ಇತಿಹಾಸದ ಸೂಪರ್ ಪ್ರಶ್ನೋತ್ತರಗಳು-01
1. ದಕ್ಷಿಣ ಪಥೇಶ್ವರ ಎಂಬ ಬಿರುದಿನಿಂದ ಯಾರನ್ನು ಕರೆಯಲಾಗುತ್ತದೆ?
ಸರಿಯಾದ ಉತ್ತರ: ಇಮ್ಮಡಿ ಪುಲಿಕೇಶಿ
2. ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ ಯಾವುದು?
ಸರಿಯಾದ ಉತ್ತರ: ಗುಲ್ಬರ್ಗ್
3. ತಾಳಿಕೋಟೆ ಕದನ ನಡೆದದ್ದು ಯಾರ ನಡುವೆ?
ಸರಿಯಾದ ಉತ್ತರ: ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದವರು
4. ಮೈಸೂರು ಆಳಿದ ಯಾವ ರಾಜರ ಹೆಸರನ್ನು ಕೃಷ್ಣರಾಜಸಾಗರ ಅಣೆಕಟ್ಟಿಗೆ ಇಡಲಾಗಿದೆ?
ಸರಿಯಾದ ಉತ್ತರ: ನಾಲ್ವಡಿ ಕೃಷ್ಣರಾಜ್ ಒಡೆಯರ್
5. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಿಸಿದ ಆಧ್ಯಾತ್ಮಿಕ ನಾಯಕರು ಯಾರು?
ಸರಿಯಾದ ಉತ್ತರ: ವಿದ್ಯಾರಣ್ಯ
6. ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಯಾರ ಕಾಲದಲ್ಲಿ ಸೇವೆಯನ್ನು ಸಲ್ಲಿಸಿದರು?
ಸರಿಯಾದ ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್
7. ಕೃಷ್ಣರಾಜಸಾಗರದಲ್ಲಿ ಬೃಂದಾವನ ಉದ್ಯಾನಗಳ ನಿರ್ಮಾಣಕ್ಕೆ ಕಾರಣರಾದ ಮೈಸೂರಿನ ದಿವಾನರು ಯಾರು?
ಸರಿಯಾದ ಉತ್ತರ: ಮಿರ್ಜಾ ಇಸ್ಮಾಯಿಲ್
8. ನವ ಮೈಸೂರು ರಾಜ್ಯದ ಮೊದಲ ಮುಖ್ಯ ಮುಖ್ಯಮಂತ್ರಿ ಯಾರು?
ಸರಿಯಾದ ಉತ್ತರ: ಕೆ.ಸಿ.ರೆಡ್ಡಿ
9. ಚಾಳುಕ್ಯರ ಸೈನ್ಯವು ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು?
ಸರಿಯಾದ ಉತ್ತರ: ಕರ್ಣಾಟ ಬಲ
10. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನ ನಡೆದ ವರ್ಷ ಯಾವುದು?
ಸರಿಯಾದ ಉತ್ತರ: 1924
ಇವುಗಳನ್ನೂ ಓದಿ
11. ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಲೋಕ ಪ್ರಚಲಿತವಾಗಿರುವ ಸತ್ಯಾಗ್ರಹ ನಡೆದ ಸ್ಥಳ ಯಾವುದು?
ಸರಿಯಾದ ಉತ್ತರ: ವಿದುರಾಶ್ವತ್ಥ
12. ಯಾವ ಚಾಳುಕ್ಯ ಪಟ್ಟಣವು ದೇವಾಲಯಗಳ ತೊಟ್ಟಿಲು ಎಂದು ಕರೆಯಲಾಗಿದೆ?
ಸರಿಯಾದ ಉತ್ತರ: ಐಹೊಳೆ
13. ಐಹೊಳೆ ಶಾಸನದ ಕರ್ತೃ ಯಾರು?
ಸರಿಯಾದ ಉತ್ತರ: ರವಿಕೀರ್ತಿ
14. ಚಾಲುಕ್ಯ ವಂಶದ ಸ್ಥಾಪಕರು ಯಾರು?
ಸರಿಯಾದ ಉತ್ತರ: ರಾಜ ಜಯಸಿಂಹ
15. ಬಾದಾಮಿ ಚಾಲುಕ್ಯರು ಘೋಷಿಸಿದ ಕಲಾಶೈಲಿ ಯಾವುದು?
ಸರಿಯಾದ ಉತ್ತರ: ವೇಸರ ಶೈಲಿ
16. ಪ್ರಪಂಚದಾದ್ಯಂತ ಚಲಾವಣೆಯಲ್ಲಿದ್ದ ವಿಜಯನಗರದ ನಾಣ್ಯಗಳನ್ನು ಏನೆಂದು ಕರೆಯುತ್ತಿದ್ದರು?
ಸರಿಯಾದ ಉತ್ತರ: ವರಾಹ ಅಥವಾ ಪಗೋಡ
17. ಕೃಷ್ಣದೇವರಾಯನ ರಾಜಗುರು ಯಾರು?
ಸರಿಯಾದ ಉತ್ತರ: ವ್ಯಾಸರಾಜ
18. ಹಿಂದೂಸ್ಥಾನ ಸೇವಾದಳದ ಸ್ಥಾಪಕರು ಯಾರು?
ಸರಿಯಾದ ಉತ್ತರ: ಎನ.ಎಸ್ ಹರ್ಡೀಕರ್
19. ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?
ಸರಿಯಾದ ಉತ್ತರ: ಜನಪ್ರತಿನಿಧಿ ಸರ್ಕಾರಕ್ಕಾಗಿ ಚಳುವಳಿ
20. 1946ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
ಸರಿಯಾದ ಉತ್ತರ: ಮುಂಬೈ
No comments:
Post a Comment