಮಿ-ಸ್ಕಿಲ್ಲ್ಡ್ ರಿಗರ್ ಸಾಮಾನ್ಯ - 24, EWS - 05, OBC - 15, SC - 05, ST - 01 50 ಶೈಕ್ಷಣಿಕ ಅರ್ಹತೆಗಳು ಸ್ಕಾಫೋಲ್ಡರ್: ಕನಿಷ್ಠ 10ನೇ ತರಗತಿ ಪಾಸ್ ಮತ್ತು ಸಂಬಂಧಿಸಿದ ಕಾರ್ಯದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು. ಸೆಮಿ-ಸ್ಕಿಲ್ಲ್ಡ್ ರಿಗರ್: ಕನಿಷ್ಠ 4ನ

ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ

ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ ದೀಪಾವಳಿ ಹಬ್ಬವು ಹಿಂದೂಧರ್ಮದ ಅತ್ಯಂತ ಪ್ರಮುಖ ಹಾಗೂ ಬಹು ಪ್ರತಿಷ್ಠಿತ ಹಬ್ಬವಾಗಿದೆ. ಈ ಹಬ್ಬದಲ್ಲಿ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವ ಮೂಲಕ ಒಳಿತಿನ ಮೇಲೆ ಕೆಟ್ಟದಿನ ಜಯವನ್ನು ಸಂಭ್ರಮಿಸುತ್ತಾರೆ. ಮನೆಯು ದೊಡ್ಡ ಹಬ್ಬದ ನೆಪದಲ್ಲಿ, ದೀಪ ಮತ್ತು ಹೂವಿನ ಅಲಂಕಾರದಿಂದ ಸಡಗರಗತವಾಗಿರುತ್ತದೆ. ದೀಪಾವಳಿ ಆಧ್ಯಾತ್ಮಿಕತೆಯನ್ನೂ, ಸಂತೋಷದ ಸಂಕೇತವನ್ನೂ ಸಾರುತ್ತಿದ್ದು, ದೀಪ ಹಚ್ಚುವ ಪ್ರತಿ ದಿನದಂಥಾ ಸಂಪ್ರದಾಯವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಧನ್ತೇರಸ್, ನರಕ ಚತುರ್ದಶಿ ಮತ್ತು ದೀಪಾವಳಿಯ ಮುಖ್ಯ ದಿನದಂದು ನಿರ್ದಿಷ್ಟ ಸಂಖ್ಯೆಯ ದೀಪಗಳನ್ನು ಹಚ್ಚುವುದು ಪ್ರತಿ ಹಬ್ಬದ ಧಾರ್ಮಿಕ, ಆತ್ಮೀಯತೆ ಹಾಗೂ ಅದೃಷ್ಟದ ಸಂಕೇತವಾಗಿದೆ.  ಈ ಲೇಖನದಲ್ಲಿ, ದೀಪಾವಳಿ ಸಂಭ್ರಮದ ಈ ಮೂರು ಮುಖ್ಯ ದಿನಗಳಲ್ಲಿ ಎಷ್ಟು ದೀಪಗಳನ್ನು ಹಚ್ಚಬೇಕು ಮತ್ತು ಅವುಗಳ ಹಿಂದಿರುವ ಅರ್ಥವನ್ನು ವಿವರಿಸುತ್ತೇವೆ.  ಧನ್ತೇರಸ್: ಸಮೃದ್ಧಿಯ ಶುಭಾರಂಭ  ದಿನಾಂಕ: ಅಕ್ಟೋಬರ್ 29 ಧನ್ತೇರಸ್ ದೀಪಾವಳಿಯ ಮೊದಲ ದಿನವಾಗಿದ್ದು, ಇದು ಸಮೃದ್ಧಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಧಾರ್ಮಿಕ ಆಚರಣೆಗಳ ಪ್ರಕಾರ, ಧನ್ತೇರಸಿನಂದು ಮನೆಗಳಲ್ಲಿ 13 ದೀಪಗಳನ್ನು ಹಚ್ಚುವುದು ಮಂಗಳಕರವೆಂದು ನಂಬಲಾಗಿದೆ. ಈ ದೀಪಗಳನ್ನು ಮನೆ, ಅಂಗಡಿ ಮತ್ತು ಆಫೀಸ್‌ಗಳ ಪ್ರಮುಖ ಸ್ಥಳಗಳಲ್

ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನೇಮಕಾತಿ 2024: ಯುವ ವೃತ್ತಿಪರ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನೇಮಕಾತಿ 2024:ಯುವ ವೃತ್ತಿಪರ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India SAI) ದೇಶಾದ್ಯಾಂತ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬಹುದಾದ ಯುವ ಪ್ರೊಫೆಶನಲ್‌ಗಳ ನೇಮಕಾತಿಗೆ 50 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು 4 ವರ್ಷಗಳ ಕಾಲೋಚಿತ ಆಧಾರದ ಮೇಲೆ ಇರುತ್ತವೆ. ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ತೋರಿಸಲು ಈಗ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ನವೆಂಬರ್ 8, 2024 ರಿಂದ ನವೆಂಬರ್ 30, 2024ರ ವರೆಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದು. ಹುದ್ದೆಯ ಮಾಹಿತಿ : ವಿವರ ವಿವರಣೆ ಹುದ್ದೆಯ ಹೆಸರು ಯುವ ವೃತ್ತಿಪರ (Young Professional) ಹುದ್ದೆಗಳ ಸಂಖ್ಯೆ 50 ಕಾಂಟ್ರಾಕ್ಟ್ ಅವಧಿ ಗರಿಷ್ಠ 4 ವರ್ಷಗಳು ಮಾಸಿಕ ಸಂಬಳ ರೂ. 50,000 – 70,000 ಅರ್ಜಿ ಸಲ್ಲಿಕೆ ವಿಧಾನ ಆನ್‌ಲೈನ್ ಮಾತ್ರ ಅರ್ಜಿಯ ಪ್ರಾರಂಭ ದಿನಾಂಕ 08 ನವೆಂಬರ್ 2024 ಅರ್ಜಿಯ ಕೊನೆ ದಿನಾಂಕ 30 ನವೆಂಬರ್ 2024 (ಸಂಜೆ 5 ಗಂಟೆಯವರೆಗೆ) ಅರ್ಜಿಯ ಪೋರ್ಟಲ್ ಭಾರತೀಯ ಕ್ರೀಡಾ ಪ್ರಾಧಿಕಾರದ ವೆಬ್‌ಸೈಟ್ (sportsauthorityofindia.nic.in) ಹುದ್ದೆಗಳ ವಿವರ ಮತ್ತು ಅರ್ಹತೆ: ಹುದ್ದೆಯ ಹೆಸರು: ಯುವ ವೃತ್ತಿಪರ   ಹುದ್ದೆಗಳ ಸಂಖ್ಯೆ: 50 ವಿದ್ಯಾರ್ಹತೆ:  ಅಭ್ಯರ್ಥಿಗಳು

Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams

 Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams  Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams Educational psychology involves  the study of how people learn, including teaching methods, instructional processes, and individual differences in learning . The field of educational psychology incorporates a number of other disciplines, including developmental psychology, behavioral psychology, and cognitive psychology. Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the

SSLC Social Science 2022 All Chapterwise Quiz in Kannada For All Competitive Exams

  SSLC Social Science 2022 All Chapterwise Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

SSLC Social Science Bharatakke Europeannara Agamana Quiz in Kannada For All Competitive Exams

  SSLC Social Science Bharatakke Europeannara Agamana Quiz in Kannada For All Competitive Exams 🌺 Edutube Kannada SSLC Social Science 2024 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

Top General Knowledge One-liner Question Answers in Kannada for All Competitive Exams-13

Top General Knowledge One-liner Question Answers in Kannada for All Competitive Exams-13 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher&

16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು

          16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್

100 Question Answers General Knowledge Quiz in Kannada For All Competitive Exams

  100 Question Answers General Knowledge Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ  ಪ್ರಶ್ನೋತ್ತರಗಳ ಕ್ವಿಜ್   www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥