Today Top-10 General Knowledge Question Answers with Explanation in Kannada for All Competitive Exams-02
ಸರಿಯಾದ ಉತ್ತರ : ಡಿ. ಶಾತವಾಹನರು
ವಿವರಣೆ : ಶಾತವಾಹನರು ದಕ್ಷಿಣ ಭಾರತ ದಖನ್‌ನ ಮೊದಲ ರಾಜವಂಶವಾಗಿದೆ. ಇವರು ಚಂದ್ರಗುಪ್ತಮೌರ್ಯನ ಕಾಲದಲ್ಲಿ ಗೋದಾವರಿ, ಕೃಷ್ಣ ನದಿಗಳ ಮಧ್ಯೆ ನೆಲೆಸಿದ್ದು ಸಾಮಂತವಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿದ್ದರು. ಕ್ರಿ.ಪೂ. 220ರ ವೇಳೆಗೆ ಈ ವಂಶದ ಸಿಮುಖನು ಸ್ವತಂತ್ರನಾಗಿ ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಶಾತವಾಹನ ವಂಶದ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿ, ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತೆಂದು ನಂಬಲಾಗಿದೆ. ಈ ವಂಶದ ಕೊನೆಯ ಅರಸ ಯಜ್ಞಶ್ರೀ ಶಾತಕರ್ಣಿ.
ಸರಿಯಾದ ಉತ್ತರ: ಎ. ಗಜ
ವಿವರಣೆ : ಗಂಗರ ಕಾಲಾವಧಿ ಕ್ರಿ.ಶ. 350 ರಿಂದ ಕ್ರಿಶ. 1004-ಗಂಗ ವಂಶದ ಸ್ಥಾಪಕ ದಡಿಗ, ಈ ವಂಶವನ್ನು ಸುಮಾರು 27 ಮಂದಿ ರಾಜರು ಆಳಲ್ಪಟ್ಟರು. ಗಂಗರ ಪ್ರಸಿದ್ಧ ರಾಜ ದುರ್ವಿನೀತ ಇವರ ರಾಜಧಾನಿ ಕುವಲಾಲ, (ಈಗಿನ ಕೋಲಾರ) ತಲಕಾಡು ಮತ್ತು ಮಾನ್ಯಮರ ಆಗಿದ್ದವು. ಗಂಗರು ಜೈನ ಮತಾವಲಂಬಿಗಳಾಗಿದ್ದರು. ಆದ್ದರಿಂದ ಇವರ ಕಾಲದಲ್ಲಿ ಜೈನ ಮತವು ಹೆಚ್ಚು ಅಭಿವೃದ್ಧಿಗೆ ಬಂದಿತು. ಇವರು ಶ್ರವಣಬೆಳಗೊಳದಲ್ಲಿ 58 ಅಡಿ ಏಕಶಿಲಾ ಗೋಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪನೆಗೊಳಿಸಿ, ಅದನ್ನು ಅತ್ಯಂತ ಪ್ರಸಿದ್ಧ ಕೇಂದ್ರವನ್ನಾಗಿ ಮಾರ್ಪಡಿಸಿದರು.
ಸರಿಯಾದ ಉತ್ತರ : ಸಿ. ಮೊದಲನೆಯ ಕೃಷ್ಣ
ವಿವರಣೆ : ಮೊದಲನೆಯ ಕೃಷ್ಣ ರಾಷ್ಟ್ರಕೂಟರ ಅರಸ. ಬಾದಾಮಿ ಚಾಲುಕ್ಯರ ನಂತರ ಮಳಖೇಡದ ರಾಷ್ಟ್ರಕೂಟರು ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ದಕ್ಷಿಣ ಭಾರತದ ಇತಿಹಾಸದಲ್ಲಿ ಸ್ಮರಣೀಯರಾಗಿದ್ದಾರೆ. ಈ ವಂಶದ ಮೂಲ ದೊರೆ ಒಂದನೇ ಕರ್ಕನಾಗಿದ್ದು, ಈ ವಂಶದ ದಂತಿದುರ್ಗನು ಚಾಲುಕ್ಯರನ್ನು ಸೋಲಿಸಿ ಬಾದಾಮಿಯನ್ನು ಗೆದ್ದನು. ಇವನ ಚಿಕ್ಕಪ್ಪ ಮೊದಲನೆಯ ಕೃಷ್ಣ ಎಲ್ಲೋರದ ಕೈಲಾಸ ದೇವಾಲಯವನ್ನು ಕಟ್ಟಿಸಿದನು. ಇದು ಏಕಶಿಲೆಯ ಅದ್ಭುತವಾದ ರಚನೆ 100 ಅಡಿ ಎತ್ತರದ ಬೃಹತ್ ಕಲ್ಲಿನ ಬಂಡೆಯನ್ನು ಕೊರೆದು ದೇವಾಲಯವನ್ನು ಕಟ್ಟಲಾಗಿದೆ. ಇದು ಈಗ ಮಹಾರಾಷ್ಟ್ರದಲ್ಲಿದೆ. ರಾಷ್ಟ್ರಕೂಟರ ಇತರ ಐತಿಹಾಸಿಕ ಹೆಗ್ಗುರುತುಗಳೆಂದರೆ ಕನ್ನಡದ ಮೊದಲ ಸಾಹಿತ್ಯ ಕೃತಿ 'ಕವಿರಾಜ ಮಾರ್ಗ' ಇವರ ಕಾಲದಲ್ಲಿಯೇ ರಚನೆಯಾಯಿತು. ತ್ರಿವಿಕ್ರಮನ 'ನಳಚಂಪು' ಎಂಬ ಸಂಸ್ಕೃತ ಚಂಪೂ ಕಾವ್ಯ, ಹಲಾಯುಧನ 'ಕವಿ ಕವಿ ರಹಸ್ಯ', ಮಹಾವೀರಚಾರ್ಯನ ಗಣಿತ ಸಾರಸಂಗ್ರಹ' ಎಂಬ ಗಣಿತ ಗ್ರಂಥ, ಪಂಪನ ಆದಿಪುರಾಣ' ಮತ್ತು 'ವಿಕ್ರಮಾರ್ಜುನ ವಿಜಯ' ಮೊನ್ನನ 'ಶಾಂತಿಪುರಾಣ' ಇವರ ಕಾಲದಲ್ಲಿಯೇ ರಚಿತವಾದವು.
ಸರಿಯಾದ ಉತ್ತರ : ಡಿ. ಬಲ್ಬನ್
ವಿವರಣೆ : ಚಹಲ್ಗಾನಿಯನ್ನು ಜಾರಿಗೆ ತಂದವನು ಇಲ್ತಮಶ್. ಇವನು ದೆಹಲಿ ಸುಲ್ತಾನರ ದೊರೆ ಕುತ್ತುದ್ದೀನ್ ಐಬಕ್ನ ಗುಲಾಮನಾಗಿದ್ದು, ಗ್ವಾಲಿಯರ್‌ನ ಆಡಳಿತಗಾರನಾಗಿದ್ದನು. ಐಬಕ್‌ನ ಮರಣ ನಂತರ ಇವನು ರಾಜನಾಗಿದನು. ಇವನು ಆಡಳಿತದ ನಿರ್ವಹಣೆಗಾಗಿ ಟರ್ಕನ್-ಇ-ಚಹಲ್ಗಾನಿ ಅಥವಾ ಚಾಲೀಸ ಎಂಬ 40 ಗಣ್ಯರ ಕೂಟವನ್ನು ರಚಿಸಿದನು. ಇಲ್ತಮಶ್‌ನ ಮರಣ ನಂತರ ಅವನ ಮಗಳು ರಜಿಯಾ ಅಧಿಕಾರಕ್ಕೆ ಬಂದಳು. ಅವಳ ನಂತರ ಇಲ್ಲಮಶ್‌ನ ಕಿರಿಯ ಮಗ ನಾಸಿರ್-ಉದ್-ದೀನ್‌ನನ್ನು ಅಧಿಕಾರಕ್ಕೆ ತರಲು ನಾಗೌರನ ಪ್ರಾಂತಾಧಿಕಾರಿಯಾಗಿದ್ದ ಬಲ್ಬನ್ ಪ್ರಯತ್ನಿಸಿ ಯಶಸ್ವಿಯಾದನು. ಇವನ ಮರಣ ನಂತರ ಬಲ್ಬನ್ ಸ್ವತಃ ಪಟ್ಟಕ್ಕೆ ಬಂದನು. ಬಲ್ಬನ್ ಇಲ್ತಮಷ್‌ನು ಜಾರಿಗೆ ತಂದಿದ್ದ ಚಹಲ್ಗಾನಿ ಪದ್ಧತಿಯನ್ನು ತೆಗೆದುಹಾಕಿದನು.
ಸರಿಯಾದ ಉತ್ತರ : ಎ. ದ್ವಾರಸಮುದ್ರದ ಹೊಯ್ಸಳರು
ವಿವರಣೆ : ದ್ವಾರಸಮುದ್ರದ ಹೊಯ್ಸಳನ್ನು ಕನ್ನಡ ನಾಡನ್ನು ಆಳಿದ ಪ್ರಸಿದ್ಧ ಅರಸರು. ಈ ವಂಶದ ಸ್ಥಾಪಕ ಸಳ, ತನ್ನ ಜೈನ ಗುರು ಸುದತ್ತಾಚಾರ್ಯರು 'ಹೊಯ್ ಸಳ' ಎಂದು ಆದೇಶಿಸಲು ಸಳನು ಒಂದು ಹುಲಿಯನ್ನು ಹೊಡೆದು ಕೊಂದನು. ಗುರುವಿನ ಆಶೀರ್ವಾದದಂತೆ ಸಳನು ಹೊಯ್ಸಳ ವಂಶದ ಸ್ಥಾಪಕನಾದನೆಂದು ಹೇಳಿದೆ. ಸಳನು ಹುಲಿಯನ್ನು ಕೊಲ್ಲುವ ಚಿತ್ರವೇ ಇವರ ರಾಜ ಲಾಂಛನ, ವಿಷ್ಣುವರ್ಧನ ಈ ವಂಶದ ಪ್ರಸಿದ್ಧ ದೊರೆ. ಇವರು ನೂರಾರು ಕೆರೆಗಳನ್ನು ಕಟ್ಟಿಸಿ ಹೆಚ್ಚು ಪ್ರಸಿದ್ಧರಾದರು. ಇವರ ಕಾಲದಲ್ಲಿ ಅನೇಕ ಸಾಹಿತ್ಯ ಕೃತಿಗಳು ರಚನೆಯಾದವು. ರುದ್ರಭಟ್ಟನು 'ಜಗನ್ನಾಥ ವಿಜಯ; ಜನ್ನನು 'ಯಶೋಧರ ಚರಿತ', ಹರಿಹರನು 'ಗಿರಿಜಾ ಕಲ್ಯಾಣ', ರಾಘವಾಂಕನು "ಹರಿಶ್ಚಂದ್ರ ಕಾವ್ಯ', ಕೇಶಿರಾಜನು 'ಶಬ್ದಮಣಿ ದರ್ಪಣ'ವನ್ನು ರಚಿಸಿದನು. ರಾಮಾನುಜಾಚಾರ್ಯರೂ, ಮಧ್ವಾಚಾರ್ಯರೂ ಇದೇ ಕಾಲದಲ್ಲಿ ಅನೇಕ ಕೃತಿ ರಚನೆ ಮಾಡಿದರು.
ಸರಿಯಾದ ಉತ್ತರ : ಸಿ. ಕಾರ್ನ್‍ವಾಲಿಸ್
ವಿವರಣೆ : ವಾರನ್ ಹೇಸ್ಟಿಂಗ್ಸ್‌ನ ನಂತರ ಕಾರ್ನ್‌ವಾಲೀಸ್ (1786-93) ಭಾರತದ ಗವರ್ನರ್ ಜನರಲ್ ಆಗಿ ನೇಮಿಸಲ್ಪಟ್ಟನು.
ಇವನ ಆಡಳಿತದ ಪ್ರಮುಖ ಸುಧಾರಣೆಗಳೆಂದರೆ.
* ಕಂಪನಿಯ ನೌಕರರು ಲಂಚ ಸ್ವೀಕಾರ ಅಥವಾ ಕಾಣಿಕೆ ಸ್ವೀಕರಿಸುವುದು ಮತ್ತು ಖಾಸಗಿ ವ್ಯಾಪಾರವನ್ನ ಕೈಗೊಳ್ಳುವುದನ್ನು ರದ್ದುಗೊಳಿಸಿದನು.
* ನೌಕರರ ಸಂಬಳವನ್ನು ಏರಿಸಿದನು.
*ಭಾರತೀಯ ಸಿವಿಲ್ ಸೇವೆಗಳನ್ನು ಪ್ರಾರಂಭಿಸಿದನು.
* ಬಂಗಾಳದಲ್ಲಿ ಜಿಲ್ಲೆಗಳ ಸಂಖ್ಯೆಯನ್ನು 25 ರಿಂದ 23ಕ್ಕೆ ಇಳಿಸಿದನು.
*ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸಿದನು.
*ಶ್ರೇಣಿಕೃತ ಕೋರ್ಟ್ ವ್ಯವಸ್ಥೆಯನ್ನು ಜಾರಿಗೆ ತಂದನು.
ಸರಿಯಾದ ಉತ್ತರ : ಡಿ. ಡಫರಿನ್
ವಿವರಣೆ : ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಕ್ರಿಶ. 1885ರಲ್ಲಿ ಸ್ಥಾಪನೆಯಾಯಿತು. ನಿವೃತ್ತ ಸಿವಿಲ್ ಸರ್ವಿಸ್ ಅಧಿಕಾರಿ ಹಾಗೂ ಥಿಯೋಸೋಫಿಸ್ಟ್ ಆಗಿದ್ದ ಎ. ಓ. ಹ್ಯೂಮ್‌ರವರು ರಾಷ್ಟ್ರೀಯ ಅಭಿವೃದ್ಧಿಗಾಗಿ ಸಂಘಟಿತರಾಗಲು ವಿದ್ಯಾವಂತ ಭಾರತೀಯರಿಗೆ ಕರೆಕೊಟ್ಟರು. ಈ ಉದ್ದೇಶಕ್ಕಾಗಿ ಭಾರತ ರಾಷ್ಟ್ರೀಯ ಯೂನಿಯನ್‌ನ್ನು 1884 ರಲ್ಲಿ ಸ್ಥಾಪಿಸಿದರು. ಇದು ಭಾರತ ರಾಷ್ಟ್ರೀಯ ಕಾಂಗ್ರೇಸ್ ಆಗಿ ಕ್ರಿ.ಶ. 1885ರಲ್ಲಿ ಪರಿವರ್ತನೆಗೊಂಡಿತು. ಕಾಂಗ್ರೆಸ್‌ನ ಮೊದಲ ಅಧೀವೇಶನ ಮುಂಬೈನಲ್ಲಿ ನಡೆಯಿತು. ಇದರ ಮೊದಲ ಅಧ್ಯಕ್ಷರು. ಡಬ್ಲ್ಯುಸಿ. ಬ್ಯಾನರ್ಜಿ, ಆಗ ಭಾರತದ ವೈಸ್‌ರಾಯ್ ಆಗಿದ್ದವರು ಡಫರಿನ್.
ಸರಿಯಾದ ಉತ್ತರ : ಎ. ರಾಜ ಒಡೆಯರ್
ವಿವರಣೆ : ರಾಜ ಒಡೆಯರ್ ಮೈಸೂರು ಒಡೆಯರ್ ಸಂಸ್ಥಾನದ ಒಬ್ಬ ಪ್ರಮುಖ ರಾಜ. ಇವರ ಕಾಲ 1578- 1616, ಇವರು ನವರಾತ್ರಿ ಹಬ್ಬವನ್ನು ಪ್ರಾರಂಭಿಸಿದನು. ಕಂಠೀರವ ನರಸರಾಜ ಒಡೆಯರ ಪ್ರಮುಖ ಸಾಧನೆಗಳೆಂದರೆ:- ಇವರು ಕುಸ್ತಿ ಪಟುವಾಗಿದ್ದರು. ಇವರು ನಂಜನಗೂಡಿನಲ್ಲಿ ಶಿವಾಲಯವೊಂದನ್ನು ಕಟ್ಟಿಸಿದರು. ಚಿಕ್ಕದೇವರಾಜ ಒಡೆಯರ್‌ರವರ ಪ್ರಮುಖ ಸಾಧನೆಗಳೆಂದರೆ - ಶಿವಾಜಿಯನ್ನು ಸೋಲಿಸಿದರು. ಬೆಂಗಳೂರು ಕೋಟೆ, ಕಾವೇರಿನದಿಗೆ ಅಣೆಕಟ್ಟು ನಿರ್ಮಾಣ, ಅಠಾರ ಕಛೇರಿ ಮತ್ತು ಅಂಚೆ ಇಲಾಖೆಯನ್ನು ಪ್ರಾರಂಭಿಸಿದನು. ದೊಡ್ಡ ದೇವರಾಜ ಒಡೆಯರ್ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹಾಕಿಸಿ ಅರ್ಧದಾರಿಯಲ್ಲಿ ನಂದಿಯ ಮೂರ್ತಿಯನ್ನು ಸ್ಥಾಪಿಸಿದರು.
ಸರಿಯಾದ ಉತ್ತರ : ಬಿ. ಖಂಡಾಂತರ ದ್ವೀಪಗಳು
ವಿವರಣೆ : ಬ್ರಿಟೀಷ್ ದ್ವೀಪಗಳು ಯುನೈಟೆಡ್ ಕಿಂಗಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರದ ಐರ್‌ಲ್ಯಾಂಡ್‌ಗಳನ್ನು ಒಳಗೊಂಡಿದೆ. ಇವು ಖಂಡಾಂತರ ದ್ವೀಪಗಳು.
ಸರಿಯಾದ ಉತ್ತರ : ಸಿ. ಕೋರಮಂಡಲ ತೀರ ಪ್ರದೇಶ
ವಿವರಣೆ : ಭಾರತದ ಆಗ್ನೇಯ ದಿಕ್ಕಿನ ಸಮುದ್ರ ತೀರವನ್ನು ಕೋರಮಂಡಲ ತೀರ ಪ್ರದೇಶ ಎನ್ನುವರು. ಇದು ಅರಬ್ಬಿ ಸಮುದ್ರಕ್ಕೆ ಅಂಟಿಕೊಂಡಿದೆ. ಉಷ್ಣವಲಯದ ಚಂಡಮಾರುತಗಳಿಗೆ ಪದೇ ಪದೇ ಒಳಗಾಗಿ ಅತ್ಯಂತ ಹೆಚ್ಚು ಸಾವು ನೋವುಗಳನ್ನು ನಷ್ಟವನ್ನು ಅನುಭವಿಸುತ್ತಿರುವುದು ಕೋರಮಂಡಲ ತೀರ ಪ್ರದೇಶಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಸ್ಸಾ ರಾಜ್ಯಗಳು. ಇತ್ತೀಚೆಗೆ (2014ರಲ್ಲಿ) ಇಂತಹ ಒಂದು ಚಂಡಮಾರುತಕ್ಕೆ ಸಿಕ್ಕಿ ಆಂಧ್ರಪ್ರದೇಶ ವಿಶಾಖಪಟ್ಟಣ ಭಾರಿ ನಷ್ಟವನ್ನು ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
No comments:
Post a Comment