Today Top-10 General Knowledge Question Answers with Explanation in Kannada for All Competitive Exams-03
ಸರಿಯಾದ ಉತ್ತರ : ಎ. ಬೆಂಗಳೂರು
ವಿವರಣೆ : 'ಸಿಲಿಕಾನ್ ವ್ಯಾಲಿ' ಎನ್ನುವುದು ಅಮೇರಿಕದಲ್ಲಿನ ಸ್ಯಾನ್‌ಫ್ರಾನ್ಸಿಸ್ಕೋ ಸಾಫ್ಟ್‌ವೇರ್ ಕಂಪನಿಗಳ ಕಂಪ್ಯೂಟರ್‌ನ ಬಹುಮುಖ್ಯ ಭಾಗಗಳಾದ ಇಂಟಿಗ್ರೇಟೆಡ್ ಚಿಪ್‌ಗಳ ತಯಾರಿಕೆಯಲ್ಲಿ 'ಸಿಲಿಕಾನ್' ಎಂಬ ಅಲೋಹವನ್ನು ಬಳಸುತ್ತಾರೆ. ಆದ್ದರಿಂದ ಈ ಸ್ಥಳಕ್ಕೆ ಸಿಲಿಕಾನ್ ವ್ಯಾಲಿ ಎಂಬ ವಿಶೇಷ ಹೆಸರು ಬಂದಿದೆ. ಅದೇ ರೀತಿ ಕರ್ನಾಟಕದ ಬೆಂಗಳೂರನ್ನು ಭಾರತದ 'ಸಿಲಿಕಾನ್ ವ್ಯಾಲಿ', 'ಸಿಲಿಕಾನ್ ಸಿಟಿ' ಎಂದು ಕರೆಯುವರು. ಭಾರತದಲ್ಲಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳು ನಮ್ಮ ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.
ಸರಿಯಾದ ಉತ್ತರ: ಬಿ. ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು
ವಿವರಣೆ : ಮಾಚ್ 21 ಹಾಗೂ ಸೆಪ್ಟೆಂಬರ್ 23ರಂದು ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮವಾಗಿರುತ್ತವೆ. ಈ ದಿನದಲ್ಲಿ ಸೂರ್ಯನ ನೇರವಾದ ಕಿರಣಗಳು ಸಮಭಾಜಕ ವೃತ್ತದ ಮೇಲೆ ಬೀಳುತ್ತವೆ. ಇವುಗಳನ್ನು ಈಕ್ವಿನಾಕ್ಸ್ ಎನ್ನುವರು.
ಸರಿಯಾದ ಉತ್ತರ : ಬಿ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸದಸ್ಯರು
ವಿವರಣೆ : ಸಂವಿಧಾನದ ಅನುಚ್ಛೇದ 66 ಉಪರಾಷ್ಟ್ರಪತಿಯ ಆಯ್ಕೆಯ ಬಗ್ಗೆ ವಿವರಿಸುತ್ತದೆ. ಭಾರತದ ಉಪ ರಾಷ್ಟ್ರಪತಿಯು ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನದ ಎಲ್ಲಾ ಸದಸ್ಯರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಆದರೆ ರಾಷ್ಟ್ರಪತಿಯವರನ್ನು ಚುನಾಯಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ಮತ್ತು ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರು ಮಾತ್ರ ಅರ್ಹರಾಗಿರುತ್ತಾರೆ.
ಸರಿಯಾದ ಉತ್ತರ : ಡಿ. ಡಾ. ಬಿ. ಆರ್. ಅಂಬೇಡ್ಕರ್
ವಿವರಣೆ : ಡಾ|| ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದ ಶಿಲ್ಪಿಯೆಂದು ಖ್ಯಾತಿಯಾಗಿದ್ದಾರೆ. ಇವರು ಭಾರತದ ಪ್ರಥಮ ಕಾನೂನು ಮಂತ್ರಿ ಹಾಗೂ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು.
ಸರಿಯಾದ ಉತ್ತರ : ಬಿ. ಡಾ. ಡಿ. ಎಂ. ನಂಜುಂಡಪ್ಪ
ವಿವರಣೆ : ಕರ್ನಾಟಕ ರಾಜ್ಯದ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದವರು. ಡಾ| ಡಿ.ಎಂ. ನಂಜುಂಡಪ್ಪನವರು ಇವರು ಖ್ಯಾತ ಅರ್ಥಶಾಸ್ತ್ರಜ್ಞರು ಇವರು ಸರ್ಕಾರದ ಆದೇಶದಂತೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯ ಬಗ್ಗೆ ವರದಿಯನ್ನು ತಯಾರಿಸಿ 2003ರಲ್ಲಿ ಸಲ್ಲಿಸಿದರು. ಇದನ್ನೇ ಹಿಂದುಳಿದ ಪ್ರದೇಶಗಳ ಡಿ. ಎಂ. ನಂಜುಂಡಪ್ಪ ಸಮಿತಿಯ ವರದಿ ಎನ್ನುವುದು.
ಸರಿಯಾದ ಉತ್ತರ : ಎ. 1995
ವಿವರಣೆ : ನಿರ್ಮಲ ಗ್ರಾಮ ಯೋಜನೆಯನ್ನು 1995ರಲ್ಲಿ ಪ್ರಾರಂಭಿಸಲಾಯಿತು. ಬಯಲು ಬಹಿರ್ದೆಸೆಯನ್ನು ನಿಷೇಧಿಸಿ ಶೌಚಾಲಯವನ್ನು ಕಟ್ಟಿಕೊಳ್ಳಲು ಸರ್ಕಾರವು ಅನುದಾನವನ್ನು ನೀಡುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ. ಇದನ್ನು ಮೊದಲು 1995ರ ಅಕ್ಟೋಬರ್ 2 ರಂದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಅಂದಿನ ಮುಖ್ಯ ಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ಉದ್ಘಾಟನೆ ಮಾಡಿದರು.
ಸರಿಯಾದ ಉತ್ತರ : ಬಿ. ಎಣ್ಣೆ ಬೀಜಗಳು
ವಿವರಣೆ : ಭಾರತವು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿದೆ. 2013-14ನೇ ಸಾಲಿನಲ್ಲಿ ಒಟ್ಟು 26.73 ಮಿಲಿಯನ್ ಟನ್‌ಗಳಷ್ಟು ಎಣ್ಣೆ ಕಾಳುಗಳನ್ನು ಉತ್ಪಾದನೆ ಮಾಡಿದೆ.
ಸರಿಯಾದ ಉತ್ತರ : ಎ. ಸ್ಯಾನ್ ಫ್ರಾನ್ಸಿಸ್ಕೋ
ವಿವರಣೆ : 1913 ರಲ್ಲಿ ಅಮೇರಿಕಾ ಮತ್ತು ಕೆನಡಾದಲ್ಲಿ ವಾಸಿಸುತ್ತಿದ್ದ ಭಾರತೀಯ ಪಂಜಾಬಿಗಳಿಂದ ಗದರ್ ಪಕ್ಷವು ಸ್ಥಾಪಿಸಲ್ಪಟ್ಟಿತು. ಇದರ ಸ್ಥಾಪನೆಯ ಮುಖ್ಯ ಉದ್ದೇಶ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡುಸುವುದಾಗಿತ್ತು. ಈ ಪಕ್ಷದ ಪ್ರಮುಖ ಸ್ಥಾಪಕ ಸದಸ್ಯರೆಂದರೆ ಲಾಲ ಹರ್ ದಯಾಳ್, ಸೋಹನ್ ಸಿಂಗ್ ಬಕ್ನಾ, ಕರ್ತಾರ್ ಸಿಂಗ್ ಮತ್ತು ರಾಸ್‌ಬಿಹಾರಿ ಬೋಸ್, ಪ್ರಪಂಚದ ಮೊದಲನೇ ಮಹಾ ಯುದ್ಧದ ನಂತರ ಇವರು ಭಾರತಕ್ಕೆ ಹಿಂದಿರುಗಿದ್ದರಿಂದ 1919ರಲ್ಲಿ ಈ ಪಕ್ಷವು ರದ್ದಾಯಿತು.
ಸರಿಯಾದ ಉತ್ತರ : ಡಿ. ರಾಡ್‌ಕ್ಲಿಫ್ ಯೋಜನೆ
ವಿವರಣೆ : ಭಾರತದ ಉಪಖಂಡವನ್ನು ವಿಭಜಿಸಲು ಹಾಗೂ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳ ಗಡಿರೇಖೆಯನ್ನು ಗುರುತಿಸಲು ಪಂಜಾಬ್ ಮತ್ತು ಬಂಗಾಳ ಗಡಿ ಆಯೋಗಗಳೆಂಬ ಎರಡು ಗಡಿ ಆಯೋಗಗಳನ್ನು ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್‌ರು 1947ರ ಜೂನ್ 30 ರಂದು ನೇಮಿಸಿದರು. ಈ ಎರಡು ಆಯೋಗಗಳಿಗೆ ಸರ್ ಸಿರಿಲ್ ರಾಡ್‌ಕ್ಲಿಫ್ ರನ್ನು ಅಧ್ಯಕ್ಷರನ್ನಾಗಿ ನೇಮಕಮಾಡಿತು. ರಾಡ್‌ಕ್ಲಿಫ್ ನು ತನಗೆ ನಿಗದಿಗೊಳಿಸಿದ್ಧ ಕಾರ್ಯವನ್ನು 1947ರ ಆಗಸ್ಟ್ 9 ರಂದು ಬಂಗಾಳದ ವರದಿಯನ್ನು ಆಗಸ್ಟ್ 11 ರಂದು ಪಂಜಾಬ್ ವರದಿಯನ್ನು ಸಿದ್ಧಪಡಿಸಿ ಮೌಂಟ್ ಬ್ಯಾಟನ್ ರವರ ಕೈಗೊಪ್ಪಿಸಿ ಆಗಸ್ಟ್ 15 ರಂದು ಬ್ರಿಟನ್‌ಗೆ ತೆರಳಿದ. 1947ರ ಆಗಸ್ಟ್ 17 ರಂದು ಈ ವರದಿಯನ್ನು ಪ್ರಕಟಿಸಲಾಯಿತು.
ಸರಿಯಾದ ಉತ್ತರ : ಸಿ. ಟಂಗ್‌ಸ್ಟನ್
ವಿವರಣೆ : ವಿದ್ಯುತ್ ಬಲ್ಪನ್ನು 1879ರಲ್ಲಿ ಥಾಮಸ್ ಆಲ್ವಾ ಎಡಿಸನ್ ಎಂಬ ವಿಜ್ಞಾನಿ ಕಂಡುಹಿಡಿದನು. ಇದರಲ್ಲಿ ಸಾಮಾನ್ಯವಾಗಿ ಬಳಸುವ ಅನಿಲ ನೈಟ್ರೋಜನ್ ಬಣ್ಣದ ಬಲ್ಪಗಳಲ್ಲಿ ಇದಕ್ಕೆ ಬದಲಿಯಾಗಿ ಜಡ ಅನಿಲಗಳಾದ ಆರ್ಗಾನ್, ನಿಯಾನ್‌ಗಳನ್ನು ತುಂಬಿಸಿರುತ್ತಾರೆ. ಟಂಗಸ್ಟನ್ (W) ಅಧಿಕ ವಿದ್ಯುತ್ ರೋಧಕತ್ವ ಹೊಂದಿರುವ ಲೋಹ. ಇದರ ಮೂಲಕ ವಿದ್ಯುತ್ ಸುಲಭವಾಗಿ ಹರಿಯುವುದಿಲ್ಲ. ಆಗ ಶಾಖ ಹೆಚ್ಚಾಗಿ, ಬೆಳಕು ಬಿಡುಗಡೆಯಾಗುತ್ತದೆ.
No comments:
Post a Comment